Webdunia - Bharat's app for daily news and videos

Install App

ಜೈನ ಧರ್ಮದ ಪ್ರಸಾರ

ಇಳಯರಾಜ
WD
ಮಹಾವೀರನ ನಂತರ ಜೈನ ಧರ್ಮ ವ್ಯಾಪಕವಾಗಿ ಬೆಳೆಯಿತು. ಮಹಾವೀರನ ಕಾಲದಲ್ಲಿ ಲಿಗಾಂಧಾರಳಿರೆಂಬ 11 ಮಂದಿ ಅನುಯಾಯಿಗಳಿದ್ದರು.

ಇವರಲ್ಲಿ ಸುಧರ್ಮ ಎಂಬುವವನು ಮಹಾವೀರನ ನಂತರ ಜೈನ ಧರ್ಮದ ಪ್ರಚಾರದ ನೇತೃತ್ವ ವಹಿಸಿದ. ಇವನ ನಂತರ ಜೈನ ಧರ್ಮದ ಮುಖಂಡತ್ವವನ್ನು ಜಂಬೂ ಎಂಬುವವನು ವಹಿಸಿದನು.

ಅನಂತರ ಜೈನ ಸಂಘದ ಇತಿಹಾಸ ಅಸ್ಪಷ್ಟವಾಗಿದೆ. ನಂದರ ಆಳ್ವಿಕೆಯ ಕೊನೆಯಲ್ಲಿ ಭದ್ರಬಾಹು ಮತ್ತು ಶಂಭೂತ ವಿಜಯ ಎಂಬುವವರು ಮುಖ್ಯಸ್ಥರಾಗಿ ಕಂಡು ಬರುತ್ತಾರೆ. ನಂತರ ಸ್ಥೂಲ ಭದ್ರನೆಂಬುವವನು ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಜೈನ ಸಂಘದ ಮುಖ್ಯಸ್ಥನಾಗುತ್ತಾನೆ.

ಮಹಾವೀರನ ಜೀವಿತಾವಧಿಯಲ್ಲಿ ಗಂಗಾನದಿಯ ಪರಿಸರದ ಮಗ ಧ, ವಿದೇ ಹ, ಅಂಗ ರಾಜ್ಯಗಳಲ್ಲಿ ಪ್ರಚಾರ
ಮಾಡಿದ್ದನು. ಚಂಪಾ ಮಿಥಿಲ ಾ, ಶ್ರಾವಸ್ತ ಿ, ವೈಶಾಲ ಿ, ರಾಜಗೃಹ ಮುಂತಾದ ನಗರಗಳಲ್ಲಿ ಜೈನಧರ್ಮಕ್ಕೆ ಉತ್ತಮ ಪ್ರತಿಕ್ರಿಯೆಯಿತ್ತು. ಮಹಾವೀರನ ಅಂತ್ಯ ಕಾಲಕ್ಕೆ ಜೈನ ಧರ್ಮದ 14,000 ಸನ್ಯಾಸಿ ಸನ್ಯಾಸಿನಿಯರು ಹಾಗೂ 30,000 ಸಾಮಾನ್ಯ ಅನುಯಾಯಿಗಳಿದ್ದರೆಂದು ತಿಳಿದುಬರುತ್ತದೆ.

ದಕ್ಷಿಣ ಭಾರತದಲ್ಲಿ ಜೈನ ಧರ್ಮ ಪ್ರಸಾರಕ್ಕೆ ಮುಖ್ಯ ಕಾರಣನಾದವು ಭದ್ರಬಾಹು ಈತನು ಕ್ರಿ. ಪೂ. ನಾಲ್ಕನೆ ಶತಮಾನದ ಕೊನೆಗೆ ಮಗಧದಲ್ಲಿ ಭೀಕರ ಕ್ಷಾಮವು ಉಂಟಾಗಲು ತನ್ನ ಶಿಷ್ಯರೊಂದಿಗೆ ದಕ್ಷಿಣಕ್ಕೆ ಪ್ರಯಾಣ ಮಾಡಿ ಮೈಸೂರು ರಾಜ್ಯದ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿದನು. ಭದ್ರಬಾಹುವಿನ ಪ್ರಭಾವದಿಂದಾಗಿ ಹಾಸನ ಜಿಲ್ಲೆಯ ಶ್ರವಣಬೆಳಗೊಳವು ಪ್ರಮುಖ ಜೈನ ಕ್ಷೇತ್ರವಾಗಿ ಹೆಸರಾಗಿದೆ. ಈತನ ಶಿಷ್ಯರಲ್ಲಿ ಚಂದ್ರಗುಪ್ತ ಮೌರ್ಯನೂ ಒಬ್ಬ.

ಭದ್ರಬಾಹುವಿನ ನಿಧನದ ನಂತರ ಆತನ ಶಿಷ್ಯರು ದಕ್ಷಿಣದಲ್ಲಿ ಚೋ ಳ, ಪಾಂಡ್ಯ ರಾಜ್ಯಗಳಲ್ಲಿ ಮತ ಪ್ರಸಾರ ಮಾಡಿದರು. ದಕ್ಷಿಣದಲ್ಲಿ ಗಂಗರ ು, ರಾಷ್ಟ್ತ್ರಕೂಟರ ು, ಕದಂಬರ ು, ಹೊಯ್ಸಳರ ು, ಚಾಲುಕ್ಯರು ಮುಂತಾದ ರಾಜಮನೆತನಗಳು ನೀಡಿದ ಪ್ರೌತ್ಸಾಹದಿಂದಾಗಿ ಜೈನ ಮತವು ಇಲ್ಲಿ ನೆಲೆಯೂರಿತು. ಇಂದಿಗೂ ಕರ್ನಾಟಕದ ಗೋಕರ್ ಣ, ಶ್ರವಣ ಬೆಳಗೊಳಗಳು ಪ್ರಸಿದ್ಧ ಜೈನ ಯಾತ್ರಾ ಸ್ಥಳಗಳಾಗಿವೆ. ಕರ್ನಾಟಕದಲ್ಲಿ ಜೈನರು ಬಹುಸಂಖ್ಯೆಯಲ್ಲಿದ್ದಾರೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments