ಅರಿಶಿನ ಪುಡಿ ಕಲಬೆರಕೆ ಪರೀಕ್ಷೆ ನಡೆಸುವುದು ಹೀಗೆ

ಈಗಿನ ಕಾಲದಲ್ಲಿ ಯಾವ ವಸ್ತುವನ್ನೂ ರಾಸಾಯನಿಕ ಮುಕ್ತವೆಂದು ಹೇಳಲಾಗದು. ಆಹಾರ ಕಲಬೆರಕೆಯೇ ಇಂದು ನಮ್ಮ ಆರೋಗ್ಯ ಹಾಳಾಗಲು ಕಾರಣವಾಗುತ್ತಿದೆ. ಅರಿಶಿನ ಪುಡಿಗೆ ಕೆಮಿಕಲ್ ಮಿಕ್ಸ್ ಆಗಿದೆಯೇ, ಪರಿಶುದ್ಧವಾಗಿದೆಯೇ ಎಂದು ತಿಳಿದುಕೊಳ್ಳಲು ಟಿಪ್ಸ್.

Photo Credit: Social Media

ಮಾರುಕಟ್ಟೆಯಿಂದ ತಂದ ಅರಿಶಿನ ಪುಡಿ ಕಲೆಬೆರಕೆಯಾಗಿದೆಯೇ ಎಂದು ತಿಳಿಯಲು ಕೆಲವು ಮಾರ್ಗಗಳಿವೆ

ಒಂದು ಲೋಟ ನೀರು ತೆಗೆದುಕೊಂಡು ಅದಕ್ಕೆ ಅರಿಶಿನ ಪುಡಿಯನ್ನು ಹಾಕಿಡಿ

ಇದನ್ನು ಸುಮಾರು 10 ರಿಂದ 15 ನಿಮಿಷಗಳ ಕಾಲ ಅಲುಗಾಡದಂತೇ ಹಾಗೇ ಬಿಡಬೇಕು

ಲೋಟದಲ್ಲಿರುವ ನೀರು ಹಳದಿಯಾಗಿ ಪುಡಿ ತಳಭಾಗಕ್ಕೆ ಸೇರಿದತೆ ಅರಶಿನ ಪರಿಶುದ್ಧವಾಗಿದೆ ಎಂದರ್ಥ

ಲೋಟದ ನೀರಿನೊಂದಿಗೇ ಅರಶಿನ ಕರಗಿ ಲೋಟದಲ್ಲಿ ಕಲೆಯಾದರೆ ಮತ್ತು ಪುಡಿ ತೇಲುತ್ತಿದ್ದರೆ ಕಲಬೆರಕೆ ಎಂದರ್ಥ

ಇದಲ್ಲದೇ ಹೋದರೆ ಕೈಗೆ ಕೊಂಚ ಅರಿಶಿನವನ್ನು ಹಾಕಿಕೊಂಡು 10-15 ಸೆಕೆಂಡು ಉಜ್ಜಿಕೊಳ್ಳಿ

ಈಗ ಕೈ ಅರಿಶಿನವಾಗಿದ್ದರೆ ಅದು ಪರಿಶುದ್ಧವಾಗಿದೆ ಎಂದು ಇಲ್ಲದೇ ಹೋದರೆ ಕಲಬೆರಕೆ ಎಂದರ್ಥ

ಮನೆಯಲ್ಲಿ ತಾರಸಿಯಲ್ಲೇ ಲಿಂಬೆ ಗಿಡ ಬೆಳೆಸಲು ಟಿಪ್ಸ್

Follow Us on :-