ಪಾಲಕ್ ಸೊಪ್ಪು ಬಳಸಿ ಪುಟಾಣಿ ದೋಸೆ ಮಾಡಿ

ಮಕ್ಕಳು ಪಾಲಕ್ ಸೊಪ್ಪು ತಿನ್ನದೇ ಇದ್ದರೆ ರುಚಿಕರವಾಗಿ ದೋಸೆ ಮಾಡಿಕೊಡಬಹುದು. ಪಾಲಕ್ ಸೊಪ್ಪು, ಉಳಿದ ಅನ್ನ ಸೇರಿಸಿ ಪುಟಾಣಿ ದೋಸೆ ಮಾಡುವುದು ಹೇಗೆ ನೋಡಿ.

Photo Credit: Instagram

ಒಂದು ಬೌಲ್ ಗೆ ಒಂದು ಬೌಲ್ ರವೆ ಹಾಕಿ ಹಾಕಿ

ಮಿಕ್ಸಿ ಜಾರ್ ನಲ್ಲಿ ಉಳಿದ ಅನ್ನ, ಕೊತ್ತಂಬರಿ ಸೊಪ್ಪು, ಪಾಲಕ್ ಸೊಪ್ಪು, ಶುಂಠಿ ಹಾಕಿ

ಇದನ್ನು ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ಮಾಡಿ

ಈಗ ರವೆ ಹಾಕಿರುವ ಬೌಲ್ ಗೆ ಇದನ್ನು ಹಾಕಿ ಎರಡು ಸ್ಪೂನ್ ಮೊಸರು ಸೇರಿಸಿ

ಈಗ ಉದ್ದಿನ ಬೇಳೆ, ಜೀರಿಗೆ, ಕರಿಬೇವು ಒಗ್ಗರಣೆ ಕೊಡಿ

ಉದ್ದಿನ ದೋಸೆಯಷ್ಟು ದಪ್ಪ ಹಿಟ್ಟು ಮಾಡಿ ಈರುಳ್ಳಿ, ಉಪ್ಪು ಸೇರಿಸಿ

ಈಗ ಇದನ್ನು ತವಾದಲ್ಲಿ ಪುಟಾಣಿ ಸೆಟ್ ದೋಸೆಯಂತೆ ಹುಯ್ದರೆ ದೋಸೆ ರೆಡಿ

ಸಕ್ಕರೆ, ಬೆಲ್ಲ ಬಳಸದೇ ಐಸ್ ಕ್ರೀಂ ಮಾಡುವುದು ಹೇಗೆ

Follow Us on :-