ಆರೋಗ್ಯಕರ ರೀತಿಯಲ್ಲಿ ತೆಳ್ಳಗಾಗಲು 10 ಟಿಪ್ಸ್

ಕಟ್ಟುನಿಟ್ಟಿನಡಯಟ್ ಮಾಡಿದರಂತೂ ಪಥ್ಯದಲ್ಲಿರುವಂತೆ ಅನಿಸುವುದು, ಅಲ್ಲದೆ ಬಾಯಿಗೆ ರುಚಿಕರವಿಲ್ಲದೆ ಡಯಟ್ ಬಗ್ಗೆ ಒಂಥರಾ ಬೇಸರಿಕೆ ಬಂದು ಬಿಡುತ್ತದೆ. ಆದರೆ ಈ ಕೆಳಗೆ ಸಮತೂಕಕ್ಕಾಗಿ 10 ಟಿಪ್ಸ್ ಹೇಳಲಾಗಿದೆ. ಅದನ್ನು ಪಾಲಿಸಿದರೆ ಪಥ್ಯವನ್ನು ಪಾಲಿಸಬೇಕಾಗಿಲ್ಲ,.

photo credit social media

ಬೆಳಗ್ಗೆ ಎದ್ದು ಒಂದು ಲೋಟ ಬಿಸಿ ನೀರಿಗೆ ನಿಂಬೆ ರಸ ಹಾಕಿ ಕುಡಿಯಬೇಕು. ಪ್ರತಿದಿನ 8-10 ಲೋಟ ನೀರು ಕುಡಿಯಬೇಕು.

ದಪ್ಪವಾದರೆ ದೇಹದ ಸುಂದರ ಆಕಾರ ಹಾಳಾಗುವುದು ಮಾತ್ರವಲ್ಲ ಅನೇಕ ಕಾಯಿಲೆಗಳು ಬರಲಾರಂಭಿಸುತ್ತದೆ. ಆದ್ದರಿಂದ ದೇಹದ ತೂಕವನ್ನು ಸಮತೋಲನದಲ್ಲಿ ಇಡಬೇಕು.

ಟೀ ಬದಲು ಗ್ರೀನ್ ಟೀ ಕುಡಿಯಿರಿ. ದಿನದಲ್ಲಿ ಒಂದು ಗ್ಲಾಸ್ ಕುಡಿದರೆ ಸಾಕು.ಸಕ್ಕರೆಯಂಶವಿರುವ ತಿಂಡಿಗಳನ್ನು ಮಿತಿಯಲ್ಲಿ ತಿನ್ನಿ. ಬರೀ ತಿಂಡಿ ಮಾತ್ರವಲ್ಲ ಸಕ್ಕರೆಯಂಶವಿರುವ ಆಹಾರ ಪದಾರ್ಥಗಳನ್ನು ಮಿತಿಯಲ್ಲಿ ತಿನ್ನಿ.

ಎಲ್ಲಾ ರೀತಿಯ ತರಕಾರಿಗಳನ್ನು ತಿನ್ನಿ, ಕ್ಯಾರೆಟ್ ಪ್ರತಿದಿನ ತಿನ್ನಬೇಕು. ಆದರೆ ಮಿತಿಯಲ್ಲಿ ತಿನ್ನಿ. ಕಡಿಮೆ ಕೊಬ್ಬಿನಂಶವಿರುವ ಹಾಲಿನ ಉತ್ಪನ್ನಗಳನ್ನು ಸೇವಿಸಿ.

ಆಹಾರವನ್ನು ಹೊಟ್ಟೆ ತುಂಬಾ ತಿನ್ನುವ ಬದಲು ಸ್ವಲ್ಪ-ಸ್ವಲ್ಪ ಆಹಾರವನ್ನು 6 ಬಾರಿ ತಿನ್ನಿ. ಕಾರ್ಬೋಹೈಡ್ರೇಟ್ ಆಹಾರವನ್ನು ಮಿತಿಯಲ್ಲಿ ತಿನ್ನಿ, ಪ್ರೊಟೀನ್ ಇರುವ ಆಹಾರವನ್ನು ತಿನ್ನಿ.

ಆರೋಗ್ಯಕರ ಕೊಬ್ಬಿನಂಶವಿರುವ ಆಹಾರವನ್ನು ತಿನ್ನಿ. ಮೀನು, ಅಗಸೆದ ಬೀಜ,ಆಲೀವ್ ಎಣ್ಣೆ, ಫಿಶ್ ಆಯಿಲ್ ಇವುಗಳ ಸೇವನೆ ತಂಬಾ ಒಳ್ಳೆಯದು.

ದಿನಕ್ಕೆ ಅರ್ಧಗಂಟೆ ವ್ಯಾಯಾಮಕ್ಕಾಗಿ ಮೀಸಲಿಡಿ. ಇಷ್ಟು ಮಾಡಿದರೆ ದಪ್ಪಗಾಗುತ್ತಿದ್ದೇವೆ ಎಂಬ ಚಿಂತೆಯಿಲ್ಲದೆ ಆಕರ್ಷಕ ಮೈಕಟ್ಟನ್ನು ಪಡೆಯಬಹುದು.

ನಿಮ್ಮ ಹೃದಯದ ಆರೋಗ್ಯಕ್ಕೆ ಇಲ್ಲಿದೆ ಮನೆಮದ್ದು

Follow Us on :-