ಐಪಿಎಲ್ 2023 ಕ್ಕೆ ತಯಾರಿ ನಡೆಸಲು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್ ಧೋನಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ತಮ್ಮ ಅಭಿಮಾನಿಗಳಿಂದ ತಲಾ ಎಂದೇ ಕರೆಯಿಸಿಕೊಳ್ಳುವ ಧೋನಿಗೆ ವಿಮಾನ ನಿಲ್ದಾಣದಲ್ಲಿ ಹೂಮಳೆಯ ಸ್ವಾಗತ ಸಿಕ್ಕಿದೆ.
ರಾಂಚಿಯಲ್ಲಿ ಇಷ್ಟು ದಿನ ಅಭ್ಯಾಸ ನಡೆಸುತ್ತಿದ್ದ ಧೋನಿ ಈಗ ಚೆನ್ನೈನಲ್ಲಿ ಇತರೆ ಆಟಗಾರರ ಜೊತೆ ಅಭ್ಯಾಸ ನಡೆಸಲಿದ್ದಾರೆ. ಧೋನಿ ಆಗಮನ ಅಭಿಮಾನಿಗಳಲ್ಲಿ ಪುಳಕವುಂಟು ಮಾಡಿದೆ.