Select Your Language

Notifications

webdunia
webdunia
webdunia
webdunia

ಜೂನ್ 15 ರಂದು ಪೂರ್ಣ ಚಂದ್ರಗ್ರಹಣ

ಜೂನ್ 15 ರಂದು ಪೂರ್ಣ ಚಂದ್ರಗ್ರಹಣ
, ಮಂಗಳವಾರ, 14 ಜೂನ್ 2011 (16:11 IST)
PIB
ಇದೇ ಜೂನ್ 15 ರಂದು ಬುಧವಾರ ರಾತ್ರಿ ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ
ಈ ಗ್ರಹಣವು ಭಾರತೀಯ ಕಾಲಮಾನ ರಾತ್ರಿ 11 ಗಂಟೆ 52 ನಿಮಿಷ 56 ಸೆಕೆಂಡಿಗೆ, ಸ್ಪರ್ಶಕಾಲ ಪ್ರಾರಂಭವಾಗುತ್ತದೆ. ಗ್ರಹಣದ ಪರಿಪೂರ್ಣತೆಯು ರಾತ್ರಿ 12 ಗಂಟೆ 52 ನಿಮಿಷ 30 ಸೆಕೆಂಡಿಗೆ ಪ್ರಾರಂಭವಾಗುತ್ತದೆ. ಪೂರ್ಣ ಚಂದ್ರಗ್ರಹಣ ರಾತ್ರಿ 1 ಗಂಟೆ 42 ನಿಮಿಷ 30 ಸೆಕೆಂಡಿಗೆ ಕಂಡುಬರುತ್ತದೆ ರಾತ್ರಿ 2 ಗಂಟೆ 32 ನಿಮಿಷ 42 ಸೆಕೆಂಡಿಗೆ ಪೂರ್ಣ ಚಂದ್ರಗ್ರಹಣ ದೃಶ್ಯ ಮುಗಿದು, ಮೋಕ್ಷ ಹೊಂದುತ್ತಾ ಮುಂದುವರೆದು, 3 ಗಂಟೆ 32 ನಿಮಿಷ 15 ಸೆಕೆಂಡಿಗೆ ಮೋಕ್ಷ ಉಂಟಾಗುತ್ತದೆ. ಗ್ರಹಣದ ಒಟ್ಟು ಕಾಲ 3 ಗಂಟೆ 39 ನಿಮಿಷ 19 ಸೆಕೆಂಡುಗಳು. ಪೂರ್ಣ ಗ್ರಹಣದ ಪರಿಪೂರ್ಣತೆಯ ಅವಧಿ 1 ಗಂಟೆ 40 ನಿಮಿಷ 13 ಸೆಕೆಂಡುಗಳು. ಗ್ರಹಣದ ಗ್ರಾಸ ಪ್ರಮಾಣ 2.6868 ರಷ್ಟಿರುತ್ತದೆ. ಭಾರತದ ಎಲ್ಲಾ ಭಾಗಗಳಲ್ಲೂ ಪೂರ್ಣ ಚಂದ್ರ ಗ್ರಹಣ ಗೋಚರಿಸುತ್ತದೆ.

ಈ ಗ್ರಹಣದ ವಿಶೇಷವೇನೆಂದರೆ ಗ್ರಹಣದ ಪ್ರಾರಂಭದಲ್ಲಿ ಚಂದ್ರ ಬೂದು ಬಣ್ಣಕ್ಕಿರುತ್ತದೆ. ಕ್ರಮೇಣ ಕಪ್ಪಾಗುತ್ತದೆ. ಗ್ರಹಣದ ಪರಿಪೂರ್ಣತೆಯ ಅವಧಿಯಲ್ಲಿ, ತಾಮ್ರ ಬಣ್ಣವಾಗುತ್ತದೆ. ಚಂದ್ರ ಗ್ರಹಣದಲ್ಲಿ ಸೂರ್ಯನ ಬೆಳಕನ್ನು ಚಂದ್ರನಿಗೆ ತಲುಪದಂತೆ ಭೂಮಿ ತಡೆಯುತ್ತದೆ. ಸೂರ್ಯನ ಬೆಳಕನ್ನು ಭೂಮಿಯ ವಾತಾವರಣ ಚದುರಿಸಿದಾಗ ಕೆಂಪು ಬಣ್ಣದ ಬೆಳಕು ಮಾತ್ರ ಚಂದ್ರನನ್ನು ತಲುಪಿ, ಪೂರ್ಣ ಗ್ರಹಣದಲ್ಲೂ ಚಂದ್ರ ಕೆಂಪಗೆ ಕಾಣಿಸುತ್ತಾನೆ. ಈ ಪ್ರಕೃತಿಯ ಸೊಬಗನ್ನು ನೋಡುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಬರಿಗಣ್ಣಿನಿಂದ ನೋಡಬಹುದು. ಪ್ರತಿಯೊಬ್ಬರೂ ನೋಡಬಹುದು.

ಗ್ರಹಣಗಳು ಸಂಭವಿಸುವುದರಿಂದ ಯಾವುದೇ ವ್ಯಕ್ತಿಗೂ ವೈಯುಕ್ತಿಕ ತೊಂದರೆಗಳು ಉಂಟಾಗುವುದಿಲ್ಲ ಆದ್ದರಿಂದ ಯಾರು ಭಯಪಡುವ ಅವಶ್ಯಕತೆ ಇರುವುದಿಲ್ಲ. ಗ್ರಹಣಗಳಿಂದ ಇದುವರೆವಿಗೂ ಸಾವು - ನೋವಿನ ವರದಿಯಾಗಿಲ್ಲ. ನಮಗೆ ಕಂಡುಬರುವ ಚಂದ್ರಗ್ರಹಣವನ್ನು ನೋಡಿ ಸಂತೋಷ ಪಡಬಹುದು. ಇದು ಸೌರವ್ಯೂಹದಲ್ಲಿ ನಡೆಯುವ ಒಂದು ನೈಸರ್ಗಿಕ ಕ್ರಿಯೆ. ಪ್ರಚಾರ ಮಾದ್ಯಮಗಳಲ್ಲಿ ಗ್ರಹಣಗಳ ಬಗ್ಗೆ ಹೆದರಿಕೆ ಹುಟ್ಟಿಸುವವರಿದ್ದಾರೆ ಮತ್ತು ಶಾಂತಿ ಹೋಮ ಮಾಡಿಸಬೇಕೆನ್ನುವವರೂ ಇದ್ದಾರೆ. ಇದೆಲ್ಲ ಬರೀ ಸುಳ್ಳು. ಗ್ರಹಣಗಳಿಂದ ಯಾರಿಗೂ ಯಾವ ತೊಂದರೆ ಉಂಟಾಗುವುದಿಲ್ಲ. ಆದ್ದರಿಂದ ಶಾಂತಿ, ಹೋಮ ಅವಶ್ಯಕತೆ ಇರುವುದರಿಲ್ಲ. ಚಂದ್ರ ಗ್ರಹಣವನ್ನು ಬರೀಗಣ್ಣಿನಿಂದ ನೋಡಬಹುದು. ಪೂರ್ಣ ಚಂದ್ರಗ್ರಹಣದಲ್ಲಿ ವಿಶೇಷವಾಗಿ ಬಣ್ಣ ಬದಲಾವಣೆಯಾಗುವ ಸುಸಂದರ್ಭವನ್ನು ನೋಡಿ ಆನಂದಿಸಬಹುದು.

ಆರ್. ಸೀತಾರಾಮಯ್ಯ,
ಜೋತೀಷ್ಕರು ಶಿವಮೊಗ್ಗ
ಮೋ: 94490 48340

Share this Story:

Follow Webdunia kannada