Select Your Language

Notifications

webdunia
webdunia
webdunia
webdunia

ಭೂಲೋಕ ರಾಜ: ಏಸುಪ್ರಭು

ಭೂಲೋಕ ರಾಜ: ಏಸುಪ್ರಭು

ಇಳಯರಾಜ

ಭೂಲೋಕ ರಾಜನಾದ ಏಸುವಿಗೆ ಜನ್ಮದ ಪ್ರಾರಂಭದಿಂದಲೇ ಅನೇಕ ವಿರೋಧಿಗಳಿದ್ದರು. ಏಸು ಜನಿಸಿದಾಗ ಹೇರೋದ್ ರಾಜನ ಆಳ್ವಿಕೆಯಿತ್ತು.

ಏಸುವಿನ ಜನನವನ್ನು ಸೂಚಿಸುವ ಒಂದು ನಕ್ಷತ್ರ ಬಾನಿನಲ್ಲಿ ಕಾಣಿಸಿಕೊಂಡಿತು. ಇದನ್ನು ಕಂಡ ವಿದ್ವಾಂಸರು ಯಾವುದೋ ರಾಜಕುಮಾರನ ಜನನವಾಯಿತೆಂದು ಬಗೆದು ಹೇರೋದ್ ರಾಜನ ಅರಮನೆಗೆ ಧಾವಿಸಿ ಬಂದರು.

ಅಲ್ಲಿ ವಿಚಾರಿಸಿದಾಗ ಯಾವುದೇ ಜನನ ಅರಮನೆಯಲ್ಲಿ ಆಗಿಲ್ಲವೆಂಬ ವರ್ತಮಾನ ಖಚಿತವಾಯಿತು.ಇದನ್ನು ತಿಳಿದ ರಾಜನಿಗೆ ಕಳವಳವುಂಟಾಯಿತು ಏಕೆಂದರೆ ತನ್ನ ರಾಜ್ಯದಲ್ಲಿ ಬೇರೊಬ್ಬ ರಾಜನು ಹುಟ್ಟಿ ರಾಜ್ಯವನ್ನು ಕಬಳಿಸುತ್ತಾನೆ ಎಂಬ ಭೀತಿ. ಆಗ ವಿದ್ವಾಂಸರನ್ನು ಕರೆಸಿಕೊಂಡು ಮಗು ಹುಟ್ಟಿದ ದಿನವನ್ನು ತಿಳಿದುಕೊಂಡನು.

ಆ ವಿದ್ವಾಂಸರು ನಕ್ಷತ್ರ ನೆಲೆಸಿದ ಜಾಗವನ್ನು ಗುರುತಿಸಲು ಹೊರಟರು. ಏಸು ಜನಿಸಿದ ಜಾಗಕ್ಕೆ ಬಂದು ಧೂಪ,ದೀಪ,ಕಾಣಿಕೆಗಳನ್ನು ಅರ್ಪಿಸಿ ನಮಸ್ಕರಿಸಿದರು. ಆದರೆ ಮತ್ತೆ ರಾಜನ ಬಳಿಗೆ ಹಿಂತಿರುಗಬಾರದೆಂದು ಅವರಿಗೆ ದೇವರು ಸ್ವಪ್ನದಲ್ಲಿ ಎಚ್ಚರಿಸಿದನು.

ಆಗ ಅವರು ಬೇರೊಂದು ಮಾರ್ಗದಲ್ಲಿ ತಮ್ಮ ದೇಶಕ್ಕೆ ಹಿಂತಿರುಗಿದರು. ಅದೇ ಸಮಯದಲ್ಲಿ ಕರ್ತಾರನು ಜೋಸೆಫ್‌ಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಹೇರೋದ್ ರಾಜನು ಮಗುವನ್ನು ಕಬಳಿಸಿ ಕೊಲೆ ಮಾಡಲು ಸಂಚು ಮಾಡುತ್ತಿರುವ ವಿಚಾರವನ್ನು ತಿಳಿಸಿದನು. ಆದ್ದರಿಂದ ರಹಸ್ಯವಾಗಿ ಮಗುವನ್ನು ಈಜಿಪ್ಟ್ ದೇಶಕ್ಕೆ ಕರೆದೊಯ್ಯುವಂತೆ ಸಲಹೆ ನೀಡಿದನು.

ಜೋಸೆಫ್ ಅಂತೆಯೇ ಮಾಡಿದ. ವಿದ್ವಾಂಸರು ತನಗೆ ಮೋಸ ಮಾಡಿದ ವಿಚಾರ ಅವನಿಗೆ ಅರಿವಾಯಿತು. ಆದರೇನು ಬೇರೆ ಉಪಾಯ ಮಾಡಿದ. ಬೇರೆ ವಿದ್ವಾಂಸರಿಂದ ಮಗುವಿನ ಜನನ ಬಗೆಗೆ ವಿಚಾರಿಸಿಕೊಂಡು ಆ ಮಗುವು ಎರಡು ವರ್ಷ ವಯಸ್ಸಿನದಾಗಿತ್ತು. ಆದ್ದರಿಂದ ತನ್ನ ರಾಜ್ಯದಲ್ಲಿರುವ ಎರಡು ವರ್ಷ ವಯಸ್ಸಿನ ಎಲ್ಲಾ ಗಂಡು ಮಕ್ಕಳನ್ನು ಕೊಂದು ಹಾಕುವಂತೆ ರಾಜಾಜ್ಞೆ ಮಾಡಿದ. ಇದುವರೆಗಾಗಲೇ ಏಸು ಗಡಿಯಿಂದ ಬಹುದೂರ ಹೊರಟುಹೋಗಿ ಜೀವದಿಂದ ಉಳಿದುಕೊಂಡಿದ್ದ.

ಏಸುಕ್ರಿಸ್ತನು ಜೀವಿಸಿದ ನಾಡಿನಲ್ಲಿ ಜನರು ತಮ್ಮ ಎಲ್ಲಾ ಚಿಂತನೆಗಳನ್ನು ಏಸುವು ಹೇಳಿದಂತೆ ಬದಲಾಯಿಸಿಕೊಂಡು ಜೀವನ ನಡೆಸಲು ಪ್ರಾರಂಭಿಸಿದರು. ಅದು ತಮ್ಮೆಲ್ಲಾ ಕೆಟ್ಟ ಆಚಾರ ವಿಚಾರವನ್ನು ದೂರ ಮಾಡಲು ಅನುವು ಮಾಡಿಕೊಟ್ಟಿತು. ಇದರಿಂದಾಗಿ ವಿಶ್ವದ ಸಂಸ್ಕೃತಿ ಹಾಗೂ ನಾಗರಿಕತೆಯಲ್ಲಿ ಅಭಿವೃದ್ಧಿ ಹೊಂದುವಂತಾಯಿತು.

ಪ್ರಪಂಚದ ಎಲ್ಲಾ ಬಾಗದಲ್ಲಿ ಏಸುವಿನ ಅನುಯಾಯಿಗಳು ಪ್ರತಿ ವರ್ಷವೂ ಡಿಸೆಂಬರ್ 25ರಂದು ಏಸುವಿನ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಆರಾಶದಲ್ಲಿ ನಕ್ಷತ್ರಗಳ ಜನನವನ್ನು ಸೂಚಿಸಲು ತಮ್ಮ ಮನೆಗಳ ಮೇಲೆ ನಕ್ಷತ್ರಾಕಾರದ ತೂಗುದೀಪವನ್ನು ಬೆಳಗಿಸುತ್ತಾರೆ. ಹೀಗೆ ತಮ್ಮ ಮನೆಯಲ್ಲಿ ಏಸುವಿನ ಜನನವನ್ನು ಸೂಚಿಸುತ್ತಾರೆ.

ಾ|| ವಿ.ಗೋಪಾಲಕೃಷ್ಣ

Share this Story:

Follow Webdunia kannada