ಬ್ಯಾಚುಲರ್ ಗಳೂ ಮಾಡಬಹುದಾದ ಹೀರೇಕಾಯಿ ಸಾಂಬಾರ್
ಹೀರೇಕಾಯಿಯನ್ನು ಬಳಸಿ ಸಿಂಪಲ್ ಆಗಿ ಒಂದು ಸಾಂಬಾರ್ ರೆಸಿಪಿ ಇಲ್ಲಿದೆ. ಇದನ್ನು ಬ್ಯಾಚುಲರ್ ಗಳೂ ಮಾಡಬಹುದು.
Photo Credit: Instagram
ಹೀರೆಕಾಯಿ ನಾರು ತೆಗೆದು ಕತ್ತರಿಸಿಕೊಳ್ಳಿ
ಕುಕ್ಕರ್ ಗೆ ಈ ಹೋಳು, ತೊಳೆದುಕೊಂಡ ತೊಗರಿ ಬೇಳೆ ಹಾಕಿ
ಇದಕ್ಕೆ ಈರುಳ್ಳಿ, ಟೊಮೆಟೊ, ಅರಿಶಿನ ಪೌಡರ್ ನೀರು ಹಾಕಿ ಬೇಯಿಸಿ
ಬೆಂದ ನಂತರ ಸ್ವಲ್ಪ ಸಾಂಬಾರ್ ಪೌಡರ್ ಸೇರಿಸಿ ಚೆನ್ನಾಗಿ ಕುದಿಸಿ
ಈಗ ಇದಕ್ಕೆ ಹುಣಸೆ ಹುಳಿ ನೀರನ್ನೂ ಸೇರಿಸಿಕೊಳ್ಳಿ
ಈಗ ರುಚಿಗೆ ಬೇಕಾಗುವಷ್ಟು ಉಪ್ಪು ಸೇರಿಸಿ, ಕೊತ್ತಂಬರಿ ಸೊಪ್ಪು ಹಾಕಿ
ಕೊನೆಯಲ್ಲಿ ಬೆಳ್ಳುಳ್ಳಿ, ಸಾಸಿವೆ, ಮೆಣಸು, ಕರಿಬೇವಿನ ಒಗ್ಗರಣೆ ಕೊಡಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.
lifestyle
ನಿಂಬೆಹಣ್ಣಿನ ಚಟ್ನಿ ಮಾಡುವುದು ಹೇಗೆ ಗೊತ್ತಾ
Follow Us on :-
ನಿಂಬೆಹಣ್ಣಿನ ಚಟ್ನಿ ಮಾಡುವುದು ಹೇಗೆ ಗೊತ್ತಾ