ಆಯಾ ವಾರಗಳಲ್ಲಿ ಬರುವ ಆರಂಭಿಕ ಚೌಘಡಿಯಾಗಳನ್ನು ಈ ಕೋಷ್ಟಕದಲ್ಲಿ ನೀಡಲಾಗಿದೆ:
ಉದಾಹರಣೆಗೆ, ನವೆಂಬರ್ 30ಕ್ಕೆ ಬೆಂಗಳೂರಿನಲ್ಲಿ ಸೂರ್ಯೋದಯ ಬೆಳಿಗ್ಗೆ 6.03 ಹಾಗೂ ಸೂರ್ಯಾಸ್ತ ಸಂಜೆ 6.15 ಅಂತ ಇಟ್ಟುಕೊಳ್ಳೋಣ. ಸೂರ್ಯೋದಯ ಮತ್ತು ಸೂರ್ಯಾಸ್ತ ನಡುವಿನ ಸಮಯ ಒಟ್ಟು 12 ಗಂಟೆ ಮತ್ತು 12 ನಿಮಿಷಗಳು. ಇದನ್ನು (12.12 ಗಂಟೆ = 732 ನಿಮಿಷ) 8ರಿಂದ ಭಾಗಿಸಬೇಕು. ಆಗ ದೊರೆಯುವ ಸಮಯ 1 ಗಂಟೆ 31 ನಿಮಿಷ 30 ಸೆಕೆಂಡ್. ಅಂದರೆ ಆ ದಿನದಂದು ಬೆಳಗ್ಗೆ 6.03 ಗಂಟೆಯಿಂದ 1 ಗಂ. 31 ನಿ.30 ಸೆ. ಅವಧಿಗೆ (ಬೆಳಿಗ್ಗೆ 7 ಗಂಟೆ 34 ನಿಮಿಷ 30 ಸೆಕೆಂಡ್ವರೆಗೆ) ಮೊದಲ ಚೌಘಡಿಯಾ ಲಭ್ಯವಿರುತ್ತದೆ.
ಚೌಘಡಿಯಾ ಚಕ್ರದ ಅನುಸಾರ, ಭಾನುವಾರದ ಮೊದಲ ಚೌಘಡಿಯಾ 'ಉದ್ವೇಗ' ಫಲ ಹೊಂದಿರುತ್ತದೆ. ಯಾವ ರೀತಿ ದಿನದ ಚೌಘಡಿಯಾವನ್ನು ಸೂರ್ಯೋದಯದಿಂದ ಸೂರ್ಯಾಸ್ತ ವರೆಗೆ ಲೆಕ್ಕಾಚಾರ ಹಾಕಲಾಗುತ್ತದೆಯೋ, ಅದೇ ಪ್ರಕಾರವಾಗಿ 8 ಸಮಾನ ಭಾಗಗಳನ್ನಾಗಿಸಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೂ ಚೌಘಡಿಯಾ ಗಣನೆ ಮಾಡಲಾಗುತ್ತದೆ.
ರೋಗ, ಉದ್ವೇಗ ಮತ್ತು ಕಾಲ ಚೌಘಡಿಯಾಗಳು ಅಶುಭ ಫಲ ನೀಡುವ ಪಂಕ್ತಿಗೆ ಸೇರಿದ್ದರೆ, ಲಾಭ, ಅಮೃತ, ಶುಭ ಮತ್ತು ಚಲ ಚೌಘಡಿಯಾಗಳು ಶ್ರೇಷ್ಠ ಫಲ ನೀಡುತ್ತವೆ ಎಂಬ ನಂಬಿಕೆ. ಲಾಭ ಚೌಘಡಿಯಾವು ವ್ಯವಹಾರ ಮುಂತಾದ ಲಾಭದಾಯಕ ಕಾರ್ಯಗಳಿಗೆ, ಅಮೃತವು ಔಷಧಿಗೆ ಸಂಬಂಧಿಸಿದ್ದಕ್ಕೆ, ಶುಭವು ಇತರ ಕೆಲಸ ಕಾರ್ಯಗಳಿಗೆ ಮತ್ತು ಚಲ ಚೌಘಡಿಯಾವು ಚರ (ಅಂದರೆ ಯಂತ್ರ ಮುಂತಾದ) ಕಾರ್ಯಗಳಿಗೆ ಶ್ರೇಯಸ್ಕರವಾಗಿರುತ್ತದೆ.