ಗೋಧಿ, ಮೈದಾ ಹಿಟ್ಟಿಲ್ಲದೇ ಪೂರಿ ಮಾಡುವುದು ಹೇಗೆ

ಗೋಧಿ ಹಿಟ್ಟು, ಮೈದಾ ಹಿಟ್ಟು ಇಲ್ಲದೇ ಆರೋಗ್ಯಕರ ಮತ್ತು ರುಚಿಕರವಾದ ಪೂರಿ ಮಾಡಬಹುದು. ದೋಸೆ ಅಕ್ಕಿ ಬಳಸಿ ಪೂರಿ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಸ್ವಲ್ಪ ದೋಸೆ ಅಕ್ಕಿ ನೆನೆ ಹಾಕಿಡಿ

ಸ್ವಲ್ಪ ಕಾಯಿತುರಿ, ಶುಂಠಿ, ಉಪ್ಪು, ನೆನೆಸಿದ ಅಕ್ಕಿ, ಕರಿಬೇವು ಸೇರಿಸಿ ರುಬ್ಬಿಕೊಳ್ಳಿ

ರೊಟ್ಟಿ ಹಿಟ್ಟಿನಷ್ಟು ದಪ್ಪ ಹಿಟ್ಟಾಗಿರಬೇಕು

ಈಗ ಇದನ್ನು ಮಧ್ಯಮ ಗಾತ್ರದಲ್ಲಿ ಉಂಡೆ ಕಟ್ಟಿಕೊಳ್ಳಿ

ಒದ್ದೆ ಬಟ್ಟೆ ಮೇಲೆ ಉಂಡೆಯನ್ನು ಪೂರಿ ಆಕಾರಕ್ಕೆ ತಟ್ಟಿಕೊಳ್ಳಿ

ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಮಧ್ಯಮ ಉರಿಯಲ್ಲಿ ಇದನ್ನು ಬೇಯಿಸಿ

ಇದು ಪೂರಿಯಂತೆ ಉಬ್ಬಿ ಬರುವಂತೆ ಕರಿದರೆ ಅಕ್ಕಿ ಪೂರಿ ರೆಡಿ

ಮಾವಿನ ಹಣ್ಣಿನ ಸಿಂಪಲ್ ಕೇಕ್ ರೆಸಿಪಿ

Follow Us on :-