ಕಾಳುಗಳು ಅತ್ಯಂತ ಆರೋಗ್ಯಕರ ಆಹಾರ ಪದಾರ್ಥಗಳಲ್ಲಿ ಒಂದು.

ಮೊಳಕೆ ಕಟ್ಟಿದ ಕಾಳುಗಳ ಬಗ್ಗೆ ಯಾರಿಗೆ ತಾನೇ ಗೊತ್ತಿರುವುದಿಲ್ಲ ಹೇಳಿ. ವಿವಿಧ ರೀತಿಯ ಪೋಷಕಾಂಶಗಳು ಅವುಗಳಲ್ಲಿ ಇರುತ್ತವೆ. ಜೊತೆಗೆ ದೇಹಕ್ಕೆ ಕೂಡ ತಂಪು. ಬೇರೆ ಆಹಾರಗಳಿಗಿಂತ ಮೊಳಕೆ ಸಹಿತವಾದ ಕಾಳುಗಳು ದೇಹಕ್ಕೆ ಪುಷ್ಟಿ ನೀಡುವುದರ ಜೊತೆಗೆ, ದಿನ ಪೂರ್ತಿ ಚೈತನ್ಯದಿಂದ ಇರಲು ಸಹಕಾರಿಯಾಗಿರುವಂತೆ ನೋಡಿಕೊಳ್ಳುತ್ತವೆ ಎಂಬ ಇತ್ಯಾದಿ.

photo credit social media

ಮೊಳಕೆ ಕಟ್ಟಿದ ಕಾಳುಗಳಲ್ಲಿ ವಿಟಮಿನ್ ಅಂಶ ಬಹುತೇಕ ಹೆಚ್ಚಿರುತ್ತದೆ ಎಂದರೆ ಅದರಲ್ಲಿ ಆಶ್ಚರ್ಯ ಪಡುವ ಅಗತ್ಯ ಇಲ್ಲ. ಏಕೆಂದರೆ ಇದು ಸತ್ಯ ಕೂಡ ಹೌದು. ಅನೇಕ ವಿಟಮಿನ್ ಗಳಾದ ವಿಟಮಿನ್ ' ಎ ', ವಿಟಮಿನ್ ' ಬಿ - ಕಾಂಪ್ಲೆಕ್ಸ್ ', ವಿಟಮಿನ್ ' ಸಿ ' ಮತ್ತು ವಿಟಮಿನ್ ' ಈ ' ಗಳು ಮೊಳಕೆ ಕಾಳುಗಳಲ್ಲಿ ಅಗಾಧವಾಗಿರುತ್ತವೆ.

ಕಾಳುಗಳು ಮೊಳಕೆ ಬರಲು ಶುರು ಮಾಡಿದ ಕೆಲವೇ ದಿನಗಳಲ್ಲಿ ಈ ವಿಟಮಿನ್ ಗಳು ಮೂಲ ವಿಟಮಿನ್ ಗಳಿಗೆ ಹೋಲಿಸಿದರೆ ಶೇಕಡ 20 ರಷ್ಟು ಹೆಚ್ಚಾಗುತ್ತಾ ಹೋಗುತ್ತವೆ. ಇದನ್ನು ಸಾಬೀತುಪಡಿಸಲು ಎಂದು ಕೆಲವು ಸಂಶೋಧನಾ ತಂಡಗಳು ಕೈಗೊಂಡ ಸಂಶೋಧನೆಗಳಲ್ಲಿ ಹೆಸರುಬೇಳೆ ಗಳಲ್ಲಿ ವಿಟಮಿನ್ ಬಿ 1 ವಿಟಮಿನ್ ಬಿ 2 ಮತ್ತು ನಯಾಸಿನ್ ಹೆಚ್ಚಾಗಿದ್ದನ್ನು ಗಮನಿಸಬಹುದು.

ಅಗತ್ಯವಾದ ಫ್ಯಾಟಿ ಆಮ್ಲದ ಅಂಶ ಕಾಳುಗಳು ಮೊಳಕೆಯೊಡೆಯುವ ಸಮಯದಲ್ಲಿ ಜಾಸ್ತಿಯಾಗುತ್ತಾ ಹೋಗುತ್ತದೆ. ನಾವು ಪ್ರತಿದಿನ ಸೇವಿಸುವ ಆಹಾರದಲ್ಲಿ ಕೊಬ್ಬಿನಾಂಶವನ್ನು ಕರಗಿಸುವ ಅಗತ್ಯವಾದ ಫ್ಯಾಟಿ ಆಸಿಡ್ ಗಳು ತೀರಾ ಕಡಿಮೆ ಇರುತ್ತವೆ ಹಾಗೂ ಒಂದೊಂದು ಆಹಾರದಲ್ಲಿ ಇರುವುದೇ ಇಲ್ಲ.

ಇಂತಹ ಸಮಯಗಳಲ್ಲಿ ಮೊಳಕೆ ಕಟ್ಟಿದ ಕಾಳುಗಳನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಲಭಿಸುವುದರ ಜೊತೆಗೆ ನಿಮ್ಮ ದೇಹದ ಕೊಬ್ಬನ್ನು ಕರಗಿಸುವ ಪ್ರಕ್ರಿಯೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬಹುದು.

ಸಾಮಾನ್ಯವಾಗಿ ಮೊಳಕೆ ಕಟ್ಟದ ಕಾಳುಗಳಿಗಿಂತ ಮೊಳಕೆ ಕಟ್ಟಿದ ಕಾಳುಗಳು ದೇಹದಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ.

ನಮ್ಮ ದೇಹದಲ್ಲಿರುವ ಕ್ಷಾರೀಯ ಖನಿಜಾಂಶಗಳು ಎಂದೇ ಹೆಸರಾದ ಕ್ಯಾಲ್ಸಿಯಂ, ಮೆಗ್ನೀಷಿಯಂ ಮತ್ತು ಇನ್ನಿತರ ಖನಿಜಾಂಶಗಳು ನಮ್ಮ ದೇಹದ ದೈನಂದಿನ ರಾಸಾಯನಿಕ ಕ್ರಿಯೆಯನ್ನು ತುಲನೆ ಮಾಡಿ ನಮ್ಮ ದೇಹದ ಅಧಿಕ ತೂಕವನ್ನು ಕಡಿಮೆ ಮಾಡಿ ಆರೋಗ್ಯವನ್ನು ಹೆಚ್ಚಿಸುತ್ತದೆ.

ಎಲ್ಲಕ್ಕೂ ಮಿಗಿಲಾಗಿ ನೀವು ಮೊಳಕೆ ಕಾಳುಗಳನ್ನು ತಯಾರಿಸಲು ಯಾವುದೇ ರೀತಿಯ ಕೊಬ್ಬಿನಂಶ ಹೆಚ್ಚು ಮಾಡುವ ರಾಸಾಯನಿಕಗಳನ್ನಾಗಲೀ, ಅವಶ್ಯವಿಲ್ಲದ ಕೀಟನಾಶಕಗಳನ್ನಾಗಲೀ, ಆಹಾರ ಸೇರ್ಪಡೆಗಳನ್ನಾಗಲೀ ಸಿಂಪಡಿಸುವುದಿಲ್ಲ.

ಪೋಷಕಾಂಶ ಭರಿತ ಆಹಾರ ಕೊರತೆ: ಕೇಶರಾಶಿ ಉದರಲು ಕಾರಣ

Follow Us on :-