Webdunia - Bharat's app for daily news and videos

Install App

ಫೆ.23ರ 'ಗ್ರಹ'ಚಾರ: ಕಾದಿದೆ ಭಾರೀ ವೈಪರೀತ್ಯ!

Webdunia
WD
ಎಂಜಿಆರ್ ಪತನ, ಮನಮೋಹನ್ ಸಿಂಗ್ ಏಳಿಗೆ ಮುಂತಾಗಿ ನಿಖರವಾದ ಭವಿಷ್ಯ ನುಡಿದಿದ್ದ ಜ್ಯೋತಿಷಿಯೊಬ್ಬರು, ಫೆಬ್ರವರಿ 23ರಂದು ದೇಶದಲ್ಲಿ ಭಾರೀ ದೊಡ್ಡ ಋಣಾತ್ಮಕ ಬದಲಾವಣೆಗಳು ಘಟಿಸಲಿವೆ ಎಂದು ಎಚ್ಚರಿಸಿದ್ದಾರೆ. ಅಂದು ಮಕರ ರಾಶಿಯ ತಾರಾಪುಂಜದಲ್ಲಿ ಸೂರ್ಯ, ಮಂಗಳ, ಬುಧ, ಗುರು, ಯುರೇನಸ್ ಮತ್ತು ಚಂದ್ರ ಗ್ರಹಗಳ ಅಸಹಜವಾದ ಸಂಯೋಗದ ಪರಿಣಾಮವಾಗಿ ಭಾರತದ ರಾಜಕೀಯದಲ್ಲಿ ಕೋಲಾಹಲವಾಗಲಿದೆ, ಶೇರು ಮಾರುಕಟ್ಟೆ ಏರುಪೇರಾಗಲಿದೆ ಮತ್ತು ರಿಯಲ್ ಎಸ್ಟೇಟ್ ಬೆಲೆಗಳು ಪ್ರಪಾತಕ್ಕಿಳಿಯಲಿದೆ ಎಂದು 77ರ ಹರೆಯದ ನಿವೃತ್ತ ಕೇಂದ್ರ ಸರಕಾರಿ ಅಧಿಕಾರಿ ಆರ್.ನಾರಾಯಣ್ ಹೇಳಿದ್ದಾರೆ.

ಭಾರತ-ಪಾಕ್ ಯುದ್ಧ, ಐಟಿ ಉದ್ಯೋಗಿಗಳಿಗೆ ಸಂಚಕಾರ
ಈ ಅಪರೂಪದ ವಿದ್ಯಮಾನದಿಂದಾಗಿ ಭೂಮಿಯ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳು ಧಾರಾಳವಾಗಿ ಆಗಲಿದೆ. ಇಸ್ರೇಲ್, ಜೋರ್ಡಾನ್ ಮತ್ತು ಇರಾನ್ ಒಳಗೊಂಡ ಮಧ್ಯಪೂರ್ವದಲ್ಲಿ ಯುದ್ಧದ ಲಕ್ಷಗಳು ಗೋಚರಿಸುತ್ತವೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಕೂಡ ಯುದ್ಧ ಸನ್ನಿಹಿತವಾಗುತ್ತದೆ. ಭಾರತದ ರಾಜಕೀಯ ಮುಖಂಡರಿಗೆ ಅನಾರೋಗ್ಯ ಕಾಡಲಿದೆ ಮತ್ತು ಅಮೆರಿಕ, ಬ್ರಿಟನ್ ಹಾಗೂ ಮಧ್ಯಪೂರ್ವ ರಾಷ್ಟ್ರಗಳಲ್ಲಿನ ಐಟಿ ಉದ್ಯಮದಲ್ಲಿರುವ ಭಾರತೀಯರು ತವರಿಗೆ ಮರಳಲಿದ್ದಾರೆ ಎಂದು ಚೆನ್ನೈ ಮೂಲದ ನಾರಾಯಣ್ ನುಡಿದಿರುವುದಾಗಿ ಡಿಎನ್ಎ ವರದಿ ಮಾಡಿದೆ.

ಪ್ರಾಕೃತಿಕ ಉತ್ಪಾತಗಳು
ಭಾರತ ಮತ್ತು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆಯಲಿದ್ದು, ಹಿಮಾಲಯ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಭಾರತದ ದಕ್ಷಿಣದ ರಾಜ್ಯಗಳು, ಅಫ್ಘಾನಿಸ್ತಾನ, ಲಾಸ್ ಏಂಜಲೀಸ್, ಐವರಿ ಕೋಸ್ಟ್, ಆಫ್ರಿಕಾ, ಜಪಾನ್ ಮತ್ತು ಜಕಾರ್ತದಲ್ಲಿ ಭೂಕಂಪ ಮುಂತಾದ ಪ್ರಾಕೃತಿಕ ವಿಕೋಪಗಳು ಸಂಭವಿಸಲಿವೆ ಎಂದಿದ್ದಾರೆ ಅವರು.

ನಾರಾಯಣ್ ಕುಟುಂಬವೇ ಜ್ಯೋತಿಷ್ಯ ಮನೆತನದ್ದಾಗಿದ್ದು, ರಾಮನಾಡ್ (ರಾಮನಾಥಪುರಂ) ರಾಜರ ಆಸ್ಥಾನದಲ್ಲಿ ಅವರ ಪೂರ್ವಜರಿಗೆ ಭಾರೀ ಬೇಡಿಕೆಯಿತ್ತು. ತಮ್ಮ ತಂದೆ ಒಬ್ಬ ಶಿಕ್ಷಕನಾಗಿದ್ದು, (ಮಾಜಿ ರಾಷ್ಟ್ರಪತಿ) ಅಬ್ದುಲ್ ಕಲಾಂಗೆ ತಮ್ಮ ಮನೆಯಲ್ಲೇ ಆಶ್ರಯ ನೀಡಿ, ಅವರನ್ನು ಬೆಳೆಸಿದ್ದರು ಎಂದು ನಾರಾಯಣ್ ವಿವರಿಸಿದ್ದಾರೆ. 'ನನ್ನ ತಂದೆಗೆ ಜ್ಯೋತಿಷ್ಯ ಮುಖ್ಯವಾಗಿರಲಿಲ್ಲ. ಅವರು ಶಿಕ್ಷಣಕ್ಕೇ ಹೆಚ್ಚು ಒತ್ತು ನೀಡುತ್ತಿದ್ದರು. ಆದರೆ ದೇವರ ದಯೆಯಿಂದಲೋ ಏನೋ, ನಾನು 24ರ ಹರೆಯದವನಾಗಿದ್ದಾಗ ತಲೆಗೆ ಏಟು ಬಿದ್ದು, ಆ ಬಳಿಕ ನನಗೆ ವಿಶಿಷ್ಟ ಮತ್ತು ಅಸಾಮಾನ್ಯ ಗ್ರಹಿಕಾ ಸಾಮರ್ಥ್ಯ ಬಂತು. ಅಂದಿನಿಂದ ಜ್ಯೋತಿಷ್ಯ ವಿಜ್ಞಾನದ ಆಧಾರದಲ್ಲಿ ನಾನು ಭವಿಷ್ಯ ನುಡಿಯುವಲ್ಲಿ ಸಫಲನಾದೆ' ಎಂದಿದ್ದಾರೆ ಅವರು.

ಈ ಏಟಿನಿಂದಾಗಿ ನಾರಾಯಣ್ ಅವರು ಸುಮಾರು 20 ದಿನಗಳ ಕಾಲ ರಾಮನಾಥಪುರಂ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದರು. 'ನನಗೆ ಪ್ರಜ್ಞೆ ಮರಳಿದಾಗ, ನನ್ನ ಶಸ್ತ್ರಚಿಕಿತ್ಸೆ ನೆರವೇರಿಸಬೇಕಾಗಿದ್ದ ತಜ್ಞ ವೈದ್ಯರಿಗೆ ಭಾರೀ ಅಪಾಯವೊಂದು ಕಾದಿದೆ ಎಂಬುದು ನನ್ನ ಅರಿವಿಗೆ ಬಂದಿತು. ನಾನು ಈ ಬಗ್ಗೆ ಆ ಡಾಕ್ಟರಿಗೆ ಹೇಳಿದೆ. ಆದರೆ ತಲೆಗೆ ಬಿದ್ದ ಏಟಿನಿಂದಾಗಿ ಈತ ಈ ರೀತಿ ಹೇಳುತ್ತಿದ್ದಾನೆ ಎನ್ನುತ್ತಾ ವೈದ್ಯರು ಅದನ್ನು ನಿರ್ಲಕ್ಷಿಸಿದರು. ದುರದೃಷ್ಟಕರವಾಗಿ, ಮರುದಿನ ಬೆಳಿಗ್ಗೆ ಇದೇ ವೈದ್ಯರು ಭಾರಿ ಹೃದಯಾಘಾತದಿಂದ ಕುಸಿದರು ಎಂಬುದು ತಿಳಿಯಿತು' ಎಂದು ವಿವರಿಸಿದ್ದಾರೆ ಅವರು.

ನಾರಾಯಣ್‌ಗೆ ಕಾರ್ಪೊರೇಟ್ ವಲಯದಲ್ಲಿ ಭರ್ಜರಿ ಅನುಯಾಯಿಗಳಿದ್ದಾರೆ. ಹೆಸರುಗಳು, ಲೋಗೋಗಳ ಬಗೆಗೂ ಹೆಚ್ಚಿನ ಕಾರ್ಪೊರೇಟ್ ಕಂಪನಿಗಳು ಅವರ ಸಲಹೆ ಕೇಳುತ್ತವಂತೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments