ನೀರು ದೋಸೆ ಹೀಗೆ ಕಲರ್ ಫುಲ್ ಆಗಿ ಮಾಡಿ

ಮಂಗಳೂರಿನ ನೀರು ದೋಸೆ ಎಂದರೆ ಭಾರೀ ಫೇಮಸ್. ಇದನ್ನು ಮಕ್ಕಳಿಗೂ ಇಷ್ಟವಾಗುವಂತೆ ಸ್ವಲ್ಪ ಮಸಾಲ ಸೇರಿಸಿ ಕಲರ್ ಫುಲ್ ಆಗಿ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲಿಗೆ ದೋಸೆ ಅಕ್ಕಿ ಎರಡು ಲೋಟದಷ್ಟು ನೀರಿನಲ್ಲಿ ನೆನೆ ಹಾಕಿ

ಎರಡು ಗಂಟೆ ನೆನೆದ ಬಳಿಕ ನೀರು ಬಸಿದು ಮಿಕ್ಸಿಗೆ ಹಾಕಿ

ಇದಕ್ಕೆ ಉಪ್ಪು, ಲಿಂಬೆ ಗಾತ್ರದ ಹುಳಿ, ಕೆಂಪುಮೆಣಸು, ಧನಿಯಾ ಕಾಳು ಸೇರಿಸಿ

ಸ್ವಲ್ಪ ಕಾಯಿತುರಿ ಸೇರಿಸಿಕೊಂಡು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಈಗ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ತೆಳುವಾಗುವಷ್ಟು ನೀರು ಹಾಕಿ

ಈಗ ಕಾದ ಕಾವಲಿಗೆಗೆ ಚೆನ್ನಾಗಿ ಎಣ್ಣೆ ಹಚ್ಚಿ ದೋಸೆ ಹುಯ್ದುಕೊಳ್ಳಿ

ಇದು ಬೆಂದಾಗ ಮೇಲಿನಿಂದ ಸ್ವಲ್ಪ ತುಪ್ಪ ಹಾಕಿ ಎಬ್ಬಿಸಿದರೆ ದೋಸೆ ರೆಡಿ

ಹಸಿವಾಸನೆ ಬಾರದಂತೆ ಬೀಟ್ ರೂಟ್ ರಾಯತ ಮಾಡಿ

Follow Us on :-