ಪ್ಲಾಸ್ಟಿಕ್ ಇರಲಿ, ಟಪ್ಪರ್ ವೇರ್ ಇರಲಿ ನೀರಿನ ಬಾಟಲಿ ಕೆಲವು ದಿನ ಉಪಯೋಗಿಸಿದ ಬಳಿಕ ಲೀಕೇಜ್ ಸಮಸ್ಯೆ ಬರುತ್ತದೆ. ಮುಚ್ಚಳ ಲೀಕ್ ಆಗಿ ಬ್ಯಾಗ್ ನಲ್ಲಿಟ್ಟರೆ ಬ್ಯಾಗ್ ಎಲ್ಲಾ ಒದ್ದೆಯಾಗುತ್ತದೆ. ಹಾಗಿದ್ದರೆ ಏನು ಮಾಡಬೇಕು ಇಲ್ಲಿ ನೋಡಿ.
Photo Credit: WD, Freepik
ನೀರಿನ ಬಾಟಲಿ ಕೆಲವು ಸಮಯ ಉಪಯೋಗಿಸಿದ ಬಳಿಕ ಲೀಕ್ ಆಗುವುದು ಸಾಮಾನ್ಯ
ಬಾಟಲಿಯ ಮುಚ್ಚಳ ಲೂಸ್ ಆಗಿದ್ದರೆ ಅಥವಾ ಸಮಸ್ಯೆಯಿದ್ದರೆ ಲೀಕ್ ಆಗಬಹುದು
ಪೇಪರ್ ಕಪ್ ನ್ನು ಮುಚ್ಚಳದ ಒಳಭಾಗದ ಆಕಾರದಲ್ಲಿ ಕತ್ತರಿಸಿಟ್ಟುಕೊಳ್ಳಿ
ಈಗ ಕತ್ತರಿಸಿದ ಪೇಪರ್ ಕಪ್ ಭಾಗವನ್ನು ಮುಚ್ಚಳದ ಒಳಭಾಗದಲ್ಲಿ ಅಂಟಿಸಿ
ಮುಚ್ಚಳ ಲೂಸ್ ಆಗಿ ನೀರು ಸೋರುತ್ತಿದ್ದರೆ ಇದರಿಂದ ಲೀಕೇಜ್ ತಡೆಯಬಹುದು
ಅಗಲವಾದ ಬಾಟಲಿಗೆ ಬಿಸಿ ನೀರು ಹಾಕಿದಾಗ ಒತ್ತಡದಿಂದಾಗಿ ನೀರು ಲೀಕ್ ಆಗುವ ಸಾಧ್ಯತೆಯಿರುತ್ತದೆ
ಬಾಟಲಿಯಲ್ಲಿ ಆದಷ್ಟು ತಣ್ಣಗಿನ ನೀರನ್ನೇ ತುಂಬಿಸಿಟ್ಟುಕೊಳ್ಳುವುದು ಉಚಿತ