Webdunia - Bharat's app for daily news and videos

Install App

ಯಾವ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಏನಾಗುತ್ತದೆ ಎಂಬುದು ತಿಳಿಬೇಕಾ?

Webdunia
ಭಾನುವಾರ, 22 ಜುಲೈ 2018 (07:14 IST)
ಬೆಂಗಳೂರು : ದೇಹಕೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಿದ್ರೆ ಕೂಡ. ನಮಗೆ ಜೋರಾಗಿ ನಿದ್ದೆ ಬಂದಾಗ ಎಲ್ಲೆಂದರಲ್ಲಿ ತಲೆ ಇಟ್ಟು ಮಲಗುತ್ತೇವೆ.  ಆದರೆ ಹೀಗೆ ಮಾಡುವ ಮೊದಲು ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ಏನಾಗುತ್ತದೆ ಎಂಬುದನ್ನು ಮೊದಲು ತಿಳಿಯಿರಿ.


*ವಾಸ್ತು ಪ್ರಕಾರವಾಗಿ ಉತ್ತರಕ್ಕೆ ತಲೆ ಹಾಕಿ ಮಲಗುವುದು ಖಂಡಿತಾ ಉತ್ತಮ ಅಲ್ಲ. ಆ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಕೆಟ್ಟ ಕನಸುಗಳು ಬೀಳುತ್ತವೆ. ಅದರ ಜತೆಗೆ ಬಹಳ ತೊಂದರೆಗಳೂ ಆಗುತ್ತವೆ. ಆದ್ದರಿಂದ ನಿದ್ರಿಸುವುದಕ್ಕೆ ಈ ದಿಕ್ಕನ್ನು ಸಲಹೆಯಾಗಿ ಮಾಡುವುದಿಲ್ಲ. ಇನ್ನು ವೈಜ್ಞಾನಿಕವಾಗಿ ಹೇಳಬೇಕು ಅಂದರೆ, ಭೂಮಿಯ ಅಯಸ್ಕಾಂತೀಯ ರೇಖೆ ಉತ್ತರ- ದಕ್ಷಿಣಕ್ಕೆ ಚಲಿಸುತ್ತಿರುತ್ತದೆ. ತಲೆಯನ್ನು ಉತ್ತರಕ್ಕೆ ಇಟ್ಟಾಗ ಆ ಅಯಸ್ಕಾಂತೀಯ ರೇಖೆಗಳಿಂದ ಮೆದುಳಿಗೆ ಹೆಚ್ಚು ಆಯಾಸ ಆಗುತ್ತದೆ. ಆದ್ದರಿಂದ ಉತ್ತರಕ್ಕೆ ತಲೆ ಹಾಕಿ ಮಲಗಬಾರದು ಎನ್ನುತ್ತಾರೆ.


*ಮನೆಯ ಹಿರಿಯರು, ಯಜಮಾನ- ಯಜಮಾನಿ ದಕ್ಷಿಣಕ್ಕೆ ತಲೆ ಹಾಕಿ ಮಲಗುವುದು ಅತ್ಯುತ್ತಮ. ಯಾಕೆಂದರೆ ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಶ್ರೀಮಂತಿಕೆ ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ. ಜತೆಗೆ ಸಂತೋಷವೂ ಸಿಕ್ಕಿ, ಕನಸುಗಳು ಈಡೇರುತ್ತವೆ.

*ಪೂರ್ವಕ್ಕೆ ತಲೆ ಹಾಕಿ ಮಲಗುವುದರಿಂದ ಹಲವು ಅನುಕೂಲಗಳಿವೆ. ಒಳ್ಳೆ ನಿದ್ದೆ ಆಗುತ್ತದೆ. ಹೊಸ ಚೈತನ್ಯ, ಸಾಮರ್ಥ್ಯ ಬಂದಂತೆ ಭಾವನೆ ಮೂಡುತ್ತದೆ. ಆರೋಗ್ಯ ಸಮಸ್ಯೆಗಳಿಂದ ಹೊರಬರುವುದಕ್ಕೆ ಈ ದಿಕ್ಕು ಒಳ್ಳೆಯದು. ಇನ್ನು ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಾಗುತ್ತದೆ ಮತ್ತು ಕಲಿತ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ. ಸ್ಮರಣ ಶಕ್ತಿ ಹೆಚ್ಚಾಗುತ್ತದೆ.


*ಯಶಸ್ಸು ಬೇಕು ಎಂದು ಬಯಸುವವರಿಗೆ ಪಶ್ಚಿಮಕ್ಕೆ ತಲೆ ಹಾಕಿ ಮಲಗುವುದು ಉತ್ತಮ. ಈ ದಿಕ್ಕಿಗೆ ತಲೆ ಹಾಕಿ ಮಲಗಲು ಆಅರಂಭಿಸಿದ ಮೇಲೆ ಜೀವನದಲ್ಲಿ ಬದಲಾವಣೆ ಆಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡಲು ಆರಂಭವಾಗುತ್ತದೆ. ಉಪಯುಕ್ತ ಕೆಲಸ ಮಾಡುತ್ತಿರುವ ನಂಬಿಕೆ ಬರುತ್ತದೆ. ಯಾವುದೇ ನಕಾರಾತ್ಮಕ ಶಕ್ತಿಯ ಪರಿಣಾಮ ನಿಮ್ಮ ಮೇಲೆ ಆಗುತ್ತಿದ್ದರೆ ಅದರಿಂದ ಆಚೆ ಬರಬಹುದು. ಹೆಸರು, ಕೀರ್ತಿ, ಯಶಸ್ಸು ಪಡೆಯಲು ಸಹಕಾರಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments