Select Your Language

Notifications

webdunia
webdunia
webdunia
webdunia

ಜಾತಕದ ಪ್ರಕಾರನೀವು ಬುದ್ದಿವಂತರಾ?

ಜಾತಕದ ಪ್ರಕಾರನೀವು ಬುದ್ದಿವಂತರಾ?
, ಸೋಮವಾರ, 18 ನವೆಂಬರ್ 2013 (18:22 IST)
PR
ಪರಮೇಶ್ವರ ಶೃಂಗೇರಿ

ಜಾತಕದ ಪ್ರಕಾರ ಜಾತಕನಿಗೆ ಶುಭಾಶುಭಫಲಗಳನ್ನು ನೀಡುತ್ತವೆ. ಅದರಲ್ಲಿ ಪ್ರಮುಖವಾಗಿ ಶುಭಫಲಗಳನ್ನು ನೀಡತಕ್ಕವುಗಳೆಂದರೆ ಜಾತಕದಲ್ಲಿನ ರಾಜಯೋಗಗಳು. ಉನ್ನತ ಪದವಿ. ಮಂತ್ರಿಗಳಾಗುವ ಅಥವಾ ಆಡಳಿತ ನಡೆಸುವ ಪ್ರಭಾವಿ ಗುಣಗಳೇ ರಾಜಯೋಗಗಳಾಗಿವೆ. ಇದರಲ್ಲಿ ಹಲವು ಪ್ರಕಾರಗಳಿದ್ದು ಜೀವನದ ಸಮಸ್ತ ಸುಖವನ್ನು ಅನುಭವಿಸಲು ಪೂರಕವಾದ ‘ಸರಸ್ವತಿ ಯೋಗ’ ಅತ್ಯಂತ ಮಹತ್ವ ಪೂರ್ಣವಾಗಿದೆ.

ಈ ಸರಸ್ವತಿ ಯೋಗವು ಗ್ರಹ, ಗ್ರಹದ ಸ್ಥಾನ ಇವೆರಡರಲ್ಲಿ ಯಾವುದು ಇವೆರಡರಲ್ಲಿ ಬಲಯುತವಾಗಿದ್ದು ಆ ಗ್ರಹಕ್ಕೆ ಹೆಚ್ಚಿನ ಶುಭವೂ ಪ್ರಾಪ್ತಿಯಗುವುದೋ ಆ ಗ್ರಹದ ದಶೆ ಹಾಗೂ ಭುಕ್ತಿ ಕಾಲಗಳಲ್ಲಿ ಕಾರಕಾತ್ವವು ಹೆಚ್ಚಿನ ಶುಭಫಲವನ್ನು ನೀಡಿಯೇ ನೀಡುತ್ತದೆ.

ಅದರಲ್ಲೂ ಗ್ರಹಗಳಿರುವ ಸ್ಥಾನ ಮತ್ತು ಸಂಬಂಧಗಳು ಈ ಯೋಗಕ್ಕೆ ಮೂಲಕಾರಣವಾಗಿದ್ದು ಗ್ರಹಗಳ ಯತಿ, ಪರಸ್ಪರ ವೀಕ್ಷಣೆ, ಕೇಂದ್ರಸ್ಥಾನ, ತ್ರಿಕೋಣದ ಸ್ಥಿತಿಗಳ ಮೇಲೆ ಈ ಯೋಗದ ಬಲಾಬಲವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ನಿರ್ಣಯಿಸಲಾಗುತ್ತದೆ.

ವಿಶೇಷವಾಗಿ ಈ ಯೋಗದಲ್ಲಿ ಜನಿಸಿದ್ದರೆ ಗುರುಗ್ರಹವೇ ಯೋಗದಾಯಕನಾಗಿದ್ದು ಗುರುವೂ ಜ್ಞಾನದಾಯಕನೂ ಆಗಿರುವುದರಿಂದ ‘ಸರಸ್ವತಿ ಯೋಗ’ ಕ್ಕೆ ಮೂಲಕಾರಣನಾಗಿರುತ್ತಾನೆ ಹಾಗಾಗಿ ಅಜ್ಞಾನದಿಂದ ರಹಿತನಾಗಿರುವಂತಹ ಜ್ಯೋತಿಸ್ವರೂಪವಾದ ಗುಣವನ್ನು ಹೊಂದಿರುವ ಈ ಗುರುವಿನ ಅನುಗ್ರಹದಿಂದಲೇ ಜಾತಕನೂ ಅತ್ಯಂತ ಜ್ಞಾನದಾಯಕನೂ ಆಗಿರುತ್ತಾನೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಾಗಾಗಿ ಈ ಸರಸ್ವತಿ ಯೋಗದಲ್ಲಿ ಜನಿಸಿದ ಜಾತಕನು ಅತ್ಯಂತ ಬುದ್ದಿವಂತನೂ,ಮೇಧಾವಿಯೂ ಆಗಿದ್ದು ಸಕಲಶಾಸ್ತ್ರ ಪಾರಂಗತನಾಗಿರುತ್ತಾನೆ. ವಿಶೇಷವಾಗಿ ಇಂತಹ ಯೋಗದಲ್ಲಿ ಜನಿಸಿದ ಜಾತಕನು ಕವಿ,ಸಾಹಿತಿಯೂ ಆಗುತ್ತಾನೆ. ಅಲ್ಲದೇ ಸಂಗೀತ ಕ್ಷೇತ್ರಗಳಲ್ಲಿ ಅಪರಿಮಿತ ಸಾಧನೆ ಗೈಯುವ ಈತ ಬಹುಮುಖ ಪ್ರತಿಭೆ ಉಳ್ಳವನಾಗುವುದು ನಿಸ್ಸಂಶಯ. ಅಷ್ಟೇ ಅಲ್ಲದೇ ಈ ಯೋಗದಲ್ಲಿ ಜನಿಸಿದ ಜಾತಕನೂ ಸಮಾಜದಲ್ಲಿ ಗೌರವಸ್ಥಾನವನ್ನು ಪಡೆಯುವುದು ಮಾತ್ರವಲ್ಲ, ಲೋಕಪೂಜ್ಯರೂ ಪ್ರಸಿದ್ಧ ವ್ಯಕ್ತಿಗಳೂ ಆಗುವುದು ಖಂಡಿತ. ಹಾಗಾಗಿ ಈ ಯೋಗದಲ್ಲಿ ಜನಿಸಿದ ವ್ಯಕ್ತಿಗಳು ಅತ್ಯಂತ ಪರಿಪೂರ್ಣ ವ್ಯಕ್ತಿಯಾಗಿಯೇ ಆಗುತ್ತಾನೆ ಎಂಬುದು ನಿರ್ವಿವಾದ.

Share this Story:

Follow Webdunia kannada