ಉತ್ತರ ಕರ್ನಾಟಕ ಶೈಲಿಯ ಸೊಪ್ಪಿನ ಪಲ್ಯ

ಉತ್ತರ ಕರ್ನಾಟಕ ಶೈಲಿಯ ಸೊಪ್ಪಿನ ಪಲ್ಯ ತುಂಬಾ ರುಚಿಕರ. ಇದನ್ನು ದೋಸೆ, ಚಪಾತಿಗೂ ನೆಚ್ಚಿಕೊಂಡು ಸೇವನೆ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಲು ಇಡಿ

ಇದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಕೊಡಿ

ಈಗ ಕ್ಲೀನ್ ಮಾಡಿ ಹೆಚ್ಚಿಟ್ಟ ಸೊಪ್ಪನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ

ಇದಕ್ಕೆ ಸ್ವಲ್ಪವೇ ನೀರು ಚಿಮುಕಿಸಿ 5 ನಿಮಿಷ ಬೇಯಲು ಬಿಡಿ

ಹದವಾಗಿ ಬೆಂದಾಗ ಬೆಲ್ಲ, ಉಪ್ಪು ಮತ್ತು ಬೇಯಿಸಿದ ತೊಗರಿ ಬೇಳೆ ಸೇರಿಸಿ

ಇದನ್ನು ಚೆನ್ನಾಗಿ ತಿರುವಿಕೊಂಡು ಎರಡು ನಿಮಿಷ ಬೇಯಿಸಿ

ಈಗ ಮೇಲಿನಿಂದ ಬೇಕಿದ್ದಲ್ಲಿ ಸ್ವಲ್ಪ ಕಾಯಿತುರಿ ಉದುರಿಸಿದರೆ ಪಲ್ಯ ರೆಡಿ

ಲಕ್ಷ್ಮೀ ದೇವಿಯ ಅರ್ಥ ಬರುವ ಹೆಣ್ಣು ಮಗುವಿನ ಹೆಸರುಗಳು

Follow Us on :-