Webdunia - Bharat's app for daily news and videos

Install App

Family horoscope 2025: ಕುಂಭ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಭವಿಷ್ಯ ಹೇಗಿರಲಿದೆ

Krishnaveni K
ಬುಧವಾರ, 27 ನವೆಂಬರ್ 2024 (08:41 IST)
Photo Credit: X
ಬೆಂಗಳೂರು: 2025 ರಲ್ಲಿ ಕುಂಭ ರಾಶಿಯವರಿಗೆ ಕೌಟುಂಬಿಕವಾಗಿ ಭವಿಷ್ಯ ಹೇಗಿರಲಿದೆ, ಮನೆಯವರೊಂದಿಗೆ ಸಂಬಂಧ ಉತ್ತಮವಾಗಿರುತ್ತದಾ ಇಲ್ಲಿದೆ ನೋಡಿ ವಿವರ.

ಕುಂಭ ರಾಶಿಯವರಿಗೆ 2025 ಸಕಾರಾತ್ಮಕ ಮತ್ತು ಫಲಪ್ರದ ವರ್ಷವಾಗಿರಲಿದೆ. ಕುಟುಂಬದಲ್ಲಿ ಸಕಾರಾತ್ಮಕ ಅಭಿವೃದ್ಧಿ, ಬೆಳವಣಿಗೆಗಳು ನಡೆಯಲಿದೆ. ಪರಸ್ಪರ ಸಹಕಾರ, ನೆಮ್ಮದಿ, ಪ್ರೀತಿ-ವಿಶ್ವಾಸ ವೃದ್ಧಿಯಾಗುವುದು. ಕೆಲವೊಂದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ವಿಶ್ವಾಸವಾಗಿದೆ.

ಪ್ರೇಮಿಗಳಿಗೆ ಈ ವರ್ಷ ಶುಭದಾಯಕವಾಗಿರುತ್ತದೆ. ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಮನದಾಳವನ್ನು ಹಂಚಿಕೊಳ್ಳಲಿದ್ದೀರಿ. ವರ್ಷದ ಆರಂಭದಲ್ಲಿ ವೈಯಕ್ತಿಕವಾಗಿ ಕೆಲವೊಂದು ಸಮಸ್ಯೆಗಳು ಬಂದರೂ ಪ್ರೀತಿ ಪಾತ್ರರ ಬೆಂಬಲದೊಂದಿಗೆ ಪುಟಿದೇಳಲಿದ್ದೀರಿ. ಬುಧನ ದೆಸೆಯಿಂದ ಭಾವನಾತ್ಮಕ ಸನ್ನಿವೇಶಗಳು ಎದುರಾಗಲಿವೆ.

ಏಪ್ರಿಲ್ ಕೊನೆಯಲ್ಲಿ ಮನೆಯಲ್ಲಿ ಶುಭ ಕಾರ್ಯಗಳನ್ನು ಮಾಡಲಿದ್ದೀರಿ. ಆಗಸ್ಟ್ ನಲ್ಲಿ ಸಂಗಾತಿಯೊಂದಿಗೆ ಕೆಲವು ಮನಸ್ತಾಪಗಳು ಬಂದೀತು. ಸೆಪ್ಟೆಂಬರ್ ನಲ್ಲಿ ಪರಿಸ್ಥಿತಿ ಕೊಂಚ ತಿಳಿಯಾಗುವುದು.

ವರ್ಷಾಂತ್ಯದಲ್ಲಿ ಪ್ರೀತಿ ಪಾತ್ರರೊಂದಿಗೆ ಹೊಸ ಜಾಗಗಳಿಗೆ ಭೇಟಿ ನೀಡಲಿದ್ದೀರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ವರ್ಷವಿಡೀ ನಿಮ್ಮ ಕೆಲಸಗಳಿಗೆ ಕುಟುಂಬದವರ ಸಾಥ್ ಸಿಗುವುದು. ಕೆಲಸ ಮತ್ತು ಕುಟುಂಬ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗಣೇಶನ ಅನುಗ್ರಹಕ್ಕಾಗಿ ಇಂದು ತಪ್ಪದೇ ಈ ಮಂತ್ರವನ್ನು ಓದಿ

ಶತ್ರುಭಯ ನಾಶಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ರೋಗ, ಮೃತ್ಯು ಭಯ ನಾಶಕ್ಕಾಗಿ ಶಿವನ ಈ ಸ್ತೋತ್ರ ಓದಿ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments