ಶುಗರ್ ಫ್ರೀ ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ

ಕ್ಯಾರೆಟ್ ಹಲ್ವಾ ಎಂದರೆ ಸಕ್ಕರೆ ಸುರಿಯಲೇ ಬೇಕು ಎಂದು ನೀವು ಅಂದುಕೊಂಡಿದ್ದರೆ ತಪ್ಪು. ಮಧುಮೇಹಿಗಳೂ ಸೇವನೆ ಮಾಡಬಹುದಾದ ಶುಗರ್ ಫ್ರೀ ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಬಿಸಿ ಮಾಡಿ

ಇದಕ್ಕೆ ಎರಡು ಬೌಲ್ ನಷ್ಟು ಕ್ಯಾರೆಟ್ ತುರಿದು ಹಾಕಿ

ಇದು ಚೆನ್ನಾಗಿ ಫ್ರೈ ಆದ ಮೇಲೆ ಹಾಲು ಹಾಕಿ ಬೇಯಲು ಬಿಡಿ

ಈಗ ಒಂದು ಬೌಲ್ ಗೆ ಎರಡು ಕಪ್ ನಷ್ಟು ಖರ್ಜೂರ ಹಾಕಿ

ಇದಕ್ಕೆ ಬಿಸಿ ಹಾಲು ಹಾಕಿ ಕೆಲವು ಹೊತ್ತು ನೆನೆಸಿಟ್ಟು ರುಬ್ಬಿಕೊಳ್ಳಿ

ಈಗ ಹಾಲಿನಲ್ಲಿ ಕ್ಯಾರೆಟ್ ಬೆಂದಾಗ ಖರ್ಜೂರ ಹಾಕಿ

ಬಳಿಕ ಸ್ವಲ್ಪ ತುಪ್ಪ ಸೇರಿಸಿ ನೀರು ಆರುವವರೆಗೂ ಚೆನ್ನಾಗಿ ಕಲಸಿ

ಎಣ್ಣೆ ಹಾಕದೇ ಪಾಪ್ ಕಾರ್ನ್ ಹೀಗೂ ಮಾಡಬಹುದು

Follow Us on :-