ಮನೆಯಲ್ಲೇ ಮಸಾಲ್ ಪುರಿ ಮಾಡುವ ವಿಧಾನ

ಮಸಾಲ್ ಪುರಿ ಎಂದರೆ ಯಾರಿಗೆ ಇಷ್ಟವಿಲ್ಲ. ಮಸಾಲ್ ಪುರಿಯನ್ನು ಮನೆಯಲ್ಲಿಯೇ ಆರೋಗ್ಯಕರವಾಗಿ ಮಾಡಿ ಸೇವನೆ ಮಾಡಬಹುದು. ಇದಕ್ಕೆ ಏನೆಲ್ಲಾ ಬೇಕಾಗುತ್ತದೆ, ಮಾಡುವುದು ಹೇಗೆ ನೋಡಿ.

Photo Credit: Instagram, WD

ಮೊದಲಿಗೆ ಕುಕ್ಕರ್ ನಲ್ಲಿ ಆಲೂಗಡ್ಡೆ, ಬಟಾಣಿ ಬೇಯಿಸಿಕೊಳ್ಳಿ

ಬಾಣಲೆಯಲ್ಲಿ ಜಾಯಿಕಾಯಿ, ಕಾಳುಮೆಣಸು, ಧನಿಯಾ, ಜೀರಿಗೆ, ಒಣ ಮೆಣಸು ಹಾಕಿ ಹುರಿಯಿರಿ

ಈಗ ಇದಕ್ಕೆ ಕಾಯಿತುರಿ ಸೇರಿಸಿ ಸ್ವಲ್ಪ ಬಿಸಿ ಮಾಡಿ ಮಿಕ್ಸಿಗೆ ಹಾಕಿ

ಈ ಮಸಾಲೆಗೆ ಒಂದು ಬೇಯಿಸಿದ ಆಲೂಗಡ್ಡೆ, ಹಸಿ ಟೊಮೆಟೊ ಮತ್ತು ಈರುಳ್ಳಿ ಸೇರಿಸಿ ರುಬ್ಬಿ

ಈಗ ಈ ಮಿಶ್ರಣವನ್ನು ಸ್ವಲ್ಪ ನೀರು, ಬೇಯಿಸಿದ ಬಟಾಣಿ ಸೇರಿಸಿ ಚೆನ್ನಾಗಿ ಕುದಿಸಿದರೆ ಮಸಾಲೆ ರೆಡಿ

ಈಗ ಚಪಾತಿ ಹಿಟ್ಟಿನ್ನು ಚಿಕ್ಕದಾಗಿ ಕತ್ತರಿಸಿ ಹುರಿದು ತುಕ್ಕುಡಿ ಮಾಡಿಕೊಳ್ಳಿ

ಈಗ ಒಂದು ಪ್ಲೇಟ್ ಮೇಲೆ ತುಕ್ಕುಡಿ ಪುಡಿ ಮಾಡಿ, ಅದರ ಮೇಲೆ ಮಸಾಲೆಯನ್ನು ಹಾಕಿ

ಇದಕ್ಕೆ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು, ಚ್ಯಾಟ್ ಮಸಾಲೆ, ಸೇಮಿ ಸೇರಿಸಿದರೆ ಮಸಾಲ್ ಪುರಿ ರೆಡಿ

ಅಕ್ಕಿ ಹಾಳಾಗದಂತೆ ಸಂರಕ್ಷಿಸಿಡುವ ಕ್ರಮ

Follow Us on :-