ಗಂಟು ನೋವು, ಮೈಕೈ ನೋವಿಗೆಲ್ಲಾ ಅರಿಶಿನ ರಾಮಬಾಣ

ಪ್ರತಿದಿನ ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಅರಿಶಿನವನ್ನು ಬಳಕೆ ಮಾಡಿಕೊಳ್ಳುತ್ತಾ ಬಂದರೆ, ಅದರಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಬದಲಿಗೆ ನೈಸರ್ಗಿಕವಾಗಿ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಬಲವಾಗುತ್ತದೆ. ತುಂಬಾ ಜನರು ಇದೇ ಕಾರಣಕ್ಕೆ ನೈಸರ್ಗಿಕ ಔಷಧೀಯ ಪದ್ಧತಿಗೆ ಒಲವು ತೋರುತ್ತಾರೆ. ನಿಮ್ಮ ದೇಹದಲ್ಲಿ ಉರಿಯೂತ ಮತ್ತು ಕೀಲು ನೋವಿನ ಸಮಸ್ಯೆಯನ್ನು ಪರಿಹಾರ ಮಾಡಲು ಅರಿಶಿನ ಸಹಾಯಮಾಡುತ್ತದೆ. ಜೊತೆಗೆ ಮೂಳೆಗಳಲ್ಲಿ ಕಂಡುಬರುವ ನೋವನ್ನು ಇದು ದೂರ ಮಾಡಬಲ್ಲದು.

photo credit social media

ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಾಗಿರುವ ಅರಿಶಿನವನ್ನು ಬಳಕೆ ಮಾಡಿ ನಿಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು. ಮನೆಯಲ್ಲಿ ಅರಿಶಿನವನ್ನು ವಿವಿಧ ಅಡುಗೆ ಪದಾರ್ಥಗಳಲ್ಲಿ ಬಳಸುವುದು ಸಾಮಾನ್ಯವಾಗಿದೆ. ಇದರ ಜೊತೆ ಇನ್ನೂ ಕೆಲವು ವಿಧಾನಗಳಲ್ಲಿ ಬಳಸಬಹುದು.

ಕೀಲುನೋವು ಹಾಗೂ ಉರಿಯೂತವನ್ನು ಪರಿಹಾರ ಮಾಡಿಕೊಳ್ಳಲು ಅರಿಶಿನ ಮತ್ತು ಹಾಲಿನ ಮಿಶ್ರಣವನ್ನು ಸೇವನೆ ಮಾಡಬಹುದು. ಒಂದು ಲೋಟ ಉಗುರುಬೆಚ್ಚಗಿನ ಹಾಲಿಗೆ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿಕೊಂಡು ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಸಿಗುತ್ತದೆ.

1 ಟೀಚಮಚ ಅರಿಶಿನ ಪುಡಿ ಮತ್ತು ಬಾದಾಮಿ ಪುಡಿಯನ್ನು ಸಹ ತೆಂಗಿನ ಹಾಲಿಗೆ ಹಾಕಿಕೊಂಡು ಕುಡಿಯುವುದರಿಂದ ಲಾಭವಿದೆ. ಬೇಕೆಂದರೆ ಸಿಹಿಯ ಬದಲಿಗೆ ಇಲ್ಲಿ ನೀವು ಜೇನುತುಪ್ಪವನ್ನು ಸಹ ಬಳಕೆ ಮಾಡಬಹುದು. ಪ್ರತಿದಿನ ಇಂತಹ ಅಭ್ಯಾಸವನ್ನು ಮಾಡಿಕೊಳ್ಳುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ ಶುಂಠಿ ಮತ್ತು ಅರಿಶಿನ ತಮ್ಮಲ್ಲಿ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳನ್ನು ಒಳಗೊಂಡಿರುತ್ತವೆ. ಆಂಟಿಆಕ್ಸಿಡೆಂಟ್ ಅಂಶಗಳು ಕೂಡ ಇರುವುದರಿಂದ ಕೈ ಕಾಲುಗಳ ಸೆಳೆತ ಮತ್ತು ನೋವು ದೂರವಾಗುತ್ತದೆ.

ಅರಿಶಿನದಲ್ಲಿ ಮುಖ್ಯವಾಗಿ ಕಂಡುಬರುವುದು ಕರ್ಕ್ಯುಮಿನ್ ಎಂಬ ಅಂಶ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ನಿಮ್ಮ ದೇಹಕ್ಕೆ ಸಂಪೂರ್ಣ ಸಕಾರಾತ್ಮಕ ಫಲಿತಾಂಶಗಳನ್ನು ನೀಡುವಲ್ಲಿ ಇದರ ಪಾತ್ರ ತುಂಬಾ ದೊಡ್ಡದು.

ನೀವು ಎರಡು ಬಗೆಯ ಅಂಶಗಳನ್ನು ಮಿಶ್ರಣಮಾಡಿ ಪೇಸ್ಟ್ ತಯಾರು ಮಾಡಿಕೊಂಡು ಸವಿಯಬಹುದು. 1 ಟೀಚಮಚ ಅರಿಶಿನ ಪುಡಿ ಮತ್ತು ಕೋಕನಟ್ ಆಯಿಲ್ ಮಿಶ್ರಣ ಮಾಡಿ ಪೇಸ್ಟ್ ತಯಾರು ಮಾಡಿಕೊಂಡು ನೋವು ಕಂಡುಬರುತ್ತಿರುವ ನಿಮ್ಮ ಕೀಲುಗಳ ಭಾಗದಲ್ಲಿ ಅನ್ವಯಿಸಿ ಮೂರು ಗಂಟೆಗಳು ಬಿಟ್ಟು ಆನಂತರ ನೀರಿನಲ್ಲಿ ಸ್ವಚ್ಛ ಮಾಡಿಕೊಳ್ಳಬೇಕು.

ನಿಮ್ಮ ದೇಹದಲ್ಲಿ ಉರಿಯೂತ ಮತ್ತು ಕೀಲು ನೋವಿನ ಸಮಸ್ಯೆಯನ್ನು ಪರಿಹಾರ ಮಾಡಲು ಅರಿಶಿನ ಸಹಾಯಮಾಡುತ್ತದೆ. ಜೊತೆಗೆ ಮೂಳೆಗಳಲ್ಲಿ ಕಂಡುಬರುವ ನೋವನ್ನು ಇದು ದೂರ ಮಾಡಬಲ್ಲದು.

ತೂಕವನ್ನು ಹೆಚ್ಚಿಸಿಕೊಳ್ಳಬೇಕು ಅಂದ್ರೆ ಇದನ್ನು ಸೇವಿಸಿ

Follow Us on :-