Webdunia - Bharat's app for daily news and videos

Install App

ಜೈನ ಧರ್ಮದ ಉಗಮ

ಇಳಯರಾಜ
WD
ಜೈನ ಧರ್ಮವು ಬೌದ್ಧ ಧರ್ಮಕ್ಕಿಂತಲೂ ಹಿಂದಿನದು. ಜೈನ ಧರ್ಮದ ಪ್ರಮುಖ ಪ್ರವಾದಿ ವರ್ಧಮಾನ ಮಹಾವೀರನು ಜೈನ ಧರ್ಮದ ಸಂಸ್ಥಾಪಕನಾಗಿರಲಿಲ್ಲ.

ಆತ ಒಬ್ಬರ ನಂತರ ಒಬ್ಬರಂತೆ ಧರ್ಮೋಪದೇಶ ಮಾಡಿದ ಇಪ್ಪತ್ನಾಲ್ಕು ಮಂದಿ ತೀರ್ಥಂಕರರಲ್ಲಿ ಕೊನೆಯವನಾಗಿದ್ದ. ಇವನಿಗಿಂತ ಹಿಂದಿನ ತೀರ್ಥಂಕರ ಪಾರ್ಶ್ವನಾಥನು ಸುಮಾರು 250 ವರ್ಷಗಳ ಹಿಂದೆ ಜೀವಿಸಿದ್ದ ಎಂಬು ಇತಿಹಾಸಕಾರ ಜಾಕೋಬಿ ಅಭಿಪ್ರಾಯ.

ಪಾರ್ಶ್ವನಾಥನಿಗಿಂತ ಮೊದಲು ಅರಿಷ್ಟನೇಮಿ ಎಂಬ ತೀರ್ಥಂಕರ ಇದ್ದ. ಈತ ಮಹಾವೀರನಿಗಿಂತ 84,000 ವರ್ಷಗಳ ಹಿಂದೆ ಮರಣ ಹೊಂದಿದ ಎಂದು ಜೈನರು ನಂಬುತ್ತಾರೆ. ಅರಿಷ್ಟನೇಮಿಗಿಂತ ಮೊದಲು ನಾಮಿ ಎಂಬ ತೀರ್ಥಂಕರ ಜೈನ ಧರ್ಮ ಪ್ರಸಾರ ಮಾಡಿದ ಎಂಬ ಪ್ರತೀತಿ ಜೈನರಲ್ಲಿದೆ.

ಜೈನ ಮತ ಗ್ರಂಥಗಳ ಪ್ರಕಾರ ಮೊಟ್ಟ ಮೊದಲನೆಯ ತೀರ್ಥಂಕರನಾದ ವೃಷಭದೇವನು ತನ್ನ ಮಗನಾದ ಭರತನಿಗೆ ಚಕ್ರವರ್ತಿ ಪದವಿ ಬಿಟ್ಟುಕೊಟ್ಟು ಮತ ಪ್ರಚಾರ ಮಾಡಿ ತೀರ್ಥಂಕರನಾದನು. ವೃಷಭದೇವನಿಗೆ ಸಂಬಂಧಿಸಿದಂತೆ ಋುಗ್ವೇ ದ, ವಿಷ್ಣು ಪುರಾಣ ಭಾಗವತ ಪುರಾಣಗಳಲ್ಲಿ ಉಲ್ಲೇಖಗಳು ಕಂಡುಬರುತ್ತವೆ.

ತೀರ್ಥಂಕರರ ಕಾಲಗಳೊಳಗಿನ ಅಂತರಗಳು ಹೀಗೆ ಕಲ್ಪನಾತೀತವಾಗಿ ಸಾಗಿ ಕೊನೆಗೆ ತಮ್ಮ ಧರ್ಮವು ಅನಂತ ಕಾಲದಿಂದ ಇದೆಯೆಂದು ನಂಬುತ್ತಾರೆ.

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments