ಪಾಲಕ್ ಸೊಪ್ಪಿನ ರುಚಿಕರ ತಂಬುಳಿ

ಈ ಬಿಸಿಲಿನ ವಾತಾವರಣದಲ್ಲಿ ಅನ್ನದ ಜೊತೆ ಸೇವಿಸಲು ರುಚಿಯಾದ ತಂಬುಳಿ ಇದ್ದರೆ ಆರೋಗ್ಯಕ್ಕೂ ಉತ್ತಮ. ಪಾಲಕ್ ಸೊಪ್ಪಿನ ರುಚಿಕರ ತಂಬುಳಿ ಮಾಡುವುದು ಹೇಗೆ ನೋಡಿ.

Photo Credit: Instagram

ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಕತ್ತರಿಸಿಟ್ಟುಕೊಳ್ಳಿ

ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಜೀರಿಗೆ ಹಸಿಮೆಣಸು ಫ್ರೈ ಮಾಡಿ

ಇದು ಫ್ರೈ ಆದ ಮೇಲೆ ಪಾಲಕ್ ಸೊಪ್ಪು ಸೇರಿಸಿ ಬಾಡಿಸಿಕೊಳ್ಳಿ

ಮಿಕ್ಸಿ ಜಾರಿಗೆ ಅರ್ಧ ಕಪ್ ಕಾಯಿತುರಿ ಹಾಕಿ

ಇದಕ್ಕೆ ಫ್ರೈ ಮಾಡಿಕೊಂಡ ಮಸಾಲೆ ರುಚಿಗೆ ತಕ್ಕ ಉಪ್ಪು ಸೇರಿಸಿ

ಇದನ್ನು ನುಣ್ಣಗೆ ರುಬ್ಬಿಕೊಂಡ ಬಳಿಕ ಒಂದು ಸೌಟು ಮೊಸರು ಸೇರಿಸಿ

ಈಗ ಇದಕ್ಕೆ ಸಾಸಿವೆ, ಮೆಣಸು, ಕರಿಬೇವು ಹಾಕಿದ ಒಗ್ಗರಣೆ ಕೊಡಿ

ಟೇಸ್ಟಿ ಬಾದಾಮ್ ಮಿಲ್ಕ್ ಮಾಡುವ ವಿಧಾನ

Follow Us on :-