Webdunia - Bharat's app for daily news and videos

Install App

ಕ್ರಿಸ್ತೋದಯ ಹಾಗೂ ಸಂದೇಶ

ಇಳಯರಾಜ
WD
ಏಸು ಕ್ರಿಸ್ತನ ಜನನದ ಬಗೆಗೆ ಮೊತ್ತಮೊದಲಿಗೆ ಪ್ರಕಟಿಸಿದವರು ಕರ್ತಾರನ ದೂತರು ಎಂಬ ವಿಚಾರವನ್ನು ಬೈಬಲ್ ಗ್ರಂಥದಲ್ಲಿ ವಿವರಿಸಲಾಗಿದೆ.

" ಏಸುವು ಜನರೆಲ್ಲರಿಗೂ ಅತ್ಯಂತ ಸಂತೋಷವನ್ನು ಉಂಟು ಮಾಡುವ ಒಳ್ಳೆಯ ಸಮಾಚಾರವನ್ನು ನಿಮಗೆ ತಿಳಿಸುತ್ತೆನೆ.ಈಗ ಕರ್ತಾವಾಗಿರುವ ಕ್ರಿಸ್ತ ಎಂಬ ರಕ್ಷಕ ನಿಮಗೆ ಕಾವಿಕನ್ ಎಂಬ ಊರಿನಲ್ಲಿ ಜನಿಸಿದ್ದಾನೆ.(ಲೂಕ್ 2-10-11)

ಏಸು ಈ ಜಗತ್ತಿನ ರಕ್ಷಕನೆಂಬ ವಿಷಯವನ್ನು ಅವರಜನನದ ಸುದ್ದಿಯಲ್ಲಿ ತಿಳಿಯಪಡಿಸಲಾಗಿದೆ.ಏಸು ಪ್ರಭು ಇಸ್ರೆಲ್ ದೇಶದ ಜೆರುಸಲೆಂ ನಗರದಿಂದ 10 ಕಿಮಿ ದೂರದಲ್ಲಿರುವ ಬೆತ್ಲೆಹೆಂ ಎಂಬ ಚಿಕ್ಕ ಗ್ರಾಮದಲ್ಲಿ ದನದ ಕೊಟ್ಟಿಗೆಯಲ್ಲಿ ಜನಿಸಿದರು ಎಂಬುದು ಮುಖ್ಯವಾದ ಚಾರಿತ್ರಿಕ ಘಟನೆ. ಅವರು ಒಂದು ನಿರ್ದಿಷ್ಟ ಸಮಾಜಕ್ಕೆ,ಕುಲಕ್ಕೆ,ಪ್ರಪಂಚದ ಯಾವುದೆ ಒಂದು ಭಾಗಕ್ಕೆ ಮಾತ್ರ ಸಿಮಿತವಾದವರಲ್ಲ.ಅವರು ಜನಿಸುವ ಸಂದರ್ಭದಲ್ಲಿ ಕರ್ತಾರ ನೀಡಿದ ಸಂದೇಶದಲ್ಲಿ ಇದು ಸ್ಪಷ್ಟವಾಗಿದೆ.

ಶಾಂತಿಯ ಮಹಾನಾಯಕ: ಶಾಂತಿ ದೂತರು ಹೊರಗೆಡವಿದ ಮತ್ತೊಂದು ಸಮಾಚಾರವೆಂದರೆ " ಮೇಲಿರುವ ದೈವಕ್ಕೆ ಅತ್ಯಂತ ಮಹತ್ವವನ್ನು ಭೂಮಿಯ ಮೇಲೆ ಶಾಂತಿಯನ್ನು, ಮನುಷ್ಯರಲ್ಲಿ ಪ್ರೀತಿಯನ್ನು,ನೀಡುವುದಕ್ಕಾಗಿ ಇವರ ಜನನ (ಲೂಕ್2-14)

ಈ ಸಂದೇಶದಲ್ಲಿ ಭೂಮಿಗೆ ವಿಶೇಷವಾಗಿ ಅನ್ವಯವಾಗುವುದು.ಶಾಂತಿ ಈ ಪ್ರಪಂಚದಲ್ಲಿ ಮಹತ್ವದ ನಿರಿಕ್ಷಣೆಯೇ ಶಾಂತಿ ಎಂಬುದರಲ್ಲಿ ಅನಿಮಾನವಿಲ್ಲ. ನಮಗೆ ಮನಸ್ಸಿಗೆ ನೆಮ್ಮದಿ ಅಗತ್ಯ ದೇಹದಲ್ಲಿಯೂ ನೆಮ್ಮದಿ ಬೇಕು. ಕುಟುಂಬದಲ್ಲಿಯೂ ನೆಮ್ಮದಿ ಬೇಕು. ಅಕ್ಕಪಕ್ಕದಲ್ಲಿ,ದೇಶದಲ್ಲಿ,ವಿಶ್ವದಾದ್ಯಂತ ಶಾಂತಿ ನೆಲೆಸಬೇಕು ಎಂಬುದು ನಮ್ಮೆಲ್ಲರ ಆಶಯ.

ಏಸು ಜನಿಸಿದ ಸಮಯದಲ್ಲಿ ಅಗಸ್ಟಸ್ ಸಿಸರ್ ರೋಮ್ ದೇಶದ ಚಕ್ರವರ್ತಿಯಾಗಿದ್ದ ಆಗ ಜಿವಿಸಿದ್ದ ಬರಹಗಾರರಲ್ಲಿ ಏಪಿಕೈಟಿಸ್ ಎಂಬುವರು ಪ್ರಸಿದ್ದರು. ಇವರು ಚಕ್ರವರ್ತಿಯ ಬಗೆಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಅಗಸ್ಟಸ್ ಸಿಸರ್ ಭೂಮಿಯ ಮೇಲೆ ಹಾಗೂ ಕಡಲಿನಲ್ಲಿ ನಡೆಯುವ ಯುದ್ದಗಳಿಂದ ದೂರವಿರಲು ಶಾಂತಿ ಸ್ಥಾಪನೆ ಮಾಡುತ್ತಾನೆ ಹೊರತು ಪ್ರಜೆಗಳಿಗೆ ಆತಂಕವನ್ನಾಗಲಿ,ನೋವನ್ನಾಗಲಿ,ಪ್ರಪಂಚದಲ್ಲಿ ಶಾಂತಿಯನ್ನು ನೆಲೆಸಲು ಅಗತ್ಯಗಳನ್ನು ನೀಡಲಾರನು ಎಂಬುದು ಸ್ಪಷ್ಟವಾಗಿದೆ.
ಆದ್ದರಿಂದ ವಿಶ್ವ ನೀಡಲಾಗದ್ದನ್ನು ಏಸುವು ನೀಡಲು ಜನ್ಮತಾಳಿದನು.ಎಂಬುದು ಸ್ಪಷ್ಟವಾಗುತ್ತದೆ.(ಯೊಹಾನ್14-27)

ಅಲ್ಲದೆ ಏಸು ಪ್ರಭುವಿನ ಬಗೆಗೆ ಕೆಲವು ನೂರು ವರ್ಷಗಳ ಮುಂಚಿತವಾಗಿ ದಿರ್ಘದರ್ಶಿಯಾಗಿದ್ದ ಏಸಾಯಾ ಏಸುವನ್ನು ಶಾಂತಿಯ ಮಹಾನಾಯಕ ಎಂದು ಹೇಳಿರುವುದು ಉಚಿತವಾಗಿದೆ.ಅವರ ಬಗೆಗೆ ಇರುವ ಹೆಸರುಗಳು: ಅಪೂರ್ವ ಮಾನವ, ಆಲೋಚನೆಯ ಕರ್ತಾರ, ಬಲಾಡ್ಯ ದೇವತೆ, ನಿತ್ಯಪಿತಾ, ಶಾಂತಿಯ ಮಹಾನಾಯಕ ಎಂದು ಮುಂತಾಗಿ ( ಏಸಾಯಾ9-8)

(- ಡಾ. ವಿ. ಗೋಪಾಲಕೃಷ್ಣ)

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments