ಧನುರ್ಮಾಸದಲ್ಲಿ ವಿಷ್ಣುವಿನ ಆರಾಧನೆಯಿಂದ ಸಿಗುತ್ತದೆ ಭಾರೀ ಪ್ರತಿಫಲ

Sampriya
ಬುಧವಾರ, 8 ಜನವರಿ 2025 (18:23 IST)
Photo Courtesy X
ಹಿಂದೂ ಧರ್ಮಗಳ ಪವಿತ್ರ ಆಚರಣೆಗಳಲ್ಲಿ ಧನುರ್ಮಾಸ ಒಂದು. ಈ ಮಾಸದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ವಿಷ್ಣುವಿನ ಪೂಜೆ ಮಾಡುವುದು ಶ್ರೇಷ್ಠ ಎನ್ನುತ್ತಾರೆ.

ಸೌರ ಮಂಡಲದ ರಾಜನಾದ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತಾನೆ. ಈ ಸಂಚಾರಕ್ಕೆ ತೆಗೆದುಕೊಳ್ಳುವ ಅವಧಿ 30 ದಿನಗಳು. ಅಂದರೆ ಡಿಸೆಂಬರ್‌ 16ರಂದು ಸೂರ್ಯನು ಧನುರಾಶಿಯನ್ನು ಪ್ರವೇಶಿಸಿದ್ದು ಮಕರ ರಾಶಿಯನ್ನು ಪ್ರವೇಶಿಸಲು ಒಂದು ತಿಂಗಳ ಕಾಲಾವಕಾಶವನ್ನು ಪಡೆಯುತ್ತಾನೆ. ಈ ಅವಧಿಯನ್ನೇ 'ಧನುರ್ಮಾಸ' ಎಂದು ಕರೆಯುತ್ತಾರೆ.

ಯೋಗ ನಿದ್ರೆಯಿಂದ ಏಳುವ ಮಹಾವಿಷ್ಣುವಿಗೆ ಧನುರ್ಮಾಸವು ಅರುಣೋದಯದ ಸಮಯವಾಗಿರುತ್ತದೆ. ಈ ಸಂದರ್ಭದಲ್ಲಿ ಮಡಿಯಿಂದ ಪೂಜೆ, ಧ್ಯಾನ, ಉಪವಾಸ ಹಾಗೂ ದಾನದಂತಹ  ಮಹಾನ್ ಕಾರ್ಯಗಳನ್ನು ಮಾಡುವುದರಿಂದ ಭಾರೀ ಪ್ರತಿಫಲ ಸಿಗುತ್ತದೆ ಎಂಬ ನಂಬಿಕೆಯಿದೆ.

ಈ ಮಾಸದಲ್ಲಿ ಮದುವೆ, ಗೃಹಪ್ರವೇಶ ಸೇರಿದಂತೆ ಹೊಸ ಆರಂಭಗಳನ್ನು ಮಾಡಿದರೆ ಕೇಡಾಗುತ್ತದೆ ಎಂಬ ನಂಬಿಕೆಯಿದೆ.

ಈ ಮಾಸದಲ್ಲಿ ಮೈಕೊರೆಯುವ ಚಳಿಯಿರುತ್ತದೆ. ಆದರೂ ಭಕ್ತರೂ ಭಕ್ತಿಯಿಂದ ಪೂಜೆಯಲ್ಲಿ ದೇಶದಾದ್ಯಂತ ಪಾಲ್ಗೊಳ್ಳುತ್ತಾರೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಧನುರ್ಮಾಸವನ್ನು ವಿಶೇಷವಾಗಿ ಆಚರಿಸುತ್ತಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಸಂತಾನ ಗಣಪತಿ ಸ್ತೋತ್ರಂ ಮಹಿಳೆಯರು ತಪ್ಪದೇ ಓದಿ

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರಂ ತಪ್ಪದೇ ಓದಿ

ಮುಂದಿನ ಸುದ್ದಿ
Show comments