ಕರ್ನಾಟಕದ ಪ್ರಸಿದ್ಧ ಮತ್ತು ಕಾರಣಿಕ ದೇವಾಲಯವಾದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಗೂ ಗರುಡನಿಗೂ ವಿಶೇಷ ನಂಟಿದೆ. ಇಲ್ಲಿ ಪ್ರತೀ ವರ್ಷ ಜಾತ್ರೆಯ ರಥೋತ್ಸವದ ಸಂದರ್ಭದಲ್ಲಿ ನಡೆಯುವ ಗರುಡನ ವಿಸ್ಮಯದ ಬಗ್ಗೆ ನಿಮಗೆ ತಿಳಿದಿದೆಯೇ
Photo Credit: Social Media
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ನಾಗ ರೂಪದ ಸುಬ್ರಹ್ಮಣ್ಯ ದೇವಸ್ಥಾನ
ನಾಗಾರಾಧನೆ, ಸರ್ಪದೋಷ ನಿವಾರಣೆ ಪೂಜೆಗೆ ಈ ದೇವಾಲಯ ಹೆಸರುವಾಸಿಯಾಗಿದೆ
ವಾಸುಕಿ ಮತ್ತು ಇತರೆ ದೈವೀ ಸರ್ಪಗಳು ಗರುಡನಿಂದ ರಕ್ಷಣೆ ಪಡೆಯಲು ಇಲ್ಲಿ ಆಶ್ರಯ ಪಡೆದವು
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗದೋಷ, ವಿವಾಹ, ಸಂತಾನಾಪೇಕ್ಷಿತರು ಬಂದು ಪೂಜೆ ಸಲ್ಲಿಸುತ್ತಾರೆ
ಈ ದೇವಾಲಯದಲ್ಲಿ ಪ್ರತಿವರ್ಷ ಷಷ್ಠಿ ಮಹೋತ್ಸವ ಸಂದರ್ಭದಲ್ಲಿ ಜಾತ್ರೆ, ರಥೋತ್ಸವ ನಡೆಯುತ್ತದೆ
ಈ ರಥೋತ್ಸವ ಆರಂಭಕ್ಕೆ ಮುನ್ನ ಪ್ರತೀ ವರ್ಷವೂ ಅದೆಲ್ಲಿಂದಲೋ ಒಂದು ಗರುಡ ಕಾಣಿಸಿಕೊಳ್ಳುತ್ತಾನೆ
ಅದೇ ಸಂದರ್ಭಕ್ಕೆ ಸರಿಯಾಗಿ ಗರುಡ ಎಲ್ಲಿಂದ ಬರುತ್ತಾನೆ, ಎಲ್ಲಿ ಮರೆಯಾಗುತ್ತಾನೆ ಎಂದು ಯಾರಿಗೂ ತಿಳಿದಿಲ್ಲ