Webdunia - Bharat's app for daily news and videos

Install App

ಸನಾತನ ಪರಂಪರೆ ಹಿಂದೂ ಧರ್ಮ

ಇಳಯರಾಜ
PTI
ಹಿಂದೂ ಧರ್ಮವು ಸದ್ಯ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿಯೇ ಅತ್ಯಂತ ಪ್ರಾಚೀನವಾದವಾಗಿದೆ.ವಿಶ್ವದ ಮೂರನೇ ಅತಿ ದೊಡ್ಡ ಧರ್ಮ ಇದು ಎಂದು ಪರಿಗಣಿಸಲ್ಪಡುತ್ತಿದೆ.

ಹಿಂದೂ ಎನ್ನುವುದು ಇತರ ಧರ್ಮಗಳಾದ ಮುಸ್ಲಿಂ,ಬೌದ್ಧ,ಜೈನ ಇತ್ಯಾದಿಗಳಂತೆ ಯಾವುದೇ ವ್ಯಕ್ತಿಯ ಅಥವಾ ಧಾರ್ಮಿಕ ಸಂಪ್ರದಾಯದವನ್ನು ಆಧರಿಸಿದ ಹೆಸರಾಗಿರದೆ,ಒಂದು ಸಮುದಾಯದ ಹೆಸರಾಗಿದೆ.ಸಿಂಧೂ ನದಿ ಬಯಲಿನಲ್ಲಿ ವಾಸಿಸುವ ಜನಸಮುದಾಯಕ್ಕೆ ಸಿಂಧೂ ಎಂದು,ಅದು ಕ್ರಮೇಣ ಭಾಷಾ ಸ್ಥಿತ್ಯಂತರಗಳಿಂದಾಗಿ ಹಿಂದೂವಾಗಿದೆ.

ಹಿಂದೂ ಧರ್ಮವನ್ನು 'ಸನಾತನ ಧರ್ಮ'ಎಂದೂ ಕರೆಯುತ್ತಾರೆ.'ಸನಾತನ'ಎಂದರೆ ಎಂದೂ ಅಳಿಯದ,ಚಿರಂತನ,ನಿರಂತರವಾದ ಎಂದರ್ಥ.ಹಿಂದೂಧರ್ಮಕ್ಕೆ ಬೇರೆ ಧರ್ಮಗಳಿಗಿರುವಂತೆ ಸಂಸ್ಥಾಪಕರಿಲ್ಲದಿರುವುದು ವೈಶಿಷ್ಟ್ಯದ ಸಂಗತಿ.

ಈ ಧರ್ಮದಲ್ಲಿ ಆರು ದರ್ಶನಗಳಿದ್ದು,ಅವುಗಳನ್ನು ನ್ಯಾಯ,ವೈಶೇಷಿಕ,ಸಾಂಖ್ಯ,ಯೋಗ,ಮೀಮಾಂಸೆ ಮತ್ತು ವೇದಾಂತಗಳೆಂದು ಹೆಸರಿಸಬಹುದಾಗಿದೆ.

ಹಿಂದೂ ಧರ್ಮದಲ್ಲಿ ಧರ್ಮ,ಅರ್ಥ,ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳಿದ್ದು,ಪ್ರತಿಯೊಬ್ಬ ಹಿಂದೂ ತನ್ನ ಬದುಕಿನಲ್ಲಿ ಈ ನಾಲ್ಕು ಪುರುಷಾರ್ಥಗಳ ಸಿದ್ಧಿಯನ್ನು ಪಡೆದಾಗ ಮಾತ್ರ ಆತನ ಬದುಕು ಸಾರ್ಥಕ್ಯ ಗಳಿಸಲು ಸಾಧ್ಯ ಎಂದು ಧರ್ಮಗ್ರಂಥಗಳು ಹೇಳುತ್ತವೆ.

ಹಿಂದೂ ಜ್ಞಾನಪರಂಪರೆಯಲ್ಲಿ ಶ್ರುತಿ ಮತ್ತು ಸ್ಮೃತಿಯೆಂಬ ಎರಡು ಅಭ್ಯಾಸಗಳಿದ್ದು,ಶ್ರುತಿಯು ಕೇಳಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾಗಿದ್ದರೆ, ಸ್ಮೃತಿಯು ಕೇಳಿದ್ದನ್ನು ದಾಖಲಿಸುವುದಾಗಿದೆ.

ಹಿಂದೂ ಧರ್ಮದ ಜ್ಞಾನಪರಂಪರೆಯಲ್ಲಿ ವೇದ (ಅಂದರೆ ಜ್ಞಾನ)ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಋಗ್ವೇದ,ಯಜುರ್ವೇದ,ಸಾಮವೇದ ಮತ್ತು ಅಥರ್ವಣವೇದ ಎಂಬ ನಾಲ್ಕು ವೇದಗಳು ಹಿಂದೂಧರ್ಮದ ಐತಿಹ್ಯವನ್ನು ಅರಿಯುವಲ್ಲಿ ಪ್ರಮುಖವಾಗುತ್ತವೆ.

ಹಿಂದೂ ಧರ್ಮವು ಧಾರ್ಮಿಕ,ದಾರ್ಶನಿಕ ಮತ್ತು ತಾತ್ವಿಕ ಸಿದ್ಧಾಂತಗಳಿಂದ ರೂಪುಗೊಂಡಿದ್ದು,ಇದರ ಮೂಲಸಿದ್ಧಾಂತ ಕರ್ಮಸಿದ್ಧಾಂತವಾಗಿದೆ. ಇದಲ್ಲದೆ, ಕರ್ತೃ-ಕಾರಣ ಸಂಬಂಧ, ಮರುಜನ್ಮದ ಕುರಿತು ನಂಬಿಕೆ ಮತ್ತು ಹುಟ್ಟು ಸಾವುಗಳೆಂಬ ಆದಿ ಅಂತ್ಯಗಳನ್ನು ಒಳಗೊಂಡಿರುವ ಜೀವನಚಕ್ರ ಮುಂತಾದವು ಕೂಡ ಇದರಲ್ಲಿ ಸೇರಿದೆ.

ಪ್ರತಿಯೊಬ್ಬ ಹಿಂದೂ ತನ್ನ ಜೀವನದಲ್ಲಿ ಬ್ರಹ್ಮಚರ್ಯ,ಗೃಹಸ್ಥ,ವಾನಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಅವಸ್ಥೆಗಳನ್ನು ದಾಟುತ್ತಾನೆ ಎನ್ನುವುದು ಹಿಂದೂ ಧರ್ಮದ ಆದರ್ಶ ನಂಬಿಕೆಯಾಗಿದೆ.

ಹಿಂದೂ ಧರ್ಮದಲ್ಲಿ ಆಸ್ತಿಕರು,ಆಜ್ಞೇಯತಾವಾದಿಗಳು,ನಾಸ್ತಿಕರು ಎಂದು ಹಲವು ಗುಂಪಿಗೆ ಸೇರಿದವರನ್ನು ಗುರುತಿಸಬಹುದಾದರೂ ಈಗಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಕರನ್ನು ಕಾಣಬಹುದಾಗಿರುವ ಈ ಧರ್ಮದ ಹೆಚ್ಚಿನ ದರ್ಶನಗಳು ನಾಸ್ತಿಕವಾದದಿಂದ ರೂಪುಗೊಂಡಿರುವುದು ಇತರ ಧರ್ಮಗಳಿಗಿಂತ ಈ ಧರ್ಮವನ್ನು ವಿಶಿಷ್ಟವನ್ನಾಗಿಸುತ್ತದೆ.

ಬೌದ್ಧ,ಜೈನ ಮತ್ತು ಸಿಖ್ ಧರ್ಮಗಳಿಗೆ ಹಿಂದೂ ಧರ್ಮವೇ ಮೂಲವಾಗಿರುವುದು ಈ ಧರ್ಮದ ಹೆಗ್ಗಳಿಕೆಯಾಗಿದೆ. ಹಿಂದೂಗಳು ವಿಶ್ವದೆಲ್ಲೆಡೆ ನೆಲೆಸಿದ್ದರೂ,ಭಾರತ ಮತ್ತು ನೇಪಾಳದಲ್ಲಿ ಬಹುಪಾಲು ಹಿಂದೂಗಳು ನೆಲೆಸಿದ್ದು,ನೆರೆಯ ದೇಶಗಳಾದ ಶ್ರೀಲಂಕಾ,ಇಂಡೋನೇಷ್ಯಾ,ಬಾಂಗ್ಲಾದೇಶ,ಪಾಕಿಸ್ತಾನ,ಮಯನ್ಮಾರ್ ಮುಂತಾದ ದೇಶಗಳಲ್ಲೂ ಹಿಂದೂಗಳು ನೆಲೆಸಿದ್ದಾರೆ.

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು