Webdunia - Bharat's app for daily news and videos

Install App

ದ್ವಾದಶ ರಾಶಿಗಳಲ್ಲಿ ಶುಕ್ರದೆಸೆ: ನಿಮ್ಮ ರಾಶಿಯ ಭವಿಷ್ಯ ಗೊತ್ತಾ?

Webdunia
ಸೋಮವಾರ, 30 ಸೆಪ್ಟಂಬರ್ 2013 (12:47 IST)
PR
ಪರಮೇಶ್ವ ರ ಶೃಂಗೇರ ಿ

ಭಾರತೀಯ ಹಿಂದೂಪರಂಪರೆಯಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ತನ್ನದೇ ಆದ ವೈಶಿಷ್ಟ ಸ್ಥಾನವಿದ್ದು ಅದರಲ್ಲೂ ವಿಶೇಷವಾಗಿ ಜಾತಕ ಫಲ ಒಬ್ಬ ವ್ಯಕ್ತಿಯ ಜೀವಿತದ ಆಗುಹೋಗುಗಳನ್ನು ಸೂಚಿಸುವ ಒಂದು ಪ್ರಬಲ ವಾಹಕವೆಂದು ನಂಬಿಕೆ ಗಳಿಸಿದೆ. ಇದರಲ್ಲಿ ಗ್ರಹಗಳ ಚಲನೆಯ ಆಧಾರದ ಮೇಲೆ ಫಲಗಳು ನಿರ್ಣಯವಾಗುವುದು ಎಂಬುದು ಸ್ಪಷ್ಟವಾಗಿದೆ. ಅದೇ ರೀತಿ ಜನ್ಮರಾಶಿಯಲ್ಲಿ ಗ್ರಹಗಳ ಸಂಚಲನೆ ಉಂಟಾದಾಗ ಬೇರೆಬೇರೆ ರೀತಿಯ ಪ್ರಭಾವಗಳು ಉಂಟಾಗುತ್ತವೆ.ವಿಶೇಷವಾಗಿ ಜನ್ಮರಾಶಿಯಲ್ಲಿ ಶುಕ್ರಗ್ರಹವಿದ್ದರೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗೆಗೆ ಪ್ರಧಾನವಾಗಿ ಜನರು ತಿಳಿಯ ಬಯಸುವ ಅಂಶ.

ಮೊದಲನೆಯದಾಗಿ ಜನ್ಮರಾಶಿ ಮೇಷದಲ್ಲಿ ಶುಕ್ರನಿರುವಾಗ ಜನಿಸಿದ ಜಾತಕನು ಸ್ತ್ರೀ ಸಂಬಂಧಿ ಆಸಕ್ತನೂ ಆಗಿದ್ದು, ಸ್ತ್ರೀಗೆ ಸಂಬಂಧಿಸಿದ ಸುಖವನ್ನು ಅನುಭವಿಸುತ್ತಾನೆ. ವೃಷಭದಲ್ಲಿ ಶುಕ್ರನಿರುವಾಗ ಜನಿಸಿದವನು, ಅಪರಿಮಿತ ಸಂಪತ್ತನ್ನು ಹೊಂದುವುದಲ್ಲದೇ, ವ್ಯವಹಾರ ಚತುರರೂ ಆಗಿರುತ್ತಾರೆ. ಮಿಥುನ ರಾಶಿಯಲ್ಲಿ ಶುಕ್ರನಿದ್ದಾಗ ಜನಿಸಿದ ಪಕ್ಷದಲ್ಲಿ ಜಾತಕನು ಕಲಾಸಕ್ತನೂ,ಹಲವು ಬಗೆಯ ಉಧ್ಯಮ ನಿರತನೂ ಆಗಿದ್ದು ‘ಧನಯೋಗ’ ಸಾಧ್ಯತೆಯು ಹೆಚ್ಚಾಗಿರುತ್ತದೆ. ವಿಶೇಷವಾಗಿ ಇವರು ರಾಜಕೀಯ ಕ್ಷೇತ್ರದಲ್ಲಿ ಅಥವಾ ಅಧಿಕಾರಯುಕ್ತ ಹುದ್ದೆಗಳಲ್ಲಿ ಸಕ್ರಿಯರಾಗುತ್ತಾರೆ. ಕರ್ಕಾಟದಲ್ಲಿ ಶುಕ್ರನಿರುವಾಗ ಜನಿಸಿದವರಿಗೆ ಒಂದಕ್ಕಿಂತ ಹೆಚ್ಚು ವಿವಾಹವಾಗುವ ಯೋಗವಿದ್ದು ಕಾಮಕ್ಕೆ ಸಂಬಂಧಿಸಿದ ವಿಚಾರಕ್ಕೆ ಹೆಚ್ಚಿನ ಆಸಕ್ತರಾಗಿರುತ್ತಾರೆ. ಸಿಂಹರಾಶಿಯಲ್ಲಿ ಶುಕ್ರನಿರುವಾಗ ಜನಿಸಿದವರು ಸ್ತ್ರೀ ಸಂಬಂಧಿ ಆಸ್ತಿಯ ಒಡೆಯರಾಗುತ್ತಾರಲ್ಲದೇ, ಜೀವನ ಪರ್ಯಂತ ಸ್ತ್ರೀ ಮುಖೇನವಾಗಿಯೇ ಅಧಿಕ ಸಂಪತ್ತನ್ನು ಗಳಿಸುವುದು ಖಂಡಿತ.

PR
ಶುಕ್ರನು ಕನ್ಯಾರಾಶಿಯಲ್ಲಿ ಇದ್ದಾಗ ಜನಿಸಿದವನು ಕೆಟ್ಟ ಕೆಲಸ ನಿರತರೂ ಕ್ರೂರ ಸ್ವಭಾವವನ್ನು ಹೊಂದಿದವರೂ ಆಗಿದ್ದು, ಸ್ತ್ರೀ ಸಂಬಂಧಿ ತೊಂದರೆಯಲ್ಲಿ ಸಿಲುಕುತ್ತಾರೆ. ತುಲಾ ರಾಶಿಯಲ್ಲಿ ಶುಕ್ರನಿರುವಾಗ ಜನನವಾದವರು ಅತ್ಯಂತ ಶೂರರೂ ಧೀರರೂ ಆಗಿದ್ದು, ದೇಶರಕ್ಷಣೆಯಂತಹ ಕೆಲಸದಲ್ಲಿ ಆಸಕ್ತಿ ಹೊಂದಿರುತ್ತಾರೆ. ಅಲ್ಲದೇ ಇವರು ಅತ್ಯಂತ ಧೈರ್ಯಶಾಲಿಯಾಗಿದ್ದು ಎಚ್ಚರಿಕೆಯಿಂದ ಜೀವನದ ಹೆಜ್ಜೆಯನ್ನಿಡುತ್ತಾರೆ. ವೃಶ್ಚಿಕ ರಾಶಿಯಲ್ಲಿ ಶುಕ್ರನಿರುವಾಗ ಜನಿಸಿದವರು ಸದಾ ವಿಲಾಸಿ ಜೀವನ ನಡೆಸುವ ಸ್ವಭಾವ ಹೊಂದಿದ್ದು ಸದಾ ಸ್ತ್ರೀ ಸಂಗ ನಿರತರಾಗಿರುತ್ತಾರೆ. ಇನ್ನು ಧನು ರಾಶಿಯಲ್ಲಿ ಶುಕ್ರನಿರುವಾಗ ಜನಿಸಿದವರು ಆರ್ಥಿಕ ಸಂಪನ್ಮೂಲ ಹೊಂದಿರುವುದಲ್ಲದೇ ಉತ್ತಮ ಗುಣವಂತರಾಗಿ ಸಮಾಜದಲ್ಲಿ ಕೀರ್ತಿಗಳಿಸುತ್ತಾರೆ. ಶುಕ್ರನು ಮಕರ ರಾಶಿಯಲ್ಲಿರುವಾಗ ಜನಿಸಿದವರು ಉತ್ತಮ ವಿದ್ಯಾವಂತರೂ,ಧನವಂತರೂ ಆಗಿದ್ದು ಪ್ರಖರ ವಾಗ್ಮೀಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕುಂಭರಾಶಿಯಲ್ಲಿ ಶುಕ್ರನಿರುವಾಗ ಜನಿಸಿದವರು ಅತ್ಯಂತ ಶ್ರೀಮಂತರಾಗುವರಲ್ಲದೇ, ಮೂರು ತಲೆಮಾರಿಗೆ ಸಾಕಾಗುವಷ್ಟು ಸಂಪತ್ತನ್ನು ಗಳಿಸುತ್ತಾರೆ .ಆದರೆ ನೀಚಸ್ತ್ರೀಯರ ಸಂಗ ಮಾಡುವವರೂ,ವ್ಯಸನಿಗಳು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇನ್ನು ಕೊನೆಯದಾಗಿ ಮೀನರಾಶಿಯಲ್ಲಿ ಶುಕ್ರನಿದ್ದ ಸಮಯದಲ್ಲಿ ಜನನವಾದವರು ಆರ್ಥಿಕ ಸಂಪನ್ನರೂ,ವ್ಯವಹಾರ ತಜ್ಞರೂ ಆಗಿರುವುದಲ್ಲದೇ ರಾಜಸನ್ಮಾನಕ್ಕೆ ಪಾತ್ರರಾಗುತ್ತಾರೆ. ಅಷ್ಟೇ ಅಲ್ಲ ಸಮಾಜದಲ್ಲಿ ಕೀರ್ತಿ,ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಹೀಗೆ ಶುಕ್ರಗ್ರಹನಿದ್ದ ದ್ವಾದಶ ರಾಶಿಗಳಲ್ಲಿ ಬೇರೆ ಬೇರೆ ಫಲಗಳಲ್ಲದೇ, ವಿಭಿನ್ನ ಪರಿಣಾಮವು ಉಂಟಾಗುತ್ತದೆ ಎಂಬುದು ಪ್ರಾಚೀನ ಜ್ಯೋತಿಷ್ಯ ಪರಂಪರೆಯಿಂದ ಬಂದಂತಹ ಅಭಿಪ್ರಾಯವಾಗಿದೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?