Webdunia - Bharat's app for daily news and videos

Install App

ತಲಕಾಡು

ಇಳಯರಾಜ
WD
ಇದು ಕೇವಲ ಧಾರ್ಮಿಕ ಸ್ಥಳವಷ್ಟೇ ಅಲ್ ಲ, ಪ್ರವಾಸಿ ತಾಣವೂ ಹೌದು. ಕಾವೇರಿಯ ಮಡಿಲಲ್ಲಿರುವ ಈ ಸ್ಥಳ ಟಿ ನರಸೀಪುರ ತಾಲೂಕಿನಲ್ಲಿದೆ.

ಮಳವಳ್ಳಿ ಮತ್ತು ಟಿ ನರಸೀಪುರದಿಂದ ಸುಮಾರು 30 ಕಿ. ಮೀ. ದೂರದಲಲಿ ಈ ಸ್ಥಳವಿದೆ. ದಟ್ಟವಾದ ಅರಣ್ಯದಿಂದಾಗಿ ಈ ಸ್ಥಳಕ್ಕೆ ತಲಕಾಡು ಎಂಬ ಹೆಸರು ಬಂದಿದೆ. ಗಂಗ ರ, ಚೋಳರ ು, ಹೊಯ್ಸಳರು ಈ ಪ್ರದೇಶವನ್ನು ಆಳಿದ್ದಾರೆ.

ಮರಳಿನಿಂದ ಆವೃತವಾಗಿರುವ ಈ ಸ್ಥಳ ನೋಡುಗರ ಆಕರ್ಷಣೆ. ಇಲ್ಲಿ ಕಾವೇರಿಯು ಯಾವುದೇ ಆರ್ಭಟವಿಲ್ಲದ ೆ, ಪ್ರಶಾಂತವಾಗಿ ಹರಿಯುತ್ತದೆ. ಈಜಾಡಲು ಇದು ಸೂಕ್ತ ಸ್ಥಳ. ಇಲ್ಲಿ ಬೋಟಿಂಗ್ ಕೂಡ ಮಾಡಬಹುದು. ಮರಳಿನಲ್ಲಿ ಅಡ್ಡಾಡಬಹುದು.

ಹೊಯ್ಸಳರು ಕಟ್ಟಿಸಿದ ಕೀರ್ತಿನಾರಾಯಣ ದೇವಾಲ ಯ, ವೈದ್ಯೇಶ್ವರ ದೇವಾಲಯ ಮತ್ತು ಗೌರಿ ಶಂಕರ ದೇವಾಲಯ ಶಿಲ್ಪಕಲೆಯ ಸಿರಿಯನ್ನು ಹೊಂದಿವೆ.

ವಿಜಯನಗರದ ರಾಜಪ್ರತಿನಿಧಿ ಶ್ರೀರಂಗರಾಯನು ತನ್ನ ಹೆಂಡತಿಯೊಂದಿಗೆ ವ್ಯಾದಿ ಪರಿಹಾರಕ್ಕಾಗಿ ಇಲ್ಲಿನ ವೈದ್ಯೇಶ್ವರನ ಅರ್ಚನೆಗೆ ಬಂದಿದ್ದ. ಆತ ಅಲ್ಲಿಯೇ ಖಾಯಿಲೆ ಉಲ್ಬಣಿಸಿ ಸತ್ತಹೋದ. ಸುದ್ದಿ ತಿಳಿದ ಮೈಸೂರಿನ ಒಡೆಯರು ಸೈನ್ಯ ಸಮೇತ ಬಂದು ಶ್ರೀರಂಗರಾಯನ ಹೆಂಡತಿ ಧರಿಸಿದ್ದ ಅತ್ಯಮೂಲ್ಯವೆಂದು ಪ್ರಸಿದ್ಧವಾಗಿದ್ದ ಮೂಗುತಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ಆಕೆ ತನ್ನ ಮೂಗುತಿಯನ್ನು ಮಾಲಂಗಿ ಮಡುವಿಗೆಸೆದಳು.

ಮಾಲಂಗಿ ಮಡುವಾಗಿ ತಲಕಾಡು ಮರುಳಾಗಿ ಮೈಸೂರು ರಾಜರಿಗೆ ಗಂಡು ಮಕ್ಕಳಾಗದಿರಲಿ ಎಂದು ಶಾಪ ಹಾಕಿದಳು ಎಂಬ ಕಥೆ ಇದೆ. ಸುಮಾರು 12-13 ವರ್ಷಕ್ಕೆ ಒಮ್ಮೆ ಇಲ್ಲಿ ಪಂಚಲಿಂಗ ದರ್ಶನ ಎಂಬ ಮಹೋತ್ಸವ ನಡೆಯುತ್ತದೆ.

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು

Show comments