ಅದ್ಭುತ ರುಚಿಯ ಕೇರಳ ಸ್ಟೈಲ್ ಪುಳಿಶ್ಶೇರಿ

ಕೇರಳ ಶೈಲಿಯ ಅದ್ಭುತ ರುಚಿಯ ಪುಳಿಶ್ಶೇರಿ ಮಾಡುವುದು ಹೇಗೆ ನೋಡಿ. ಇದು ಅನ್ನಕ್ಕೆ ಅದರಲ್ಲೂ ಕುಚ್ಚಿಲಕ್ಕಿ ಅನ್ನಕ್ಕೆ ಸೂಪರ್ ಕಾಂಬಿನೇಷನ್.

Photo Credit: Instagram

ಮೊದಲು ಸುವರ್ಣಗಡ್ಡೆ ಅಥವಾ ಬಾಳೆಕಾಯಿ ಹೋಳು ಮಾಡಿ

ಈಗ ಇದನ್ನು ಒಂದು ಪಾತ್ರೆಗೆ ಹಾಕಿ ಅರಿಶಿನ, ಉಪ್ಪು ಹಾಕಿ ಬೇಯಲು ಇಡಿ

ಸ್ವಲ್ಪ ಕಾಯಿತುರಿ, ಎರಡು ಹಸಿಮೆಣಸು, ಈರುಳ್ಳಿ, ಶುಂಠಿ ತೆಗೆದುಕೊಳ್ಳಿ

ಇದನ್ನು ಒಂದು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಈಗ ಹೋಳುಗಳು ಬೆಂದಿದ್ದರೆ ಅದಕ್ಕೆ ಮಜ್ಜಿಗೆ, ಈ ಮಸಾಲ ಸೇರಿಸಿಕೊಳ್ಳಿ

ಈಗ ಇದು ಚೆನ್ನಾಗಿ ಕುದಿಯಲು ಬಿಡಬೇಕು

ಬಳಿಕ ಸಾಸಿವೆ, ಮೆಣಸು, ಕರಿಬೇವಿನ ಒಗ್ಗರಣೆ ಕೊಟ್ಟರೆ ಪುಳಿಶ್ಶೇರಿ ರೆಡಿ

ಅದ್ಭುತ ರುಚಿಯ ಕೇರಳ ಸ್ಟೈಲ್ ಪುಳಿಶ್ಶೇರಿ

Follow Us on :-