ಈ ಸೊಪ್ಪಿನ ಔಷಧೀಯ ಅಂಶಗಳು ಆರೋಗ್ಯವನ್ನು ಕಾಪಾಡುತ್ತದೆ.

ಸೊಪ್ಪಿನಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳು ಹೊಂದಿದೆ. ಉದಾಹರಣೆಗೆ ಹೊಟ್ಟೆ ನೋವು, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆ ಎಲೆಗಳಿಂದ ಮನೆಔಷಧಿ ತಯಾರಿಸಬಹುದು.

photo credit social media

ಯಕೃತ್ ನ ಮಂದ ಚಟುವಟಿಕೆ ಮತ್ತು ಅಗ್ನಿಮಾಂದ್ಯ ಸಮಸ್ಯೆ ನಿವಾರಣೆ ಮಾಡಲು ಇದು ತುಂಬಾ ಸಹಕಾರಿ ಆಗಿರುವುದು. ಇದು ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಇದರ ಕರುಳಿನ ಸಮಸ್ಯೆ ನಿವಾರಣೆ ಮಾಡುವುದು. ಅತಿಸಾರ ಸಮಸ್ಯೆ ನಿವಾರಣೆ ಮಾಡಲು ಇದು ಲಾಭಕಾರಿ.

ಮೌಥ್ ಪ್ರೆಶ್ನರ್ ಆಗಿ ಬಳಕೆ ಮಾಡಲು ನೆರಳಿನಲ್ಲಿ ಈ ಎಲೆಗಳನ್ನು ಒಣಗಿಸಿ ಮತ್ತು ಇದರ ಬಳಿಕ ಹುಡಿ ಮಾಡಿಕೊಳ್ಳಿ. ಕೆಲವು ಹನಿ ಲಿಂಬೆ ರಸ ಹಾಕಿದ ಪಾತ್ರೆಗೆ ಇದನ್ನು ಹಾಕಿ. ಇದನ್ನು ಬಳಕೆ ಮಾಡುವ ಮೊದಲು ಕೆಲವು ನಿಮಿಷ ಬಿಸಿ ಮಾಡಿ. ಇದರ ಬಳಿಕ ತಣ್ಣಗಾಗಲು ಬಿಡಿ. ಈ ಮಿಶ್ರಣವು ಒಣಗಿದ ಬಳಿಕ ಹಲವಾರು ವಿಧದಿಂದ ಇದರ ಬಳಕೆ ಮಾಡಬಹುದು.

ಕೊಲೆಸ್ಟ್ರಾಲ್ ಎನ್ನುವುದು ಇಂದಿನ ದಿನಗಳಲ್ಲಿ ಕೆಲವರನ್ನು ದೊಡ್ಡ ಸಮಸ್ಯೆಯಾಗಿ ಕಾಡುತ್ತಲಿರುವುದು. ಇದರೊಂದಿಗೆ ರಕ್ತದಲ್ಲಿನ ಲಿಪಿಡ್ ಮಟ್ಟದಲ್ಲಿ ಏರುಪೇರಾಗುವುದು ಕೂಡ ಒಂದು ಸಮಸ್ಯೆ. ಇದನ್ನು ನಿಯಂತ್ರಿಸಲು ಮೆಂತ್ಯೆ ಎಲೆಗಳು ತುಂಬಾ ಸಹಕಾರಿ ಆಗಿರುವುದು.

ಇದು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು. ರಾತ್ರಿ ವೇಳೆ ಮೆಂತ್ಯೆ ಎಲೆಗಳನ್ನು ನೀರಿಗೆ ಹಾಕಿಡಿ. ಬೆಳಗ್ಗೆ ಎದ್ದ ಬಳಿಕ ಎಲೆಗಳನ್ನು ತೆಗೆದು ಹಾಗೆ ತಿನ್ನಿ. ಇನ್ನು ಕರುಳು ಕೊಲೆಸ್ಟ್ರಾಲ್ ಹೀರುವಿಕೆಯನ್ನು ಮತ್ತು ಯಕೃತ್ ಕೊಲೆಸ್ಟ್ರಾಲ್ ಉತ್ಪತ್ತಿ ಮಾಡುವುದನ್ನು ಮೆಂತ್ಯೆ ಎಲೆಗಳು ಸುಧಾರಣೆ ಮಾಡುವುದು.

ಟೈಪ್ 1 ಮತ್ತು ಟೈಪ್ 2 ಮಧುಮೇಹ ಹೊಂದಿರುವಂತಹ ಜನರಿಗೆ ಮೆಂತ್ಯೆ ಸೊಪ್ಪು ತುಂಬಾ ಲಾಭಕಾರಿ. ಇದು ಮಧುಮೇಹಿಗಳಲ್ಲದೆ ಇರುವ ಜನರಲ್ಲಿ ಕಾರ್ಬ್ಸ್ ಸೂಕ್ಷ್ಮತೆಯನ್ನು ಸುಧಾರಣೆ ಮಾಡುವುದು. ಮೆಂತ್ಯೆಯು ಇನ್ಸುಲಿನ್ ಚಟುವಟಿಕೆ ಸುಧಾರಣೆ ಮಾಡುವುದು. ಮೆಂತ್ಯೆಯಲ್ಲಿ ಇರುವ ನಾರಿನಾಂಶವು ಇದಕ್ಕೆ ಕಾರಣವಾಗಿದೆ.

ಎಳೆಯ ಮಗುವಿಗೆ ಎದೆಹಾಲು ಮಾತ್ರ ಆಹಾರದ ಮೂಲವಾಗಿರುವುದು. ಎದೆಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ಬೇರೆಲ್ಲೂ ಸಿಗದು. ಮೆಂತ್ಯೆಯು ಬಾಣಂತಿಯರಲ್ಲಿ ಎದೆಹಾಲು ಹೆಚ್ಚು ಮಾಡುವ ಗುಣ ಹೊಂದಿದೆ. ಇದನ್ನು ತರಕಾರಿ ಅಥವಾ ಗಿಡಮೂಲಿಕೆ ಚಾದ ರೂಪದಲ್ಲಿ ಬಳಕೆ ಮಾಡಬಹುದು. ಇದರಿಂದ ಎದೆಹಾಲು ಉತ್ಪತ್ತಿ ವೃದ್ಧಿಸುವುದು. ಇದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು.

ಮ್ಮ ಹಿರಿಯರು, ಪಂಡಿತರು ಮೆಂತ್ಯ ಎಲೆಗಳನ್ನು ಮಧುಮೇಹ, ಮಲಬದ್ಧತೆ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತಿದ್ದಾರೆ. ಹಾಗಾಗಿ ಈ ಲೇಖನದಲ್ಲಿ ತಾಜಾ ಮತ್ತು ಒಣಗಿದ ಮೆಂತ್ಯ ಎಲೆಗಳ ಪ್ರಯೋಜನಗಳನ್ನು ಸವಿವರವಾಗಿ ಕೊಡಲಾಗಿದೆ.

ಮೂಳೆಗಳನ್ನು ಶಕ್ತಿಯುತವಾಗಿಸಲು ಯಾವ ಆಹಾರ ಸೇವಿಸಬೇಕು ಗೊತ್ತಾ?

Follow Us on :-