Webdunia - Bharat's app for daily news and videos

Install App

ಮಕರ ಪೊಂಗಲ್‌ ತಮಿಳರ ಸುಗ್ಗಿ ಹಬ್ಬ

ಇಳಯರಾಜ
PTI
ಮಕರ ಸಂಕ್ರಾಂತಿಯನ್ನು ಭಾರತದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಿಸುತ್ತಾರೆ.ಉತ್ತರ ಭಾರತೀಯರು ಈ ದಿನ ಗಂಗೆಯಲ್ಲಿ ಮಿಂದು ಪಾವನರಾಗುತ್ತಾರೆ.

ಕನ್ನಡಿಗರು ಮಕರ ಸಂಕ್ರಾಂತಿಯನ್ನು ಕಾಲಮಾನ ಪರ್ವವಾಗಿ ಆಚರಿಸಿ ತಿಳಕಾಲು (ಎಳ್ಳುಕಾಳು) ಹಂಚಿ ಸಂತಸ ಆಚರಿಸಿದರೆ, ತಮಿಳು ನಾಡಿನಲ್ಲಿ ಇದು ಕೃಷಿಕರ ಹಬ್ಬವಾಗಿ ಆಚರಿಸಲ್ಪಡುತ್ತದೆ. ಇದೊಂದು ಫಸಲು ಕೊಯ್ಲಿನ ಹಬ್ಬ. ಉತ್ತಮ ಆದಾಯ ಬೆಳೆ ನೀಡಿದುಕ್ಕಾಗಿ ಸೂರ್ಯ ದೇವನಿಗೆ 'ಪೊಂಗಲ್‍' ಪೂಜೆಸಲ್ಲಿಸಿ ಕೃತಜ್ಞತೆ ಸಲ್ಲಿಸುವುದು ಇಲ್ಲಿ ಸಂಪ್ರದಾಯ.

ಚಳಿಗಾಲದಲ್ಲಿ ದೇಹವನ್ನು ಬಿಸಿಯಾಗಿಡುವಂತೆಯೂ ಈ ಹಬ್ಬದ ಆಹಾರ ವಿಧಾನಗಳು ನಡೆಯುತ್ತವೆ. ಹೆಚ್ಚಿನ ಶಕ್ತಿ ನೀಡುತ್ತದೆ.ಎಳ್ಳಿನ ಲಾಡು ತಯಾರಿಸಿ ಕಬ್ಬಿನ ಹಾಲಿನೊಂದಿಗೆ ಎರಕಹೊಯ್ದು ಪಾಕ ಮಾಡಿ ನೀಡುವುದು ಈ ಹಬ್ಬದ ಖಾದ್ಯಗಳಲ್ಲಿ ವಿಶಿಷ್ಟವಾಗಿರುತ್ತದೆ. ಈ ಬಾರಿ ಜ.15ರಂದು ಸೋಮವಾರ ಪೊಂಗಲ್‌ ಆಚರಣೆ.

ವಿಶೇಷವಾಗಿ ಬೆಳೆ ಖಟಾವಿನ ಸಂಭ್ರಮ ಸೂಚಿಸುವ ಈ ಪೊಂಗಲ್‌, ಒಗ್ಗೂಡಿ ಸಂಭ್ರಮಿಸುವ ಸಮೃದ್ಧಿಯ ಆಚರಣೆಯಾಗಿದೆ. ಪರಸ್ಪರ ಉಡುಗೊರೆ ನೀಡುವುದು.ಸಮೃದ್ಧಿ ನೀಡಿದ ದೇವರಿಗೆ ಪೂಜೆಕೈಗೊಳ್ಳುವುದು, ಪ್ರಾರ್ಥನೆಗಳು, ಇತ್ಯಾದಿಗಳೊಂದಿಗೆ, ದಿನದ ವಿಶೇಷವಾದ ಬೇಯಿಸಿದ ಅಕ್ಕಿ, ಅನ್ನದ ಖಾದ್ಯ ತಿಂಡಿಗಳೂ ಇರುತ್ತವೆ.

ಸಮೃದ್ಧಿಯ ಸಂಕೇತವಾಗಿರುವ ಪೊಂಗಲ್‌ ಪ್ರತಿ ವರ್ಷ ಎರಡನೇ ಬೆಳೆಯ ಕಟಾವಿನ ಹಂಗಾಮಿನಲ್ಲಿ ಫಸಲು ಕೂಡಿಸಿ ಹರ್ಷಾಚರಣೆಯ ಸಂತೋಷವಾಗಿ ಆಚರಿಸಲ್ಪಡುತ್ತದೆ.ಇತರ ರಾಜ್ಯಗಳಲ್ಲಿ ಇದು ಸಂಕ್ರಾಂತಿ ಅಥವಾ ಮಕರ ಸಂಕ್ರಾಂತಿ ಎಂಬ ಹೆಸರಲ್ಲಿ ವಿವಿಧ ರೀತಿಯ ವಿಧಿ ವಿಧಾನಗಳ ಮೂಲಕ ಆಚರಿಸಲ್ಪಡುತ್ತದೆ.

ಪಂಜಾಬ್‌ , ಹರಿಯಾಣಗಳಲ್ಲಿ ಪೊಂಗಲ್‌ಗೆ ಸಮನಾದ ಲೋಹ್ರಿ ಎಂಬ ಕೊಯ್ಲು ಹಬ್ಬ ಆಚರಿಸಲಾಗುತ್ತಿದೆ. ಪೊಂಗಲನ್ನು ತಮಿಳರ ತಿರುನಾಳ್‌ ಅಥವಾ ವಿಶೇಷ ದಿನ(ಹಬ್ಬ)ಎಂದು ಪರಿಗಣಿಸಲ್ಪಡುತ್ತದೆ. ಪೊಂಗಲ್ ಹಬ್ಬಾಚರಣೆ ಇಲ್ಲಿನ ಜವ ಜೀವನದಲ್ಲಿ ಹಾಸು ಹೊಕ್ಕಾಗಿರುತ್ತದೆ.

- ವಿಷ್ಣು ಭಾರದ್ವಾಜ್‌

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

Vaikunta Ekadashi: ವೈಕುಂಠ ಏಕಾದಶಿ ಮುಹೂರ್ತ, ಪೂಜಾ ಸಮಯ ವಿವರ ಇಲ್ಲಿದೆ

ತುಳಸಿ ಹಬ್ಬದಂದು ಈ ಸಮಸ್ಯೆ ಇರುವವರು ನೆಲ್ಲಿಕಾಯಿ ಇಟ್ಟು ದೀಪ ಹಚ್ಚಬೇಕು

ದೀಪಾವಳಿ ಹಬ್ಬದ ಮುಹೂರ್ತ ಯಾವ ದಿನ, ಯಾವಾಗ ಇಲ್ಲಿದೆ ಡೀಟೈಲ್ಸ್

ದರೋಡೆಕೋರನಾಗಿದ್ದ ರತ್ನಾಕರ, ವಾಲ್ಮೀಕಿ ಮಹರ್ಷಿಯಾದ ರೋಚಕ ವಿಚಾರ ಇಲ್ಲಿದೆ

Show comments