Select Your Language

Notifications

webdunia
webdunia
webdunia
webdunia

ಸಾಲಾಗಿ ನಾಲ್ಕು ಗ್ರಹಗಳು: ನೀವು ನೋಡಿದ್ರಾ?

ಸಾಲಾಗಿ ನಾಲ್ಕು ಗ್ರಹಗಳು: ನೀವು ನೋಡಿದ್ರಾ?
PR
ಆಕಾಶದ ಪೂರ್ವ ದಿಕ್ಕಿನಲ್ಲಿ ಚಂದ್ರನೊಂದಿಗೆ ಶುಕ್ರ, ಬುಧ, ಕುಜ, ಗುರು ಗ್ರಹಗಳು ಸಾಲಾಗಿ ಸಂಚರಿಸುವುದನ್ನು ಇದೇ ಏಪ್ರಿಲ್ 30 ರಂದು ಬೆಳಗಿನ ಜಾವ ಸೂಯೋದಯಕ್ಕೆ ಮೊದಲು ಬರಿಗಣ್ಣಿನಲ್ಲಿ ನೋಡಬಹುದಾಗಿದೆ. ಈ ಗ್ರಹಗಳು ಮೀನರಾಶಿಯಲ್ಲಿ ಸಂಚರಿಸುತ್ತಿವೆ. ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಬುಧ, ಕುಜ, ಗುರು, ಶುಕ್ರ 4 ಗ್ರಹಗಳಿದ್ದು, ಚಂದ್ರ ಉತ್ತರಾಬಾದ್ರ ನಕ್ಷತ್ರದಲ್ಲಿರುತ್ತವೆ.

30 ರಂದು ಬೆಳಗಿನ ಜಾವ ಸೂರ್ಯೋದಯಕ್ಕೆ ಮೊದಲು ಈ ಗ್ರಹಗಳನ್ನು ಪೂರ್ವದಿಕ್ಕಿನಲ್ಲಿ ಬರಿಗಣ್ಣಿನಲ್ಲಿ ನೋಡಬಹುದು. ಸೂರ್ಯೋದಯಕ್ಕೆ ಮೊದಲು ನಮಗೆ ಮೀನರಾಶಿ ಗೋಚರಿಸುತ್ತವೆ. ಈ ಮೀನ ರಾಶಿಯಲ್ಲಿ ಬುಧ, ಶುಕ್ರ, ಕುಜ, ಗುರು ಈ ನಾಲ್ಕು ಗ್ರಹಗಳು ಹಾಗೂ ಚಂದ್ರ ಸೇರಿ ಒಟ್ಟು 5 ಆಕಾಶಕಾಯಗಳನ್ನು ನೋಡಬಹುದು. ಏಪ್ರಿಲ್ 30 ರಿಂದ ಮೇ ಮೊದಲೇ ವಾರದವರೆಗೂ ಈ ಗ್ರಹಗಳು ಗೋಚರಿಸುತ್ತವೆ. ಈ ಗ್ರಹಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ಬೆಳಗಿನ ಜಾವ ಪೂರ್ವ ದಿಕ್ಕಿನಲ್ಲಿ ಚಂದ್ರ ಕಂಡುಬರುತ್ತದೆ. ಈ ಚಂದ್ರನ ಕೆಳಭಾಗದಲ್ಲಿ ಕ್ರಮವಾಗಿ ಶುಕ್ರ (ಹೆಚ್ಚುಹೊಳೆಯುವ ಗ್ರಹ) ಶುಕ್ರನ ಕೆಳಗೆ ಬುಧ, ಬುಧನ ಕೆಳಗೆ ಕುಜ, ಕುಜನ ಕೆಳಗೆ ಗುರುಗ್ರಹವನ್ನು ಸುಲಭವಾಗಿ ಗುರುತಿಸಬಹುದಾಗಿದೆ.

ಇದೊಂದು ನಿಸರ್ಗದ ಸುಂದರ ಪ್ರದರ್ಶನ. ಎಲ್ಲರೂ ಆಕಾಶದಲ್ಲಿ ಪೂರ್ವದ ಕಡೆ ಸೂರ್ಯೋದಯ ಮೊದಲು ನೋಡಬಹುದು. ಈ ದೃಶ್ಯ ಮೇ 24 ರವರೆಗೆ ಕಂಡುಬರುತ್ತದೆ. ಕ್ರಮೇಣ ಮೇಷ ರಾಶಿಯಲ್ಲೂ ಕಂಡುಬರುತ್ತವೆ. ಮೇ 1 ರಂದು ಕುಜ-ಗುರು ಸಂಯೋಗ, ಮೇ 9 ರಂದು ಶುಕ್ರ-ಬುಧ ಸಂಯೋಗ, ಮೇ 12 ರಂದು ಬುದ, ಶುಕ್ರರೊಂದಿಗೆ ಗುರು ಸಂಯೋಗ, ಮೇ 24 ರಂದು ಶುಕ್ರ-ಕುಜ ಸಂಯೋಗ ಉಂಟಾಗುತ್ತದೆ. ಈ ದೃಶ್ಯಗಳನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ. ಮೀನರಾಶಿಯಲ್ಲಿ ಒಟ್ಟಿಗೆ 4 ಗ್ರಹಗಳಿರುವುದರಿಂದ ಯಾವುದೇ ತೊಂದರೆ ಇರುವುದಿಲ್ಲ.

ಆರ್. ಸೀತಾರಾಮಯ್ಯ,
ಜೋತೀಷ್ಕರು,
ಮೋ: 94490 48340

Share this Story:

Follow Webdunia kannada