Select Your Language

Notifications

webdunia
webdunia
webdunia
webdunia

ಕಾಳಸರ್ಪ ಯೋಗದ ಭಯವೇ? ಇಲ್ಲಿದೆ ಪರಿಹಾರ!

ಕಾಳಸರ್ಪ ಯೋಗದ ಭಯವೇ? ಇಲ್ಲಿದೆ ಪರಿಹಾರ!
ಪಂ. ಸುರೇಂದ್ರ ಭಿಲೈರೆ

PTI
ಮನುಷ್ಯ ಜೀವನವೇ ಹಾಗೆ. ಸುಖವನ್ನು ಬಯಸುವಂಥದ್ದು. ಅಷ್ಟೇ ಅಲ್ಲ, ಜಿಜ್ಞಾಸೆಯಿಂದಲೇ ಕಾಲ ತಳ್ಳುವ ಜೀವನವದು. ತನ್ನ ಜಾತಕದಲ್ಲಿ ಕಷ್ಟ-ಸುಖ, ಶುಭ- ಅಶುಭಗಳ ಹಿಂದಿರುವ ರಹಸ್ಯ ಹುಡುಕಿಕೊಂಡು ಹೋಗುವ ಮನೋಧರ್ಮ ಕೆಲವರದಾದರೆ, ತನಗೆ ಬಂದ ಕಷ್ಟದ ಮೂಲ ಹುಡುಕಿಕೊಂಡು ಹೋಗಿ ಪರಿಹಾರ ಪಡೆಯಲು ಹವಣಿಸುವುದು ಹಲವರ ಮಾನವ ಸಹಜ ಗುಣ. ಕಷ್ಟ ಪರಿಹರಿಸಿ ಸುಖ ನೆಲೆಯಾಗಲು ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ದಾರಿ ಕಾಣದೆ ಕಂಗಾಲಾಗುವವರೂ ಅನೇಕರು.

ಬಹುತೇಕರು ಸಾಡೇಸಾತ್ ಶನಿಗೆ ಹೆದರಿದರೆ ಇನ್ನೂ ಅನೇಕರು ತಮ್ಮ ಜಾತಕದಲ್ಲಿ ತಮಗೆ ಕಾಳಸರ್ಪ ಯೋಗವಿದೆಯೆಂದು ತಿಳಿದು ಭಯಭೀತರಾಗುತ್ತಾರೆ. ಕಾಳ ಸರ್ಪ ಯೋಗದ ಬಗ್ಗೆ ಜನರಲ್ಲಿ ಭಯವಿರುವ ಜೊತೆಗೇ ಸಾಕಷ್ಟು ತಪ್ಪುತಿಳುವಳಿಕೆಗಳೂ ಇವೆ. ಹಾಗಾಗಿ ಕಾಳಸರ್ಪ ಯೋಗದ ಬಗ್ಗೆ ಹಾಗೂ ಪರಿಹಾರ ಉಪಾಯಗಳ ಬಗ್ಗೆ ಈ ಲೇಖನದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ.

ಒಂದೇ ಪರಿವಾರದಲ್ಲಿ ಅಣ್ಣತಮ್ಮಂದಿರು ಅಕ್ಕತಮ್ಮಂದಿರು ಇರುತ್ತಾರೆ. ನಾವು ಒಂದೇ ಕುಟುಂಬದವರೆಂದು ಅಣ್ಣ ತಮ್ಮ ಅಕ್ಕ ತಂಗಿಯರೆಂದು ಹೇಳಿಕೊಂಡರೂ ಅವರೆಲ್ಲರಲ್ಲೂ ವ್ಯತ್ಯಾಸಗಳಿದ್ದೇ ಇರುತ್ತದೆ. ಅಭಿರುಚಿ, ರೀತಿ ನೀತಿ, ಭಾವನೆ ಎಲ್ಲವೂ ಭಿನ್ನ ಭಿನ್ನವಾಗಿರುತ್ತದೆ. ಅವರವರ ಕರ್ಮವನ್ನವಲಂಬಿಸಿಕೊಂಡು ಅವರವರ ಜೀವನಕ್ರಮ, ಆಸಕ್ತಿ ಭಿನ್ನವಾಗಿರುತ್ತದೆ. ಹಾಗಾಗಿಯೇ ಅವರವರ ಕರ್ಮಕ್ಕನುಗುಣವಾಗಿ ಫಲವಾದ ಭೋಗವೂ ಕೂಡಾ ಭಿನ್ನಭಿನ್ನವೇ.

ಇದನ್ನೇ ಇಲ್ಲಿ ಉದಾಹರಣೆಯಾಗಿಟ್ಟುಕೊಂಡು ನೋಡಿದರೆ, ಕದ್ರು ಹಾಗೂ ಕ್ರೋಧವಶಾ (ಸುರಸೆ) ಇಬ್ಬರು ಅಕ್ಕತಂಗಿಯರಾದರೂ, ಕದ್ರುವಿನ ಹೊಟ್ಟೆಯಲ್ಲಿ ನಾಗಗಳೂ, ಕ್ರೋಧವಶಾಳ ಹೊಟ್ಟೆಯಲ್ಲಿ ಸರ್ಪಗಳೂ ಹುಟ್ಟಿದವು. ನಾಗ ಹಾಗೂ ಸರ್ಪಗಳ ದೇಹ ಒಂದೇ ತೆರನಾಗಿ ಕಂಡರೂ, ಕರ್ಮ ಫಲವಾಗಿ ಗುಣಸ್ವಬಾವ ಬೇರೆ ಬೇರೆಯೇ. ಶಾಸ್ತ್ರಗಳ ಪ್ರಕಾರ, ಜಾತಕದ ಕುಂಡಲಿಯಲ್ಲಿ ಸರ್ಪಗಳ ಯೋಗ ನಿರ್ಧಾರಿತವಾದರೂ, ನಾಗಗಳ ಯೋಗ ನಿರ್ಧಾರಿತವಾಗಿಲ್ಲ.ಹಾಗಾಗಿ ಕುಂಡಲಿಯಲ್ಲಿ ಕಾಳಸರ್ಪಯೋಗ ಎಂದೇ ಹೇಳುತ್ತೇವೆಯೇ ವಿನಃ ನಾಗದೋಷ ಯೋಗವೆಂದು ಹೇಳುವುದಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು.

ನಿಮ್ಮ ಜಾತಕದಲ್ಲಿ ಕಾಳಸರ್ಪಯೋಗವಿದೆಯೆಂದಾದರೆ ಭಯಪಡಬೇಕಾಗಿಲ್ಲ. ಪ್ರತಿದಿನ ಭಗವಂತನ ಆರಾಧನೆಯಿಂದ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು. ಕಾಳಸರ್ಪ ಯೋಗದಿಂದ ಎದುರಾದ ಕಷ್ಟಗಳನ್ನು ನಿವಾರಿಸಲು ಹಾಗೂ ಮುಂದೆ ಬರಬಹುದಾದ ಕಷ್ಟಗಳ ಪರಿಹಾರಕ್ಕೆ ಮನೆಯಲ್ಲೇ ಮಾಡುವ ಪರಿಹಾರೋಪಾಯಗಳು ಹೀಗಿವೆ.

1. ಪತಿ-ಪತ್ನಿಯ ನಡುವೆ ಕ್ಲೇಷವಿದ್ದರೆ, ನೆಮ್ಮದಿಯೇ ಇರದಿದ್ದರೆ, ದಿನವೂ ಜಗಳಗಳಾಗುತ್ತಿದ್ದರೆ ತಲೆಯಲ್ಲಿ ನವಿಲುಗರಿ ಧರಿಸಿದ ಶ್ರೀಕೃಷ್ಣನ ಅಥವಾ ಬಾಲಕೃಷ್ಣನ ಮೂರ್ತಿಯನ್ನು ಮನೆಯಲ್ಲಿ ಸ್ಥಾಪನೆ ಮಾಡಿ. ಅಥವಾ ಪ್ರತಿದಿನವೂ ಓಂ ನವೋ ಭಗವತೇ ವಾಸುದೇವಾಯ ಅಥವಾ ಓಂ ನಮೋ ವಾಸುದೇವಾಯ ಕೃಷ್ಣಾಯ ನಮಃ ಶಿವಾಯ ಎಂದು ಜಪ ಮಾಡುತ್ತಿರಿ. ಈ ಮೂಲಕ ಕಾಳಸರ್ಪ ಯೋಗದ ಶಾಂತಿಯಾಗುತ್ತದೆ.

2. ಬ್ಯುಸಿನೆಸ್‌ನಲ್ಲಿ ಯಾವಾಗಲೂ ತೊಂದರೆಯಿದ್ದರೆ ಅಥವಾ ಬ್ಯುಸಿನೆಸ್ ಸರಿಯಾಗಿ ನಡೆಯುತ್ತಿಲ್ಲವೆಂದಾದರೆ ಪಾಲಾಶದ ಹೂವನ್ನು ಗೋಮೂತ್ರದಲ್ಲಿ ಮುಳುಗಿಸಿ ಸಂಸ್ಕರಿಸಿ ನೆರಳಿನಲ್ಲಿ ಹಾಗೇ ಇಡಿ. ನಂತರ ಅದರ ಚೂರ್ಣ ಮಾಡಿ ಚಂದನದ ಪುಡಿಯ ಜೊತೆಗೆ ಕಲಸಿ ಶಿವಲಿಂಗಕ್ಕೆ ಮೂರು ನಾಮ ಬಳಿಯಿರಿ. ಹೀಗೆ ಮಾಡಿದ 25 ದಿನಗಳಲ್ಲಿ ಬ್ಯುಸಿನೆಸ್ ಸುಧಾರಿಸುತ್ತದೆ.

3. ನಿಮ್ಮ ಕುಂಡಲಿಯಲ್ಲಿ ಕಾಳಸರ್ಪ ಯೋಗವಿದ್ದರೆ ಪ್ರತಿದಿನವೂ ಶಿವ ದೇವರ ಕುಟುಂಬವನ್ನೇ ಭಕ್ತಿಯಿಂದ ಪೂಜಿಸಿ. ಆಗ ಕಾಳ ಸರ್ಪಯೋಗದ ಕೆಟ್ಟ ಯೋಗ ನಿಮಗೆ ತಾಗುವುದಿಲ್ಲ.

4. ನಿಮಗೆ ಕಾಳ ಸರ್ಪಯೋಗದಲ್ಲಿ ಶತ್ರುಭಯವಿದ್ದರೆ ಬೆಳ್ಳಿ ಅಥವಾ ತಾಮ್ರದ ಸರ್ಪ ಮಾಡಿ ಅದರ ಕಣ್ಣಿಗೆ ಕಾಡಿಗೆ ಹಚ್ಚಿ. ನಂತರ ಆ ಸರ್ಪವನ್ನು ಶಿವಲಿಂಗದ ತಲೆಯ ಮೇಲೆ ಇಡಿ. ನಿಮ್ಮ ಶತ್ರುಭಯ ನಿವಾರಣೆಯಾಗುತ್ತದೆ.

5. ಹಾಲಿಲ್ಲಿ ಕಲ್ಲುಸಕ್ಕರೆ ಹಾಕಿ ಕರಗಿಸಿ ಅದಕ್ಕೆ ಸ್ವಲ್ಪ ಗಸಗಸೆ (ಗಾಂಜಾ) ಹಾಕಿಟ್ಟು ಶಿವಲಿಂಗಕ್ಕ ಪ್ರತಿದಿನ ಅಭಿಷೇಕ ಮಾಡಿದರೆ ಮನೆಯಲ್ಲಿ, ಮನಸ್ಸಲ್ಲಿ, ಜೀವನದಲ್ಲಿ ಶಾಂತಿ ನೆಲೆಸುತ್ತದೆ.

6. ಕಾಳಸರ್ಪಯೋಗವಿರುವ ವ್ಯಕ್ತಿ ಶ್ರಾವಣ ಮಾಸದಲ್ಲಿ ಪ್ರತಿದಿನ ರುದ್ರಾಭಿಷೇಕ ಹಾಗೂ ಮಹಾ ಮೃತ್ಯುಂಜಯ ಮಂತ್ರ ಜಪ ಮಾಡುತ್ತಿದ್ದರೆ ಖಂಡಿತವಾಗಿಯೂ ಜೀವನದಲ್ಲಿ ಶಾಂತಿ, ಸಮೃದ್ಧಿಯ ಧಾರಣೆಯಾಗುತ್ತದೆ.

Share this Story:

Follow Webdunia kannada