ಟೊಮೆಟೊ ಹಣ್ಣಿನ ಸಿಪ್ಪೆಯನ್ನು ಸಾರು ಅಥವಾ ರಸಂ ಮಾಡುವಾಗ ಕೆಲವರು ಬಳಸುವುದಿಲ್ಲ. ಆದರೆ ಟೊಮೆಟೊ ಹಣ್ಣಿನ ಸಿಪ್ಪೆಯನ್ನು ಬಿಸಾಕದೇ ಮರು ಬಳಕೆ ಮಾಡಬಹುದು. ಟೊಮೆಟೊ ಸಿಪ್ಪೆಯನ್ನು ಯಾವ ರೀತಿ ಮರುಬಳಕೆ ಮಾಡಬಹುದು ನೋಡಿ.
Photo Credit: Instagram, AI image
ಟೊಮೆಟೊ ಸಿಪ್ಪೆಯನ್ನು ಬೇಯಿಸುವ ಮೊದಲು ಅಥವಾ ಒಂದು ಹಬೆ ಬರಿಸಿ ಸಿಪ್ಪೆ ತೆಗೆದಿಟ್ಟುಕೊಳ್ಳಿ
ಹಸಿ ಟೊಮೆಟೊ ಸಿಪ್ಪೆಯನ್ನು ತೆಗೆದು ಮುಖಕ್ಕೆ ಉಜ್ಜುವುದರಿಂದ ಮುಖದ ಕಾಂತಿ ವೃದ್ಧಿಯಾಗುತ್ತದೆ
ಟೊಮೆಟೊ ಸಿಪ್ಪೆಯನ್ನು ಬೇಯಿಸಿ ಚಿಕ್ಕದಾಗಿ ಕತ್ತರಿಸಿಕೊಂಡು ಸಲಾಡ್ ಗಳಿಗೆ ಅಲಂಕಾರಿಕವಾಗಿ ಬಳಸಿ
ಟೊಮೆಟೊ ಸಿಪ್ಪೆಯನ್ನು ಒಣಗಿಸಿ ಪೇಸ್ಟ್ ಮಾಡಿ ಕಾಳುಮೆಣಸು, ಉಪ್ಪು ಹಾಕಿ ಜ್ಯೂಸ್ ಮಾಡಿ
ಟೊಮೆಟೊ ಸಿಪ್ಪೆಯನ್ನು ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ಮಾಡಿ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು
ಟೊಮಟೊ ಸಿಪ್ಪೆಗೆ ಜೇನು ತುಪ್ಪ, ಮೊಸರು ಹಾಕಿ ಫೇಸ್ ಪ್ಯಾಕ್ ತಯಾರಿಸಿಕೊಳ್ಳಬಹುದು
ಟೊಮೆಟೊ ಸಿಪ್ಪೆಗೆ ಸಕ್ಕರೆ ಹಾಕಿ ಅದನ್ನು ಸ್ಕ್ರಬ್ಬರ್ ನಂತೆ ಉಜ್ಜುವುದರಿಂದ ಡಾರ್ಕ್ ಸರ್ಕಲ್ ಮಾಯವಾಗುತ್ತದೆ