ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಖಾಯಂ ವಿಕೆಟ್ ಕೀಪರ್ ರಿಷಬ್ ಪಂತ್ ಸ್ಥಾನಕ್ಕೆ ಟೀಂ ಇಂಡಿಯಾ ಕೆ.ಎಸ್. ಭರತ್ ಆಡಲಿಳಿದಿದ್ದಾರೆ.
ಹೈದರಾಬಾದ್ ಮೂಲದ ಶ್ರೀಕರ್ ಭರತ್ ಗೆ ಇದು ಚೊಚ್ಚಲ ಟೆಸ್ಟ್ ಪಂದ್ಯ. ಹೀಗಾಗಿ ಇಂದು ಹಿರಿಯ ಆಟಗಾರ ಚೇತೇಶ್ವರ ಪೂಜಾರರಿಂದ ಕ್ಯಾಪ್ ಗೌರವ ಪಡೆದಿದ್ದಾರೆ.
ಈ ವೇಳೆ ಶ್ರೀಕರ್ ಭರತ್ ಕುಟುಂಬವೇ ಅಲ್ಲಿ ಹಾಜರಿತ್ತು. ಅದರಲ್ಲೂ ಭರತ್ ತಾಯಿಗೆ ಮುತ್ತಿಕ್ಕಿದ ಕ್ಷಣ ಎಲ್ಲರ ಗಮನ ಸೆಳೆಯಿತು.