Webdunia - Bharat's app for daily news and videos

Install App

Baba Vanga: ಬಾಬಾ ವಂಗಾ ಭವಿಷ್ಯವಾಣಿ ಪ್ರಕಾರ 2025 ಈ 3 ರಾಶಿಯವರು ಶ್ರೀಮಂತರಾಗುತ್ತಾರೆ

Krishnaveni K
ಮಂಗಳವಾರ, 26 ನವೆಂಬರ್ 2024 (14:54 IST)
Photo Credit: X
ಬೆಂಗಳೂರು: ಬಾಬಾ ವಂಗಾ 2025 ರಲ್ಲಿ ಏನೆಲ್ಲಾ ನಡೆಯಲಿದೆ ಎಂಬ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಬಾಬಾ ವಂಗಾ 2025 ರಲ್ಲಿ ಈ ಮೂರು ರಾಶಿಯವರು ಅತ್ಯಂತ ಶ್ರೀಮಂತರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಆ ಮೂರು ರಾಶಿಯವರು ಯಾರು ಎಂದು ನೋಡೋಣ.

 
ತಮ್ಮ ಮರಣದ 28 ವರ್ಷಗಳ ಬಳಿಕವೂ ಬಾಬಾ  ವಂಗಾ ಭವಿಷ್ಯದ ಬಗ್ಗೆ ಜನರಲ್ಲಿ ಅಪಾರ ನಂಬಿಕೆಯಿದೆ. ಅವರು ಹೇಳುವ ಬಹುತೇಕ ಭವಿಷ್ಯಗಳು ನಿಜವಾಗಿದೆ. ಇದೀಗ 2025 ರಲ್ಲಿ ವಿಶೇಷವಾಗಿ ಮೂರು ರಾಶಿಯವರು ಹಣ ಗಳಿಸುತ್ತಾರೆ ಎಂಬ ಬಗ್ಗೆ ಭವಿಷ್ಯ ನುಡಿದಿದ್ದು ವೈರಲ್ ಆಗಿದೆ. ಆ ಮೂರು ರಾಶಿಗಳು ಯಾವುದೆಲ್ಲಾ ನೋಡಿ.

 
ಮೇಷ ರಾಶಿ
2025 ರಲ್ಲಿ ಮೇಷ ರಾಶಿಯವರು ಅತ್ಯಂತ ಪ್ರಬಲರಾಗಿರುತ್ತಾರೆ ಎಂದು ಬಾಬಾ ವಂಗಾ ಭವಿಷ್ಯವಾಣಿಯಲ್ಲಿ ಹೇಳಲಾಗಿದೆ. ಈ ರಾಶಿಯವರು ಈ ವರ್ಷ ಅತ್ಯಂತ ಭಾಗ್ಯಶಾಲಿಗಳಾಗಿರುತ್ತಾರೆ ಮತ್ತು ಅವರ ಮುನ್ನಡೆಗೆ ಯಾವುದೇ ಅಡೆತಡೆಗಳು ಇರುವುದಿಲ್ಲ. ಈ ರಾಶಿಯವರ ಸುಖ, ಶಾಂತಿ, ಸೃಮದ್ಧಿ ಹೆಚ್ಚಾಗುವುದು. ಸಮಾಜದಲ್ಲಿ ಗೌರವವೂ ಪ್ರಾಪ್ತಿಯಾಗಲಿದೆ. ಸಂಪಾದನೆ ವಿಷಯದಲ್ಲಿ ಈ ವರ್ಷ ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದೆ.

ಕರ್ಕಟಕ ರಾಶಿ
ಮೇಷ ರಾಶಿಯವರಂತೆ ಕರ್ಕಟಕ ರಾಶಿಯವರಿಗೂ ಈ ವರ್ಷ ಅದೃಷ್ಟದ ವರ್ಷವಾಗಿದೆ. ಚಂದ್ರನ ಈ ರಾಶಿಯೂ ಈ ವರ್ಷ ಉನ್ನತಿಯಲ್ಲಿರುತ್ತದೆ. ತಮ್ಮ ಪರಿಶ್ರಮದ ಪರಿಪೂರ್ಣ ಲಾಭ ಪಡೆಯಲಿದ್ದಾರೆ. ಜಾತಕದಲ್ಲಿ ಗ್ರಹಗಳ ಚಲನೆ ಅನುಕೂಲ ಸ್ಥಿತಿಯಲ್ಲಿರುತ್ತದೆ. ಇದರಿಂದ ಯಶಸ್ಸಿನ ಜೊತೆಗೆ ಅಪಾರ ಖುಷಿಯೂ ಇರುತ್ತದೆ. ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಸಿಗುತ್ತದೆ. ಭಾರೀ ಧನಲಾಭವಾಗಲಿದೆ. ಹೊಸ ಕೆಲಸಗಳನ್ನು ಆರಂಭಿಸಲು ಇದು ಹೇಳಿಮಾಡಿಸಿದ ವರ್ಷವಾಗಿದೆ.

ಮಿಥುನ ರಾಶಿ
ಬಾಬಾ ವಂಗಾ ಭವಿಷ್ಯ ವಾಣಿಯಂತೆ ಮಿಥುನ ರಾಶಿಯವರಿಗೂ 2025 ನೇ ವರ್ಷ ಅತ್ಯಂತ ಫಲಪ್ರದ ವರ್ಷವಾಗಿದೆ. ಜೀವನದ ಎಲ್ಲಾ ಸಂಕಷ್ಟಗಳು ದೂರವಾಗಿ ಖುಷಿಯಿಂದ ಕಾಲ ಕಳೆಯುವ ಯೋಗವಿರಲಿದೆ. ಭಾಗ್ಯವೂ ಜೊತೆಯಿರುವುದರಿಂದ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣುವಿರಿ. ಹಣಕಾಸಿನ ವಿಚಾರದಲ್ಲಿ ಅದೃಷ್ಟವಂತರಾಗಲಿದ್ದೀರಿ. ಅಚಾನಕ್ ಆಗಿ ಯಾವುದಾದರೂ ಮೂಲಗಳಿಂದ ಹಣ, ಆದಾಯ ಬರಲಿದೆ. ಹೊಸ ವ್ಯವಹಾರಗಳಿಗೆ ಕೈ ಹಾಕಿದರೆ ಈ ವರ್ಷ ಸಾಕಷ್ಟು ಯಶಸ್ಸು ಸಂಪಾದಿಸಲಿದ್ದೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

ಮುಂದಿನ ಸುದ್ದಿ
Show comments