Webdunia - Bharat's app for daily news and videos

Install App

ಪತಿ, ಪತ್ನಿ ನಡುವೆ ಸಾಮರಸ್ಯವಿಲ್ಲವೇ? ವಾಸ್ತು ತೊಂದರೆಗಳನ್ನು ಪರಿಹರಿಸಿ

Webdunia
ಶುಕ್ರವಾರ, 22 ಡಿಸೆಂಬರ್ 2023 (12:50 IST)
ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ಪ್ರಕಾರ, ಆಗ್ನೇಯ ದಿಕ್ಕು ಬೆಂಕಿ ಮತ್ತು ಬೆಂಕಿ ಸಂಬಂಧಿತ ವಸ್ತುಗಳನ್ನು ಸಂಕೇತಿಸುತ್ತದೆ. ಸೂರ್ಯ ಆಗ್ನೇಯ ದಿಕ್ಕಿಗೆ ಮುಟ್ಟಿದ ಕೂಡಲೇ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ.

ಚರ್ಮಕ್ಕೆ ಈ ಕಿರಣಗಳು ಹಾನಿಕರವಾಗಿದ್ದು, ಕೋಣೆಯಲ್ಲಿ ಸಂಗ್ರಹವಾಗಿದ್ದರೆ ಜೀವನ ಅಹಿತಕಾರಿಯಾಗುತ್ತದೆ. ಪ್ರಾಣಿಗಳು ಹೋರಾಟ ಮಾಡುವ ಚಿತ್ರಗಳನ್ನು, ಭೇಟೆಯಾಡುವ ಸಿಂಹ, ಬೆಂಕಿಯ ದೃಶ್ಯಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು, ಪಾರಿವಾಳಗಳು, ಕಾಗೆಗಳು, ಸಿಂಹ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬೇಡಿ.
 
ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.
 
ಕುಟುಂಬದ ಸದಸ್ಯರ ಜತೆ ಸಾಮರಸ್ಯ 
 
ವಿವಾಹದ ಬಳಿಕ ಕುಟುಂಬದ ಇತರೆ ಸದಸ್ಯರ ಜತೆ ಮಧುರ ಸಂಬಂಧ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅನಿಲ ಸ್ಟೌವ್ ಮತ್ತು ಸಿಂಕ್ ವಿಶ್ಲೇಷಣೆ ಮಾಡಿ. ಅನಿಲ ಸ್ಟೌವ್ ಅಗ್ನಿಯಾಗಿದ್ದು, ಸಿಂಕ್ ನೀರನ್ನು ಪ್ರತಿನಿಧಿಸುತ್ತದೆ. ಅಗ್ನಿ ಶಕ್ತಿ ಮತ್ತು ಜಲಶಕ್ತಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದ್ದರೆ ಕುಟುಂಬದ ಸಂಬಂಧ ಅಸ್ತವ್ಯಸ್ತಗೊಳ್ಳುತ್ತದೆ.
 
ಚಾಕು ಮತ್ತು ಕತ್ತರಿಗಳು 
 
ಅಡುಗೆಮನೆಯಲ್ಲಿ ಚಾಕು ಮತ್ತು ಕತ್ತರಿಗಳನ್ನು ಮುಚ್ಚಿಡಬೇಕು. ಚಾಕು ಮತ್ತು ಕತ್ತರಿಗಳನ್ನು ಮುಕ್ತವಾಗಿ ತೆರೆದಿಡುವುದು ಕೆಟ್ಟ ಸಂಬಂಧಕ್ಕೆ ದಾರಿ ಕಲ್ಪಿಸುತ್ತದೆ. ಉಪ್ಪಿನಕಾಯಿಯನ್ನು ಕೂಡ ಮುಚ್ಚಿಡಬೇಕು. ಉಪ್ಪಿನಕಾಯಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಕೂಡ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ. 
 
ಮಕ್ಕಳು: 
 
ನವವಿವಾಹಿತರು ಅಥವಾ ದಂಪತಿ ಮಗುವೊಂದನ್ನು ಬಯಸಿದ್ದರೆ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಲಗಬಾರದು. ಈ ಮ‌ೂಲೆಯಿಂದ ಬಲವಾದ ಆಯಸ್ಕಾಂತೀಯ ಶಕ್ತಿಗಳು ಗರ್ಭದಾರಣೆ ಮತ್ತು ಮಗುವಿನ ಉಳಿವಿನ ಬಗ್ಗೆ ಕೆಟ್ಟದನ್ನು ಸೃಷ್ಟಿಸಬಹುದು. ನಿಮ್ಮ ಮಲಗುವ ಕೋಣೆ ಕೆಂಪು ಅಥವಾ ತೀರಾ ತೀಕ್ಷ್ಣ ಬಣ್ಣದಿಂದ ಕೂಡಿರದಂತೆ ನೋಡಿಕೊಳ್ಳಿ. ನಿಮ್ಮ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಪರೀಕ್ಷಿಸಿ. ಅದನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಗರ್ಭದಾರಣೆ ಸಮಸ್ಯೆಗಳು ಬರಬಹುದು. ನಿಮ್ಮ ಮನೆಯಲ್ಲಿ ಹೂವು ಬಿಡದ ಮರಗಳಿದ್ದರೆ, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು.
 
ಆರೋಗ್ಯಕರ ಲೈಂಗಿಕ ಸಂಬಂಧ 
 
ಕೋಣೆಯ ಬಣ್ಣಗಳನ್ನು ಪರೀಕ್ಷಿಸಿ, ಬಣ್ಣ ಮಂದವಾಗಿರಬಾರದು. ಬಿಳಿಯ ಬಣ್ಣ ಅಥವಾ ಸಂಪೂರ್ಣ ನೇರಳೆ ಬಣ್ಣ ಆಧ್ಯಾತ್ಮದ ಸಂಕೇತವಾಗಿದ್ದು,ದಂಪತಿ ಅವುಗಳನ್ನು ಮಲಗುವ ಕೋಣೆಗಳಲ್ಲಿ ಬಳಸಬಾರದು. ದಂಪತಿ ಈಶಾನ್ಯ ಕೋಣೆಗಳನ್ನು ಆಕ್ರಮಿಸಬಾರದು. ವಿಷೇಷವಾಗಿ ವಿವಾಹಿತ ಜೀವನದಲ್ಲಿ ಪ್ರೀತಿ ಪ್ರದರ್ಶನಕ್ಕೆ ದಂಪತಿ ಕೋಣೆಯಲ್ಲಿ ಒಂಟಿ ಬಾತುಕೋಳಿ, ಚಿಟ್ಟೆ, ಹಕ್ಕಿ, ಜಿಂಕೆಯ ಚಿತ್ರಗಳಿರಬಾರದು. ವಿವಾಹಿತ ಜೀವನದಲ್ಲಿ ಒತ್ತಡವು ಲೈಂಗಿಕತೆಗೆ ಒಂದು ದೊಡ್ಡ ಶತ್ರು. ಕಂಪ್ಯೂಟರ್‌ಗಳನ್ನು ಇರಿಸುವ ಮ‌ೂಲಕ ಮಲಗುವಕೋಣೆಯಲ್ಲಿ ಕಚೇರಿ ಪರಿಸರವನ್ನು ಸೃಷ್ಟಿಸಬೇಡಿ.
 
ಆರ್ಥಿಕ ಶಕ್ತಿ 
 
ಸುಖವಾದ ದಾಂಪತ್ಯಕ್ಕೆ ಸಾಕಷ್ಟು ಹಣಕಾಸು ಅವಿಭಾಜ್ಯ ಅಂಗ. ಸೂಕ್ಷ್ಮ ಮತ್ತು ಅಧಿಕಾರಯುತ ದಿಕ್ಕುಗಳಾದ ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಪೋಷಿಸಲು ಎಚ್ಚರಿಕೆ ವಹಿಸಬೇಕು. ಉತ್ತರದ ಕಡೆಗಳಲ್ಲಿ ಹೆಚ್ಚು ಕಿಟಕಿಗಳು ಇರಬೇಕು. ರಸ್ತೆ ಕೊನೆಗೊಳ್ಳುವT-Facing ಮನೆಗಳು ಶುಭಕರವಲ್ಲ. ಅದೊಂದು ವಿಶಮಿಶ್ರಿತ ಬಾಣ ನಿಮ್ಮ ಕಡೆಗೆ ಬಿಟ್ಟ ಹಾಗಿರುತ್ತದೆ. ಮಾನವ ಸಂಬಂಧಗಳು ದೇಹದ ನರಗಳಂತೆ ಜಟಿಲವಾಗಿದೆ. ಇನ್ನೊಂದು ಸಂಬಂಧದಿಂದ ಪ್ರತಿಯೊಬ್ಬ ವ್ಯಕ್ತಿ ಅತೀ ನಿರೀಕ್ಷೆ ಇಟ್ಟುಕೊಳ್ಳುತ್ತಾನೆ. ವಾಸ್ತು ನಿಸರ್ಗದ ಕಾನೂನಿಗೆ ಸಮ್ಮತಿಸುತ್ತದೆ. ಬೇರೆಯವರಿಂದ ಏನನ್ನು ಬಯಸುತ್ತೇವೊ, ಅದನ್ನು ನಾವೂ ಕೊಡಬೇಕು. ನಾವು ಉಸಿರನ್ನು ಎಳೆದುಕೊಂಡರೆ ಉಸಿರನ್ನು ಹೊರಕ್ಕೆ ಬಿಡಲೇಬೇಕಾಗುತ್ತದೆ. ಆದ್ದರಿಂದ ಕೊಟ್ಟು ತೆಗೆದುಕೊಳ್ಳುವ ತತ್ವದಿಂದ ವೈವಾಹಿಕ ದಾಂಪತ್ಯ ಸುಖಕರವಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2025: ಮಕರ ರಾಶಿಯವರಿಗೆ 2025 ರಲ್ಲಿ ಆರೋಗ್ಯದ ಬಗ್ಗೆ ಚಿಂತೆ ಬೇಡ

Horoscope 2025: ಧನು ರಾಶಿಯವರಿಗೆ ಆರೋಗ್ಯದಲ್ಲಿ ಕುಟುಂಬಕ್ಕೂ ತೊಂದರೆ

Horoscope 2025: ವೃಶ್ಚಿಕ ರಾಶಿಯವರ ಆರೋಗ್ಯ ಆರಂಭದಲ್ಲಿದ್ದಂತೆ ಕೊನೆಯವರೆಗೂ ಇರಲ್ಲ

Horoscope 2025: ತುಲಾ ರಾಶಿಯವರಿಗೆ 2025 ರಲ್ಲಿ ಆರೋಗ್ಯ ಪದೇ ಪದೇ ಕೈ ಕೊಡುತ್ತದೆ

Horoscope 2025: ಕನ್ಯಾ ರಾಶಿಯವರಿಗೆ ವರ್ಷಾರಂಭದಲ್ಲಿ ಆರೋಗ್ಯದಲ್ಲಿ ಉತ್ತಮ ಫಲ

ಮುಂದಿನ ಸುದ್ದಿ