ನಿಮ್ಮ ಕೋರಿಕೆಗಳು ಈಡೇರಲು ಸೋಮವಾರದಂದು ಹೀಗೆ ಮಾಡಿ

Webdunia
ಗುರುವಾರ, 16 ಜನವರಿ 2020 (06:13 IST)
ಬೆಂಗಳೂರು : ಕುಟುಂಬದ ಕಲಹ  ದೂರಮಾಡಲು, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು, ಅನಾರೋಗ್ಯ ಸಮಸ್ಯೆ ನಿವಾರಣೆಯಾಗಲು ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಈ ಪರಿಹಾರ ಮಾಡಿಕೊಳ್ಳಿ.



ಈ ಪರಿಹಾರವನ್ನು ಸೋಮವಾರದಂದು ಬೆಳಿಗ್ಗಿನ ಜಾವ ಶಿವ ದೇವಾಲಯದಲ್ಲಿ ಅಥವಾ ಮನೆಯ ದೇವರ ಕೋಣೆಯಲ್ಲಿರುವ ಶಿವನ ಫೋಟೊ ಅಥವಾ ಶಿವಲಿಂಗದ ಮುಂದೆ ಮಾಡಬಹುದು. ಬೆಳಿಗ್ಗೆ ಸ್ನಾನಾಧಿಗಳನ್ನು ಮುಗಿಸಿ ಶಿವನ ಮುಂದೆ 2 ಕರ್ಪೂರ ಹಾಗೂ 1 ಲವಂಗವನ್ನು ಇಡಬೇಕು. ಬಳಿಕ ದೇವರ ಮುಂದೆ ತುಪ್ಪದ ದೀಪ ಹಚ್ಚಿ, ಬಳಿಕ “ಓಂ ನಮಃ ಶಿವಾಯ” ಎಂದು 21 ಬಾರಿ ಜಪಿಸಿ, ಆಮೇಲೆ ಕರ್ಪೂರ , ಲವಂಗವನ್ನು ತೆಗೆದುಕೊಂಡು ನಿಮ್ಮ ಬಲಗೈಯಲ್ಲಿ ಹಿಡಿದುಕೊಂಡು ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನು ಬೇಡಿಕೊಳ್ಳಬೇಕು.


ಬಳಿಕ ಅದನ್ನು ಮನೆಯಲ್ಲಿರುವ ತುಳಸಿ ಕಟ್ಟೆಯ ಬಳಿ ಕರ್ಪೂರದ ಮೇಲೆ  ಲವಂಗ ಇಟ್ಟು ದೀಪ ಹಚ್ಚಿ ಸಂಕಲ್ಪ ಮಾಡಿಕೊಳ್ಳಬೇಕು. ಹಾಗೇ ಈ ದೀಪವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮಾತ್ರ ಹಚ್ಚಬೇಕು. ಪ್ರತಿ ಸೋಮವಾರದಂದು ಹೀಗೆ ಮಾಡಿದರೆ ನಿಮ್ಮ ಕೋರಿಕೆಗಳು ಈಡೇರುತ್ತದೆ. 


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ದಿನ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ

ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರಂ ತಪ್ಪದೇ ಓದಿ

ದೀಪಾವಳಿ ಬಳಿಕ ಈ ಐದು ರಾಶಿಯವರಿಗೆ ಸಂಕಷ್ಟ ತಪ್ಪಿದ್ದಲ್ಲ

ಗ್ರಹಗತಿಗಳ ದೋಷ ನಿವಾರಣೆಗೆ ನವಗ್ರಹ ಕವಚಂ ಸ್ತೋತ್ರ ಓದಿ

ದೀಪಾವಳಿ ಸಂದರ್ಭದಲ್ಲಿ ಯಾವ ರಾಶಿಯವರು ಯಾವ ಲಕ್ಷ್ಮೀ ಮಂತ್ರ ಹೇಳಬೇಕು ನೋಡಿ

ಮುಂದಿನ ಸುದ್ದಿ
Show comments