ಮಧುಮೇಹಿಗಳಿಗೆ ಸಲಾಡ್ ನಲ್ಲಿ ಎಲ್ಲಾ ಅಂಶಗಳು ಆರೋಗ್ಯಕ್ಕೆ ಉತ್ತಮವಲ್ಲ. ಹೀಗಾಗಿ ಮಧುಮೇಹಿಗಳ ಆರೋಗ್ಯಕ್ಕೂ ಉತ್ತಮವಾದ ಮೊಳಕೆ ಕಟ್ಟಿದ ಮೆಂತ್ಯ ಸಲಾಡ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.
Photo Credit: Instagram, AI image, X
ಮೊದಲಿಗೆ ಮೆಂತ್ಯ ಮತ್ತು ಹೆಸರು ಕಾಳುಗಳನ್ನು ಚೆನ್ನಾಗಿ ತೊಳೆದು ಮೊಳಕೆ ಕಟ್ಟಿ ಇಟ್ಟುಕೊಳ್ಳಿ
ಮೆಂತ್ಯ ಕಾಳುಗಳು ಮೊಳಕೆ ಕಟ್ಟಿದಾಗ ಕಹಿ ಅಂಶ ಅಷ್ಟೊಂದು ಇರದು
ಮೆಂತ್ಯ ಕಾಳುಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ
ಸ್ವಲ್ಪ ಕ್ಯಾರೆಟ್, ಸೌತೆಕಾಯಿ, ಹಸಿ ಜೋಳ, ಕೊತ್ತಂಬರಿ ಸೊಪ್ಪು, ಕರಿಬೇವು ಚಿಕ್ಕದಾಗಿ ಕತ್ತರಿಸಿಕೊಳ್ಳಿ
ಈಗ ಒಂದು ಬೌಲ್ ನಲ್ಲಿ ತರಕಾರಿಗಳ ಜೊತೆ ಮೊಳಕೆ ಕಾಳುಗಳನ್ನೂ ಸೇರಿಸಿ ಉಪ್ಪು ಹಾಕಿ ಕಲಸಿ
ಈಗ ಇದಕ್ಕೆ ಸ್ವಲ್ಪ ನಿಂಬೆ ರಸ ಹಿಂಡಿದರೆ ರುಚಿಕರ ಮೆಂತ್ಯ ಕಾಳಿನ ಸಲಾಡ್ ಸಿದ್ಧವಾಗುತ್ತದೆ
ಮೆಂತ್ಯ ಕಾಳಿನ ಜೊತೆ ಹೆಸರು ಕಾಳುಗಳನ್ನು ಸೇರಿಸುವುದರಿಂದ ಕಹಿ ರುಚಿ ಗೊತ್ತಾಗದು