ಸುವರ್ಣ ಗಡ್ಡೆ ಕತ್ತರಿಸುವಾಗ ಕೈ ತುರಿಕೆಯಾಗುತ್ತಿದ್ದರೆ ಹೀಗೆ ಮಾಡಿ

ಸುವರ್ಣ ಗಡ್ಡೆ ಕತ್ತರಿಸುವಾಗ ಹೆಚ್ಚಾಗಿ ಕೈ ತುರಿಕೆ ಬರುತ್ತದೆ. ಕೆಲವರಿಗೆ ಇದರಿಂದ ಕೈ ಅಲರ್ಜಿಯಾಗಿ ಊದಿಕೊಳ್ಳುವುದೂ ಇದೆ. ಹಾಗಿದ್ದರೆ ತುರಿಕೆಯಾಗದಂತೆ ಏನು ಮಾಡಬೇಕು ಇಲ್ಲಿದೆ ಟಿಪ್ಸ್.

Photo Credit: Instagram, WD

ಸುವರ್ಣ ಗಡ್ಡೆ ಸಿಪ್ಪೆಯಲ್ಲಿರುವ ಕ್ಯಾಲ್ಸಿಯಂ ಆಕ್ಸಲೇಟ್ ಮತ್ತು ಸಪೋನಿನ್ ಗಳಿಂದ ಕೈ ತುರಿಸುತ್ತದೆ

ಸುವರ್ಣ ಗಡ್ಡೆ ಕತ್ತರಿಸುವ ಮೊದಲು ಮತ್ತು ನಂತರ ಕೈಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ

ಸುವರ್ಣ ಗಡ್ಡೆ ಕತ್ತರಿಸಿದ ತಕ್ಷಣ ಕೈಗೆ ಮಜ್ಜಿಗೆ ಹಾಕಿಕೊಂಡರೆ ತುರಿಕೆ ತಕ್ಷಣ ನಿಲ್ಲುತ್ತದೆ

ಸುವರ್ಣ ಗಡ್ಡೆ ಕತ್ತರಿಸುವಾಗ ಕೈ ತುರಿಕೆಯಾಗುತ್ತಿದ್ದರೆ ಸ್ವಲ್ಪ ನಿಂಬೆ ರಸವನ್ನು ಕೈಗೆ ಹಚ್ಚಿ

ಹುಣಸೆ ಹುಳಿ ನೀರನ್ನು ಕೈಗೆ ಹಚ್ಚಿಕೊಂಡು ಸುವರ್ಣ ಗಡ್ಡೆ ಕತ್ತರಿಸಿದರೆ ತುರಿಸುವುದಿಲ್ಲ

ಸ್ವಲ್ಪ ಬೇಕಿಂಗ್ ಸೋಡಾವನ್ನು ಕೈಗೆ ಸಿಂಪಡಿಸಿಕೊಂಡು ಸುವರ್ಣ ಗಡ್ಡೆ ಕತ್ತರಿಸಿ

ಸುವರ್ಣ ಗಡ್ಡೆ ಕತ್ತರಿಸುವ ಮೊದಲು ಉಪ್ಪು ನೀರಿನಲ್ಲಿ ತೊಳೆದು ಕತ್ತರಿಸಿದರೆ ತುರಿಸದು

ನಿಂಬೆ ಹಣ್ಣು ಬಾಡಿದ್ದರೆ ಹೀಗೆ ಮಾಡಿ

Follow Us on :-