Webdunia - Bharat's app for daily news and videos

Install App

ಮದುವೆ ಓಕೆ... ಮಹೂರ್ತ ಯಾಕೆ ?

Webdunia
ಶುಕ್ರವಾರ, 11 ಅಕ್ಟೋಬರ್ 2013 (18:27 IST)
PR
ಪರಮೇಶ್ವರ್ ಶೃಂಗೇರಿ

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ಮಂಗಳಮಯವಾದ ಸಂಸ್ಕಾರ.ಗುರುಹಿರಿಯರು ಪ್ರಾಪ್ತವಯಸ್ಸಿಗೆ ಬಂದ ತಮ್ಮ ವರನಿಗೆ ಸೂಕ್ತವಾದ ವಧುವನ್ನು ಅನ್ವೇಷಿಸಿ ಸುಂದರ ದಾಂಪತ್ಯ ಜೀವನ ನಡೆಸಲೆಂಬ ಸದಾಶಯದೊಂದಿಗೆ ವಧು-ವರರಿಗೆ ಬಾಂಧವ್ಯ ಬೆಸೆಯುವ ಸುಮಧುರವಾದ ಕ್ಷಣ.

PR
ಇಂತಹ ಸುಮಧುರವಾದ ಕ್ಷಣವು ಜೀವನಪರ್ಯಂತ ಸುಖವನ್ನು ನೀಡುವಂತೆ ಮಾಡಿ, ಪರಸ್ಪರ ಅರಿಯುವಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ‘ ವಿವಾಹ ಸಮಯ’ ವನ್ನು ನಿಗದಿಮಾಡಲಾಗುತ್ತದೆ.

ಸಾಮಾನ್ಯವಾಗಿ ಸಪ್ತಮಸ್ಥಿತಿ, ಗ್ರಹದೆಸೆ,ಅಥವಾ ಸಪ್ತಮವನ್ನು ವೀಕ್ಷಿಸುವ ಗ್ರಹದೆಸೆ ಸಪ್ತಮಾದಿ ಪತಿಯ ದಶಾ ಭುಕ್ತಿಯಕಾಲಗಳು,ಲಗ್ನಾಧಿಪತಿಯು ಸಪ್ತಮಭಾವದಲ್ಲಿ ಸಂಚರಿಸುವಾಗ ಶುಕ್ರ ಮತ್ತು ಸಪ್ತಮಾಧಿಪತಿ ಗೋಚಾರದಲ್ಲಿ ಲಗ್ನಾಧಿಪತಿ ಸ್ಥಿತರಾಶಿ ಮತ್ತು ಅದರ ನವಾಂಶ ತ್ರಿಕೋಣದಲ್ಲಿ ಸಂಚರಿಸುವಾಗ ವಿವಾಹ ಸಮಯವನ್ನು ನಿಷ್ಕರ್ಷಿಸುತ್ತಾರೆ.

PR
ಇಷ್ಟಲ್ಲದೇ ಸಪ್ತಮಾಧಿಪತಿಯ ದೆಸೆ ಮತ್ತು ಸಪ್ತಮಸ್ಥಾನದಲ್ಲಿರುವ ಗ್ರಹಗಳ ಅಂತರ್ದೆಸೆ ಶುಕ್ರಯುಕ್ತನಾಗಿರುವ ಸಪ್ತಮಾಧಿಪತಿಯು ದಶಾಭುಕ್ತಿ,ಸಪ್ತಮಾಧಿಪತಿಯ ಮೇಲೆ ಗುರುಸಂಚಾರ ಮಾಡುವ ಕಾಲದಲ್ಲಿ ಅಥವಾ ಸಪ್ತಮಾಧಿಪತಿಯು ಯಾವ ನಕ್ಷತ್ರದಲ್ಲಿರುತ್ತಾನೋ, ಆ ದಶಾ ನಕ್ಷತ್ರಗಳ ಮೇಲೆ ಗುರು ಸಂಚಾರ ಮಾಡುವ ಕಾಲದಲ್ಲಿ, ವಿವಾಹ ಸಮಯವನ್ನು ನಿಷ್ಕರ್ಷಿಸುತ್ತಾರೆ.

ದಶಾನಕ್ಷತ್ರದಲ್ಲಿ ಗುರು ಸಂಚಾರದ ಸಮಯದಲ್ಲಿ ಶುಕ್ರನಿಗೆ 1-5-7 ಸ್ಥಾನಗಳಲ್ಲಿ ಗುರುಸಂಚರಿಸುವ ಕಾಲದಲ್ಲಿ ಗುರುಲಗ್ನಕ್ಕೆ2-7 ರಲ್ಲಿ ಸಂಚರಿಸುವಾಗ ದ್ವಿತೀಯ,ಸಪ್ತಮಾದಿಪತಿಗಳ ದಶಾಭುಕ್ತಿಯ ಪ್ರಕಾರ ನಿಶ್ಚಯಿಸಬಹುದಾಗಿದೆ. ಲಗ್ನಕ್ಕೆ 2-7-11 ರಲ್ಲಿರುವ ಗ್ರಹ ಮತ್ತು ಈ ಗ್ರಹ ನಕ್ಷತ್ರಗಳಲ್ಲಿರುವ ಗ್ರಹಗಳು ಕಾರಕರಾಗಿರುತ್ತಾರೆ. ಇದು ಅತ್ಯಂತ ಪ್ರಶಸ್ತ.ಲಗ್ನಕ್ಕೆ 2-7-11ರಲ್ಲಿರುವ ನಕ್ಷತ್ರಗಳಲ್ಲಿ ಯಾವಗ್ರಹವೂ ಇಲ್ಲದಿದ್ದರೆ ಆ ಗ್ರಹಗಳೇ ಕಾರಕರಾಗಿರುತ್ತಾರೆ.

ಇದು ಮಧ್ಯಮ.ಲಗ್ನಕ್ಕೆ 2-7-11 ರಲ್ಲಿ ಯಾವ ಗ್ರಹಗಳೂ ಇಲ್ಲದಿದ್ದ ಪಕ್ಷದಲ್ಲಿ ಆ ಭಾವಾಧಿಪತಿಗಳೇ ಕಾರಕರಾಗುತ್ತಾರೆ. ಇದು ಸಾಮಾನ್ಯ ಬಲ ಎಂದೆನಿಸಿಕೊಳ್ಳುತ್ತದೆ. ಒಂದೊಮ್ಮೆ ಇವೆಲ್ಲವನ್ನು ಗಣನೆಗೆ ತೆಗೆದುಕೊಳ್ಳದಿದ್ದಲ್ಲಿ ಅಮಂಗಲ ನಿಶ್ಚಿತ. ಹಾಗಾಗಿ ಇಂದಿನ ಸಂದರ್ಭದಲ್ಲಿ ವಿವಾಹವಾಗಿ ಕೆಲವೇ ದಿನಗಳಲ್ಲಿ ವಿಚ್ಛೇದನದಂತಹ ಪ್ರಕರಣವನ್ನು ತಪ್ಪಿಸಲು ಹಾಗೂ ಸುಖಮಯ ದಾಂಪತ್ಯ ಜೀವನವನ್ನು ನಡೆಸಲು ಈ ‘ವಿವಾಹಸಮಯ’ ಕಂಡುಕೊಂಡು ಮುಂದುವರೆದಲ್ಲಿ, ಮುಂದೆ ಬರಬಹುದಾದ ಎಲ್ಲಾ ದಾಂಪತ್ಯ ತೊಂದರೆ ತೊಡಕುಗಳನ್ನು ನಿವಾರಿಸಿಕೊಂಡು ಹೋಗಬಹುದಾಗಿದೆ. ಹಾಗಾಗಿ ಮದುವೆಯಾಗುವ ಮುನ್ನ ಜಾತಕ ಪರಿಶೀಲನೆಗಾಗಿ ಜ್ಯೋತಿಷಿಗಳಲ್ಲಿ ಮೊರೆ ಹೋಗುವುದು ಸೂಕ್ತ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments