Select Your Language

Notifications

webdunia
webdunia
webdunia
webdunia

ಏಸುಕ್ರಿಸ್ತ ಆಯ್ಕೆ ಮಾಡಿದ ಹನ್ನೆರಡು ಮಂದಿ ಶಿಷ್ಯರು.

ಏಸುಕ್ರಿಸ್ತ ಆಯ್ಕೆ ಮಾಡಿದ ಹನ್ನೆರಡು ಮಂದಿ ಶಿಷ್ಯರು.

ಇಳಯರಾಜ

ಏಸುಪ್ರಭು ಈ ಮಾನವ ಕುಲದ ರಕ್ಷಕರಾಗಿ ಜನಿಸಿದರು. ಇವರ ಅನುಯಾಯಿಗಳು ಈಗ ವಿಶ್ವದಾದ್ಯಂತ ಕೋಟಿಗಟ್ಟಲೇ ಜನರಿದ್ದಾರೆ.

ಅವರ ಜೀವಿತ ಕಾಲದಲ್ಲಿಯೇ ಅವರಿಗೆ ನೇರವಾಗಿ ಶಿಷ್ಯರಾದವರು ಅನೇಕ ಜನ ಇದ್ದರು. ಅವರಲ್ಲಿ ಅತ್ಯಂತ ಆಪ್ತರಾದ ಹನ್ನೆರಡು ಮಂದಿಯನ್ನು ಅವರು ಆಯ್ಕೆಮಾಡಿಕೊಂಡಿದ್ದರು. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಇಸ್ರೇಲ್‌ನ ಬೆತ್ಲೆಹಂ ಎಂಬ ಉರಿನಲ್ಲಿ ಜನಿಸಿದ ಏಸುವಿನ ತಂದೆ ಜೋಸೆಫ್ ತಾಯಿ ಮೇರಿ.

ಸುಮಾರು 33 ವರ್ಷ ಜೀವಿಸಿದ ಏಸು ತಮ್ಮ ಕೊನೆಯ ದಿನಗಳಲ್ಲಿ ಪ್ರಿಯ ಶಿಷ್ಯರಾದ ಹನ್ನೆರಡು ಮಂದಿಯೊಂದಿಗೆ ವಾಸ ಮಾಡಿಕೊಂಡಿದ್ದರು. ಅವರೆಲ್ಲರಿಗೂ ಪರಿಶುದ್ದರೆಂಬ ಪದವಿಯನ್ನು ಕ್ರೈಸ್ತ ಮತ ದಯಪಾಲಿಸಿದೆ.

ಸೈಮನ್ ಆಂತ್ರೆಯೋ, ಯಾಕೂಬ್ ಯೋಹವಾನ್ ಫಿಲಿಪ್ಸ್ ಬಾರ್ತಿಲೇಮಿಯಾ, ಥೋಮಸ್, ಮ್ಯಾಥ್ಯೂ ,ಯಾಕೂಬ್(ಅಲ್ಬೆಯುವಿನ ಮಗ) ದದೇಯ್, ಸೈಮನ್, ಜುದಾಸ್ ಕಾರಿಯೋತ್ ಎಂಬುವವರು.

ಏಸುವಿನ ಮತಬೋದನೆಯನ್ನು ಅಂದಿನ ರೋಮ್‌ ಚಕ್ರವರ್ತಿ ಮತ್ತು ಯಹೂದಿಯರು ಸ್ವಲ್ಪವು ಇಷ್ಟಪಡಲಿಲ್ಲ. ಹೇಗಾದರು ಮಾಡಿ ಏಸುವನ್ನು ತೀರಿಸಿಬಿಡಬೇಕೆಂದು ಹುನ್ನಾರ ಮಾಡುತ್ತಿದ್ದರು. ಏಸುವಿನ ಒಬ್ಬ ಶಿಷ್ಯನಾದ ಜುದಾಸನಿಗೆ 12 ಬೆಳ್ಳಿ ನಾಣ್ಯಗಳನ್ನು ಕೊಟ್ಟು ಏಸುವನ್ನು ಕರೆದುಕೊಂಡು ಬರುವಂತೆ ತಿಳಿಸಿದರು. ಅವನು ಹಾಗೇಯೇ ಏಸುವನ್ನು ಅವರಿಗೆ ತೋರಿಸಿಕೊಟ್ಟ.

ರೋಮನ್ ಚಕ್ರವರ್ತಿ ನಿರಾಪರಾಧಿಯಾದ ಏಸುವನ್ನು ವಿನಾಕಾರಣ ಅಪವಾದ ಹೊರಿಸಿ ಶಿಲುಬೆಗೆ ಏರಿಸಿ ಕೊಲೆ ಮಾಡಿದ. ಇದನ್ನು ತಿಳಿದ ಜುದಾಸ್ ತಾನು ಮಾಡಿದ ಅಪರಾಧದ ಪ್ರಾಯಶ್ಚಿತ್ತವಾಗಿ ಬೆಳ್ಳಿ ನಾಣ್ಯಗಳನ್ನು ದೇವಾಲಯದಲ್ಲಿ ಏಸುವಿನ ಹೆಸರಿನಲ್ಲಿಯೇ ಚೆಲ್ಲಾಡಿದ. ಆನಂತರ ತಾನು ನೇಣು ಹಾಕಿಕೊಂಡು ಪ್ರಾಣತ್ಯಾಗ ಮಾಡಿದ.

ಹನ್ನೆರಡು ಮಂದಿ ಶಿಷ್ಯರಲ್ಲದೇ ಸಂತಪಾಲ್ ಎಂಬ ಬೇರೊಬ್ಬ ಶಿಷ್ಯರು ಏಸುವಿಗೆ ಅತ್ಯಂತ ಪ್ರೀತಿ ಪಾತ್ರರಾಗಿದ್ದರು. ಇವರು ಚಿಕ್ಕ ವಯಸ್ಸಿನಿಂದಲೇ ಯಹೂದಿ ಮತದ ನಿಷ್ಟಾವಂತರಾಗಿದ್ದರು. ಇವರು ತಮ್ಮ 35ನೇ ವಯಸ್ಸಿನಲ್ಲಿ ಏಸುವನ್ನು ನಾಯಕರನ್ನಾಗಿ ಪರಿಗಣಿಸಿದರು.

ನಿರೋ ರಾಜನ ಅಡಳಿತದಲ್ಲಿ ಇವರು ತ್ಯಾಗ ಮಾಡುವ ಮೂಲಕ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದರು. ಹೊಸ ಒಡಂಬಡಿಕೆಯಲ್ಲಿ 13 ಗ್ರಂಥಗಳ ಕರ್ತ ಸಂತಪಾಲ್ ಅವರು. ಅಲ್ಲದೇ ಏಸುವಿನ ಮರಣದ ನಂತರ ಅವರ ಸಂದೇಶಗಳನ್ನು ಹಲವಾರು ದೇಶಗಳಲ್ಲಿ ಪ್ರಚಾರ ಮಾಡಿದ ಹಿರಿಮೆ ಸಂತಪಾಲ್ ಅವರಿಗೆ ಸಲ್ಲುತ್ತದೆ.

ಹನ್ನೆರಡು ಮಂದಿ ಶಿಷ್ಯರಲ್ಲಿ ಸಂತ ಯಾಕೂಬ್ ,ಯೋಹಾನ್ ಎಂಬುವರು ಪರಮ ಆಪ್ತ ಶಿಷ್ಯರಾಗಿದ್ದರು.ಏಸುವನ್ನು ಹಿಡಿಯಲು ಮಧ್ಯೆರಾತ್ರಿಯಲ್ಲಿ ಕೊಲೆಗಾರರು ಬಂದಾಗ ಜತೆಯಲ್ಲಿದ್ದವರು ಮೀನು ಹಿಡಿಯುವ ವೃತ್ತಿಯವರು. ಮತ್ತೆ ಕೆಲವು ಶಿಷ್ಯರು ವಿವಿಧ ವ್ಯಾಪಾರಿಗಳಾಗಿದ್ದರು. ಎಲ್ಲರು ಇಸ್ರೇಲ್ ದೇಶದ ನಿವಾಸಿಗಳು.

ಗುರು ಹೇಗೋ ಶಿಷ್ಯರು ಹಾಗೇಯೇ ಎಂಬಂತೆ ತಮ್ಮ ನಾಯಕನ ಮರಣದ ನಂತರ ಇವರೆಲ್ಲರು ಧರ್ಮ ಬೋಧನೆಯಲ್ಲಿ ನಿರತರಾದರು, ರೋಗಿಗಳಿಗೆ ಸಹಾಯ ಮಾಡಿದರು. ಅಂಗವಿಕಲರು ಮತ್ತು ಅನಾಥರಿಗೆ ರಕ್ಷಣೆ ನೀಡಿ ಸಲುಹಿದರು.

ಸಂತ ಥಾಮಸ್ ಏಸುಕ್ರಿಸ್ತನ ಸಂದೇಶವನ್ನು ವಿಶ್ವದಾದ್ಯಂತ ಪ್ರಚಾರ ಮಾಡಿದರು. ಅವರು ಭಾರತಕ್ಕೆ ಬಂದು ಚನ್ನೈ ನಗರದ ಮೈಲಾಪುರದಲ್ಲಿ ಕೊಲೆಯಾದರೆಂಬ ಐತಿಹಾಸಿಕ ಉಲ್ಲೇಖವಿದೆ. ಈ ಶಿಷ್ಯರಲ್ಲಿ ಅನೇಕ ಮಂದಿ ನೀಡಿರುವ ವಿವರಗಳು ಬೈಬಲ್‌ನಲ್ಲಿ ಲಭ್ಯವಾಗಿವೆ.ಅವುಗಳು ಹೊಸ ಒಡಂಬಡಿಕೆಯ ಮುಖ್ಯಭಾಗದಲ್ಲಿ ಸೇರಿಕೊಂಡಿವೆ. ಇವರಲ್ಲಿ ಬಹುಮಂದಿ ಸಹಜವಾದ ಮರಣವನ್ನು ಕಾಣಲಿಲ್ಲ. ಬಹುಪಾಲು ಶಿಷ್ಯರು ಆತ್ಮಾರ್ಪಣೆ ಮಾಡಿಕೊಂಡಿರುವ ಉಲ್ಲೇಖಗಳು ದೊರೆಯುತ್ತವೆ.

ಡಾ. ವಿ. ಗೋಪಾಲಕೃಷ್ಣ

Share this Story:

Follow Webdunia kannada