ಸಾಮಾನ್ಯವಾಗಿ ಸಂಜೆ ಹೊತ್ತು ಚಹಾ ಜೊತೆ ಕುರುಕಲು ಏನಾದರೂ ಬೇಕೆನಿಸಿದರೆ ತಿನ್ನಬಹುದಾದ ಬೆಸ್ಟ್ ತಿಂಡಿಯೆಂದರೆ ಕೋಡುಬಳೆ. ಕೋಡುಬಳೆ ಮಾಡುವಾಗ ಪಾಕ ಸರಿಯಾಗದೇ ಇದ್ದರೆ ರುಚಿಯಾಗದು. ಕ್ರಿಸ್ಪಿಯಾಗಿ ಕೋಡುಬಳೆ ಮಾಡುವ ವಿಧಾನ ಇಲ್ಲಿದೆ.
Photo Credit: Instagram
ಒಂದು ಅಗಲ ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ರವೆ, ಮೈದಾ ಹಿಟ್ಟು ತೆಗೆದುಕೊಳ್ಳಿ
ಇದಕ್ಕೆ ಸ್ವಲ್ಪಖಾರದ ಪುಡಿ, ಇಂಗು ಮತ್ತು ಓಮವನ್ನು ಹಾಕಿಕೊಳ್ಳಿ
ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವೂ ಮಿಕ್ಸ್ ಆಗುವಂತೆ ಚೆನ್ನಾಗಿ ಬೆರೆಸಿಕೊಳ್ಳಿ
ಈಗ ಇದಕ್ಕೆ ಎರಡರಿಂದ ಮೂರು ಸ್ಪೂನ್ ಬಿಸಿ ಎಣ್ಣೆಯನ್ನು ಹಾಕಿಕೊಂಡು ಚೆನ್ನಾಗಿ ಕಲಸಿ
ಬಳಿಕ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಂಡು ಹಿಟ್ಟು ಹದಬರುವಂತೆ ನಾದಿಕೊಳ್ಳಿ
ಹಿಟ್ಟು ಮೃದುವಾಗಿದ್ದಷ್ಟು ಕೋಡುಬಳೆ ಕ್ರಿಸ್ಪಿಯಾಗಿ ಬರುವುದು ಹೆಚ್ಚು
ಈಗ ಇದನ್ನು ಕೋಡುಬಳೆ ಆಕಾರಕ್ಕೆ ತಂದು ಕಾದ ಎಣ್ಣೆಗೆ ಹಾಕಿ ಹುರಿದರೆ ಸುಲಭ ಕೋಡುಬಳೆ ಸಿದ್ಧ