ಆತಂಕ ಮತ್ತು ಒತ್ತಡವಿದ್ದಾಗ ಸಹಜವಾಗಿ ನಾಲಿಗೆ ಒಣಗಿ ಬರುವುದು ಸಾಮಾನ್ಯ. ಆದರೆ ಇದೆಲ್ಲದರ ಹೊರತಾಗಿಯೂ ನಾಲಿಗೆ ಒಣಗಿ ಬರುತ್ತಿದೆ ಎಂದರೆ ಏನೋ ಗಂಭೀರವಾದ ಸಮಸ್ಯೆಯಿದೆ ಎಂದೇ ಅರ್ಥ. ನಾಲಿಗೆ ಒಣಗಿ ಬರಲು ಕಾರಣವೇನು ನೋಡಿ.
credit: social media
ಒತ್ತಡ ಮತ್ತು ಆತಂಕ ಇಲ್ಲವೇ ಭಯವಾದಾಗ ನಾಲಿಗೆ ಒಣಗಿ ಬರುವುದು ಸಹಜವಾಗಿದೆ
ಕೆಲವೊಂದು ವೈದ್ಯಕೀಯ ಚಿಕಿತ್ಸೆ, ಔಷಧಿಗಳನ್ನು ತೆಗೆದುಕೊಂಡಾಗ ನಾಲಿಗೆ ಒಣಗಿ ಬರುವುದು.
ರೇಡಿಯೋ ಥೆರಪಿ, ಕೀಮೊಥೆರಪಿಯಂತಹ ಚಿಕಿತ್ಸೆಗೊಳಗಾದಾಗ ಈ ಸಮಸ್ಯೆಯಾಗಬಹುದು
ದೇಹ ಅತಿಯಾಗಿ ನಿರ್ಜಲೀಕರಣಕ್ಕೊಳಗಾದಾಗ ಬಾಯಿ ಒಣಗಿ ಬರುವ ಸಮಸ್ಯೆಯಾಗಬಹುದು
ಪಾರ್ಕಿನ್ ಸನ್ ರೋಗಕ್ಕೆ ತೆಗೆದುಕೊಳ್ಳುವ ಔಷಧಿಗಳಿಂದ ಬಾಯಿ ಒಣಗಿ ಬರಬಹುದು
ಅಧಿಕ ರಕ್ತದೊತ್ತಡಕ್ಕೆ ತೆಗೆದುಕೊಳ್ಳುವ ಕೆಲವೊಂದು ಔಷಧಿಗಳು ಬಾಯಿ ಒಣಗುವ ಸಮಸ್ಯೆಗೆ ಕಾರಣವಾಗಬಹುದು
ಇಂತಹ ಯಾವುದೇ ಸಂದರ್ಭದಲ್ಲಿ ತಡಮಾಡದೇ ತಜ್ಞ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಿರಿ