Webdunia - Bharat's app for daily news and videos

Install App

ಮಹಾಮಜ್ಜನ ಸಂಭ್ರಮದಲ್ಲಿ ಮೈಸೂರು ನಂದಿ

ಇಳಯರಾಜ
PTI
ಮೈಸೂರಿನ ಚಾಮುಂಡಿ ಬೆಟ್ಟ ಅಂದೊಡನೆಯೇ ನೆನಪಾಗುವುದು ಮಹಾನಂದಿಯ ಭವ್ಯ ವಿಗ್ರಹ. ವೀಕ್ಷಕರಿಗೆ ಈ ಬೃಹನ್ವಿಗ್ರಹ ನೋಡಿದೊಡನೆಯೇ ಒಂದೆಡೆ ಶತಮಾನ ಕಂಡ ಅದರ ಭವ್ಯತೆ, ಇನ್ನೊಂದೆಡೆ , ಪೌರಾಣಿಕ ತೇಜಸ್ಸಿನಿಂದಾಗಿ ಭಕ್ತಿ ಭಾವ ಸ್ಫುರಿಸುತ್ತದೆ.

ಸುಮಾರು ಮೂರೂವರೆ ಶತಮಾನಗಳಷ್ಟು ಕಾಲ ಚಾಮುಂಡಿ ಬೆಟ್ಟದ ಸೆರಗಿನಲ್ಲಿ ಮಲಗಿರುವ ಮಹಾನಂದಿಗೆ ನವೆಂಬರ್‌ 6ರಂದು ಮಹಾ ಮಜ್ಜನ. ಬೆಟ್ಟ ನಿತ್ಯ ಭೇಟಿ ನೀಡುವವರ ಸಂಘಟನೆ ಬೆಟ್ಟದ ಬಳಗದ ತಂಡ ಈಮಹಾಮಜ್ಜನದ ಕೈಂಕರ್ಯ ನಡೆಸಿ , ಸಾಧನೆ-ಸಾರ್ಥಕ್ಯ ಹೊಂದಲಿದ್ದಾರೆ.

ಸುಮಾರು 30-40 ವರ್ಷಗಳಿಂದ ಮೈ ತೊಳೆಯದ ನಂದೀಶನಿಗೆ ಪರಿಮಾರ್ಜನ ವ್ಯವಸ್ಥೆಯನ್ನು ಬೆಟ್ಟದ ಬಳಗ ಮಾಡಿದೆ. ಕೆಲವು ದಶಕಗಳ ಹಿಂದೆ ಹಾಲುತ್ಪಾದಕರ ಸಂಘಟನೆಗಳ ನೆರವಿನಿಂದ ಹಾಲಿನಲ್ಲಿ ಮೈ ತೊಳೆದಿದ್ದ ನಂದೀಶ ಈಗ ಮತ್ತೆ ಸಾಲಂಕೃತನಾಗಿ, ಶುಚಿರ್ಭೂತನಾಗುತ್ತಿದ್ದಾನೆ. ನಾಡಿನಹಿರಿಮೆ, ಮೈಸೂರು ಅರಸರ ಗರಿಮೆಗೆ ತಕ್ಕಂತೆ ಖ್ಯಾತ ಶಿಲ್ಪಿ ಕೇಶವಾಚಾರ್‌ ನೇತೃತ್ವದಲ್ಲಿ ಮಹಾನಂದಿಯ ಶುಚೀಕರಣ ಕಾರ್ಯ ಪೂರ್ಣವಾಗಿ ಮಹಾಜ್ಜನ ಅಂತಿಮಹಂತದಲ್ಲಿದೆ.

ಈ ಮಹಾನಂದಿ 340 ವರ್ಷಗಳಷ್ಟು ಹಳೆಯದು. ಹದಿನೇಳನೆಯ ಶತಮಾನದಲ್ಲಿ ಮೈಸೂರು ಪ್ರಾಂತ್ಯವನ್ನಾಳಿದ ದೊಡ್ಡ ದೇವರಾಜ ಒಡೆಯರ್‌ ಅವರು ಸುಮಾರು 1664ರ ಕಾಲದಲ್ಲಿ ಈ ವಿಗ್ರಹ ಸ್ಥಾಪನೆಗೆ ಸಿದ್ಧತೆ ಆರಂಭಿಸಿ ಕೆಲವರ್ಷಗಳಲ್ಲಿ ಪೂರ್ಣಗೊಳಿಸಿದರು. ಬೆಟ್ಟದಲ್ಲಿ ನೆಲೆಗೊಂಡಿದ್ದ ಬೃಹತ್‌ ಬಂಡೆಯ ಏಕಶಿಲಾ ವಿಗ್ರಹವಿದು. ಚಾಂಮುಂಡೇಶ್ವರಿ ದರ್ಶನಕ್ಕೆ ತೆರಳುವವರಿಗೆ ಅರ್ಧದಾರಿಯಲ್ಲಿ ವಿಶ್ರಾಂತಿ ಹಾಗೂ ಆರಾಧನೆಗಾಗಿ ಈ ವಿಗ್ರಹ ಸ್ಥಾಪನೆಯಾಗುವುದರೊಂದಿಗೆ, ಮೆಟ್ಟಿಲುಗಳ ವ್ಯವಸ್ಥೆಯನ್ನೂ ಅಳವಡಿಸಲಾಯಿತು.

ಮಹಾನಂದಿಯ ಮಹಾಭಿಷೇಕಕ್ಕೆ 6 ಲಕ್ಷ ರೂ. ಅಂದಾಜಿಸಲಾಗಿದೆ.ಹತ್ತು ಸಾವಿರಕ್ಕೂ ಅಧಿಕ ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ. ಸುತ್ತೂರು ಮಠಾಧೀಶರು, ಒಡೆಯರ್‌ ಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಾನಿಧ್ಯದಲ್ಲಿ ಅರ್ಚಕ ಸೋಮಶೇಖರ್‌ ಅಭಿಷೇಕ ವಿಧಿ ಪೂರೈಸುವರು. ಭವಿಷ್ಯದ ಯೋಜನೆಯಂತೆ ಪ್ರತೀ ಐದು ವರ್ಷಕ್ಕೊಮ್ಮೆ ನಂದಿ ಮಜ್ಜನ ನಡೆಯಲಿದೆ.

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

ಮಹಾಲಯ ಅಮವಾಸ್ಯೆಯಾದ ಇಂದು ಪಿತೃಗಳಿಗೆ ತರ್ಪಣ ನೀಡಬೇಕು ಯಾಕೆ ಗೊತ್ತಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು

Show comments