Webdunia - Bharat's app for daily news and videos

Install App

Horoscope 2025: ವೃಷಭ ರಾಶಿಯವರಿಗೆ 2025 ರಲ್ಲಿ ಆರೋಗ್ಯದ ವಿಚಾರದಲ್ಲಿ ಗುಡ್ ನ್ಯೂಸ್

Krishnaveni K
ಗುರುವಾರ, 21 ನವೆಂಬರ್ 2024 (08:59 IST)
ಬೆಂಗಳೂರು: 2025 ರ ಈ ವರ್ಷ ವೃಷಭ ರಾಶಿಯವರಿಗೆ ಆರೋಗ್ಯದ ವಿಚಾರವಾಗಿ ಉತ್ತಮ ಫಲಗಳು ಕಂಡುಬರಲಿದ್ದು, ಮನಸ್ಸಿಗೂ ನೆಮ್ಮದಿಯಾಗಲಿದೆ. ಈ ವರ್ಷದ ಆರೋಗ್ಯ ಫಲ ಇಲ್ಲಿದೆ ನೋಡಿ.

ವೃಷಭ ರಾಶಿಯವರು ಬೇಗನೇ ಶೀತ, ಕೆಮ್ಮು ಇತ್ಯಾದಿ ರೋಗಗಳಿಗೆ ಒಳಗಾಗುತ್ತಾರೆ. ಅಲ್ಲದೆ ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆದರೆ ಈ ವರ್ಷ ಈ ರಾಶಿಯವರಿಗೆ ಆರೋಗ್ಯ ವಿಚಾರದಲ್ಲಿ ಶುಭ ಫಲಗಳಿವೆ. ಹಿಂದಿನ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಲಿವೆ.

ಎರಡನೇ ಮನೆಗೆ ಗುರುವಿನ ಚಲನೆಯಿಂದಾಗಿ ನಿಮ್ಮ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆ ಕಾಣುವಿರಿ. ಆತಂಕ, ಒತ್ತಡ ಇತ್ಯಾದಿ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಿವಾರಣೆಯಾಗಲಿದೆ. ಈ ವರ್ಷ ವೈದ್ಯಕೀಯ ಖರ್ಚು ವೆಚ್ಚಗಳು ತಕ್ಕಮಟ್ಟಿಗೆ ಕಡಿಮೆಯಾಗಲಿದೆ ಎನ್ನುವುದೇ ಸಮಾಧಾನಕರ ಅಂಶವಾಗಿದೆ.

ಹಾಗಂತ ಆರೋಗ್ಯಕರ ಆಹಾರ, ಚಟುವಟಿಕೆಗಳನ್ನು ಮಾಡುವುದನ್ನು ತಪ್ಪಿಸಬೇಡಿ. ಯೋಗಾಭ್ಯಾಸಗಳು, ಪ್ರಾಣಾಯಾಮದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಿ. ವರ್ಷದ ಆರಂಭದಲ್ಲಿ ಆರೋಗ್ಯ ಸಮಸ್ಯೆ ಬಂದರೂ ಮಧ್ಯಾವಧಿಯಿಂದ ನಿಮ್ಮ ಆರೋಗ್ಯ ಸುಧಾರಣೆಯಾಗುತ್ತಾ ಬರುವುದು. ಹೀಗಾಗಿ ಈ ವರ್ಷ ಹೆಚ್ಚು ಚಿಂತೆ ಬೇಡ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Mrthyunjaya mantra: ರೋಗ ಭಯ, ಅಕಾಲ ಮೃತ್ಯುಭಯ ನಾಶಕ್ಕೆ ಮೃತ್ಯುಂಜಯ ಅಷ್ಟೋತ್ತರ

ಜೀವನದಲ್ಲಿ ಸುಖ, ನೆಮ್ಮದಿಗಾಗಿ ಭಾನುವಾರ ಬೆಳಗ್ಗೆ ಈ ಪೂಜೆ ಮಾಡಿ

Shani Astotthara: ಶನಿ ಅಷ್ಟೋತ್ತರವನ್ನು ತಪ್ಪದೇ ಓದಿ

Lakshmi mantra: ಆದಿಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Narasimhastakam: ನರಸಿಂಹಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

ಮುಂದಿನ ಸುದ್ದಿ
Show comments