ಹಾಲು ಪರಿಪೂರ್ಣ ಆಹಾರವಾಗಿದ್ದು, ಪ್ರತಿನಿತ್ಯ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹಾಲು ಕುಡಿಯುವ ಅಭ್ಯಾಸ ಬಹುತೇಕರಲ್ಲಿರುತ್ತದೆ. ಆದರೆ ಯಾವ ಸಮಯದಲ್ಲಿ ಹಾಲು ಕುಡಿದರೆ ನಮ್ಮ ದೇಹಕ್ಕೆ ಅದರ ಸಂಪೂರ್ಣ ಫಲ ಸಿಗುತ್ತದೆ ತಿಳಿದುಕೊಳ್ಳಿ.
credit: social media
ಹಾಲು ಒಂದು ಪರಿಪೂರ್ಣ ಆಹಾರವಾಗಿದ್ದು, ದೇಹಕ್ಕೆ ಬೇಕಾದ ಪೋಷಕಾಂಶ ಒದಗಿಸುತ್ತದೆ.
ಪ್ರತಿನಿತ್ಯ ಹಾಲು ಸೇವಿಸುವುದರಿಂದ ಕ್ಯಾಲ್ಶಿಯಂ, ವಿಟಮಿನ್ಸ್ ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತದೆ.
ಪ್ರತಿನಿತ್ಯ ಸಂಜೆ ವೇಳೆಗೆ ಹಾಲು ಕುಡಿಯುವುದನ್ನು ಅಭ್ಯಾಸ ಮಾಡಿ. ಇದು ಹಾಲು ಕುಡಿಯಲು ಬೆಸ್ಟ್ ಟೈಮ್.
ಸಂಜೆ ವೇಳೆಗೆ ಹಾಲು ಸೇವಿಸುವುದರಿಂದ ಅದರ ಪೋಷಕಾಂಶವನ್ನು ದೇಹ ಸರಿಯಾಗಿ ಹೀರಿಕೊಳ್ಳುತ್ತದೆ.
ಡಯಟ್ ಮಾಡುವವರು ಅಥವಾ ಇನ್ಯಾವುದೇ ಅಡ್ಡಿ ಇದ್ದರೆ ಸೋಯಾ ಮಿಲ್ಕ್ ಅಥವಾ ಬಾದಾಮಿ ಹಾಲು ಸೇವಿಸಬಹುದು.
ಪ್ರತಿನಿತ್ಯ ಮಲಗುವ ಮೊದಲು ಒಂದು ಲೋಟ ಹಾಲು ಸೇವಿಸುವುದನ್ನು ಅಭ್ಯಾಸವಾಗಿ ಮಾಡಿಕೊಳ್ಳಿ.
ಪ್ರತಿನಿತ್ಯ ಹಾಲು ಸೇವಿಸುವುದರಿಂದ ಎಲುಬು ಗಟ್ಟಿಯಾಗುವುದಲ್ಲದೆ, ಆರೋಗ್ಯಕರ ಜೀವನ ನಿಮ್ಮದಾಗುತ್ತದೆ.