Webdunia - Bharat's app for daily news and videos

Install App

ವಿಶೇಷ ಪುಣ್ಯ ಪ್ರಾಪ್ತಿ...ಗುರು-ಪುಷ್ಕರಯೋಗ

Webdunia
ಗುರುವಾರ, 17 ಮೇ 2012 (16:39 IST)
PR
ಸಕಲ ಜೀವಿಗಳಿಗೆ ದೈವದತ್ತವಾದ ವರಗಳಲ್ಲಿ ನೀರು ಅತ್ಯಂತ ಶ್ರೇಷ್ಠವಾದದ್ದು. ನದಿ, ಸರೋವರಗಳು ದೇಶದ ಜೀವನಾಡಿಗಳು. ಪುರಾಣಗಳ ಪ್ರಕಾರ ತುಂದಿಲನೆಂಬ ಋಷಿ ಶಿವನನ್ನು ಕುರಿತು ತಪಸ್ಸು ಮಾಡಿ, ಶಿವನ ಅಂಶಗಳಲ್ಲಿ ಒಂದಾದ ನೀರೇ ಆಗಿ, ಪುಷ್ಕರ(ಜಲದೇವತೆ) ಎನಿಸಿಕೊಂಡರು. ಬ್ರಹ್ಮನು ಜಗತ್ತನ್ನು ಸೃಷ್ಠಿಸುವಾಗ ಈ ಪುಷ್ಕರನ ಹಾಗೂ ದೇವತೆಗಳ ಮತ್ತು ಬೃಹಸ್ಪತಿಯ(ಗುರು) ಸಹಾಯ ಪಡೆದುಕೊಂಡರು. ಬ್ರಹ್ಮ, ಪುಷ್ಕರ ಮತ್ತು ಗುರು ಈ ಮೂವರಲ್ಲಿ ಆದ ನಿಯಮಿತ ಒಪ್ಪಂದದಂತೆ, ಗುರು ಗ್ರಹವು ನಿರ್ದಿಷ್ಟವಾದ ರಾಶಿಗಳನ್ನು ಪ್ರವೇಶಿಸಿದಾಗ, ಪವಿತ್ರವಾದ ಹನ್ನೆರೆಡು ನದಿಗಳಲ್ಲಿ, ಒಂದೊಂದು ನದಿ ಪುಷ್ಕರವಾಗುತ್ತದೆ.

ಗುರು ಒಂದು ರಾಶಿಯಿಂದ, ಇನ್ನೊಂದು ರಾಶಿಗೆ ಪ್ರವೇಶಿಸಿದಾಗ, ನಿರ್ದಿಷ್ಟಪಡಿಸಿದ ನದಿ, ಸಕಲ ದೇವತೆಗಳ ಶಕ್ತಿಯನ್ನು ಪಡೆದುಕೊಂಡು ಪುಷ್ಕರವಾಗುತ್ತದೆ. ಪುಷ್ಕರವಾದ ನದಿಗೆ ದೈವೀಶಕ್ತಿಯ ಅವಧಿ ಹನ್ನೆರೆಡು ದಿವಸಗಳವರೆಗೆ ಇರುತ್ತದೆ. ಪುಷ್ಕರವಾದ ನದಿಯಲ್ಲಿ ಹನ್ನೆರೆಡು ದಿವಸಗಳೊಳಗೆ ಪುಣ್ಯ ಸ್ನಾನ ಮಾಡಿದವರಿಗೆ ಅತ್ಯಂತ ವಿಶೇಷವಾದ ಪುಣ್ಯ ಪ್ರಾಪ್ತಿಯಾಗುತ್ತದೆ.

ಗುರು ಗ್ರಹವು, ಮೇಷ ರಾಶಿಗೆ ಪ್ರವೇಶಿಸಿದಾಗ, ಗಂಗಾ ನದಿ ಪುಷ್ಕರವಾಗುತ್ತದೆ. ವೃಷಭ ರಾಶಿಗೆ ಗುರು ಪ್ರವೇಶಿಸಿದಾಗ, ನರ್ಮದಾ ನದಿ ಪುಷ್ಕರವಾಗುತ್ತದೆ. ಮಿಥುವ ರಾಶಿಗೆ ಪ್ರವೇಶಿಸಿದಾಗ, ಸರಸ್ವತಿ ನದಿ ಪುಷ್ಕರವಾಗುತ್ತದೆ. ಕಟಕ ರಾಶಿಗೆ ಪ್ರವೇಶಿಸಿದಾಗ, ಯಮುನಾ ನದಿ ಪುಷ್ಕರವಾಗುತ್ತದೆ. ಸಿಂಹ ರಾಶಿಗೆ ಪ್ರವೇಶಿಸಿದಾಗ, ಗೋದಾವರಿ ನದಿ ಪುಷ್ಕರವಾಗುತ್ತದೆ. ಕನ್ಯಾ ರಾಶಿಗೆ ಪ್ರವೇಶಿಸಿದಾಗ, ಕೃಷ್ಣಾ ನದಿ ಪುಷ್ಕರವಾಗುತ್ತದೆ. ತುಲಾ ರಾಶಿಗೆ ಪ್ರವೇಶಿಸಿದಾಗ, ಕಾವೇರಿ ನದಿ ಪುಷ್ಕರವಾಗುತ್ತದೆ. ವೃಶ್ಚಿಕ ರಾಶಿಗೆ ಪ್ರವೇಶಿಸಿದಾಗ, ತಾಮ್ರಪಣೀರ್ ನದಿ ಪುಷ್ಕರವಾಗುತ್ತದೆ. ಧನಸ್ಸು ರಾಶಿಗೆ ಪ್ರವೇಶಿಸಿದಾಗ, ಸಿಂಧೂ ನದಿ ಪುಷ್ಕರವಾಗುತ್ತದೆ. ಮಕರ ರಾಶಿಗೆ ಪ್ರವೇಶಿಸಿದಾಗ, ತುಂಗಭದ್ರಾ ನದಿ ಪುಷ್ಕರವಾಗುತ್ತದೆ. ಕುಂಭ ರಾಶಿಗೆ ಪ್ರವೇಶಿಸಿದಾಗ, ಭೀಮಾ ನದಿ ಪುಷ್ಕರವಾಗುತ್ತದೆ. ಮೀನ ರಾಶಿಗೆ ಪ್ರವೇಶಿಸಿದಾಗ, ತಪತೀ ನದಿ ಪುಷ್ಕರವಾಗುತ್ತದೆ.

ಗುರು ಮೇ 17ರಂದು ಭಾರತೀಯ ಕಾಲಮಾನ ಬೆಳಿಗ್ಗೆ 9 ಗಂಟೆ 34 ನಿಮಿಷಕ್ಕೆ ವೃಷಭ ರಾಶಿಗೆ ಪ್ರವೇಶಿಸಿದ್ದಾನೆ. ಈ ಸಂದರ್ಭದಲ್ಲಿ ನರ್ಮದಾ ನದಿ ಎಲ್ಲಾ ದೇವತೆಗಳ ಶಕ್ತಿಯನ್ನು ಪಡೆದುಕೊಂಡು ಪುಷ್ಕರವಾಗುತ್ತದೆ. ಈ ದೈವೀ ಶಕ್ತಿಯ ಅವಧಿ 12 ದಿವಸಗಳು. ನರ್ಮದಾ ನದಿ ಹಿಂದೂ ಸಂಸ್ಕೃತಿಯಲ್ಲಿ ಅತಿ ಪವಿತ್ರ ಸ್ಥಾನವನ್ನು ಹೊಂದಿದೆ.

ಭಾರತದ ಸಪ್ತ ಪುಣ್ಯ ನದಿಗಳಲ್ಲಿ ನರ್ಮದಾ ಸಹ ಒಂದು. ನರ್ಮದಾ ನದಿಯ ಪ್ರದಕ್ಷಿಣೆ ಒಂದು ಅತಿ ಪಾವನಕಾಯಕವೆಂದು ಪರಿಗಣಿಸಲ್ಪಟ್ಟಿದೆ. ಮಧ್ಯ ಪ್ರದೇಶದ ಅಮರಕಂಟಕ ಬೆಟ್ಟದ ನರ್ಮದಾ ಕುಂಡ ಎಂದು ಹೆಸರಾಗಿರುವ ಒಂದು ಸಣ್ಣ ಕುಂಡದಿಂದ ಉಗಮಿಸಿ ನರ್ಮದಾ ನದಿ ಮುಂದೆ ಸುಮಾರು 1912 ಕಿ.ಮೀ ಗಳಷ್ಟು ದೂರ ಪಶ್ಚಿಮಾಭಿಮುಖವಾಗಿ ಹರಿದು ಗುಜರಾತ್ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಈ ಪುಷ್ಕರ ಅವಧಿಯಲ್ಲಿ ನರ್ಮದಾ ನದಿಯಲ್ಲಿ ಸ್ನಾನ ಮಾಡುವುದರಿಂದ ಅತ್ಯಂತ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ. ಪುನಃ ಈ ಪುಣ್ಯ ಸ್ನಾನಕ್ಕಾಗಿ 12 ವರ್ಷ ಕಾಯಬೇಕಾಗುತ್ತದೆ.


ಆರ್ ಸೀತಾರಾಮಯ್ಯ
ಜ್ಯೋತಿಷ್ಕರು
ಕಮಲ 5ನೇ ಕ್ರಾಸ್, ಬಸವನಗುಡಿ,
ಶಿವಮೊಗ್ಗ.
ಮೊ. 9449048340.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments