ಕೇರಳ ಸ್ಟೈಲ್ ಆಪಂ ದೋಸೆ ಮಾಡುವ ವಿಧಾನ

ಕೇರಳ ಸ್ಟೈಲ್ ನಲ್ಲಿ ಮಾಡುವ ಆಪಂ ಎನ್ನುವ ದಪ್ಪ ಸೈಝ್ ನ ದೋಸೆ ಬ್ರೇಕ್ ಫಾಸ್ಟ್ ಗೆ ಹೇಳಿ ಮಾಡಿಸಿದ ತಿಂಡಿ. ಇದನ್ನು ದಿಡೀರ್ ಆಗಿ ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಒಂದು ಮಿಕ್ಸಿ ಜಾರ್ ಗೆ ಒಂದು ಬೌಲ್ ಅಕ್ಕಿ ಹಿಟ್ಟು ಹಾಕಿ

ಇದಕ್ಕೆ ಅರ್ಧ ಕಪ್ ಅನ್ನ, ರುಚಿಗೆ ತಕ್ಕ ಉಪ್ಪು, ಈಸ್ಟ್ ಸೇರಿಸಿಕೊಳ್ಳಿ

ಈಗ ಒಂದು ಕಪ್ ನೀರು ಸೇರಿಸಿ ಇವಿಷ್ಟನ್ನೂ ಒಂದು ರೌಂಡ್ ರುಬ್ಬಿಕೊಳ್ಳಿ

ಬಳಿಕ ಅರ್ಧಗಂಟೆಗಳಷ್ಟು ಕಾಲ ಪಾತ್ರೆ ಮುಚ್ಚಿಡಿ

ಈಗ ಹಿಟ್ಟು ಚೆನ್ನಾಗಿ ಹುದುಗಿ ಬಂದಿರುತ್ತದೆ

ಈಗ ಇದನ್ನು ಒಂದು ತವಾದಲ್ಲಿ ದಪ್ಪ ಮಾಡಿ ಹುಯ್ದು ಬೇಯಿಸಿ

ಈಗ ಕಣ್ಣು ಕಣ್ಣು ಬಿಟ್ಟ ಮೃದುವಾದ ಕೇರಳ ಆಪಂ ದೋಸೆ ರೆಡಿಯಾಗಿರುತ್ತದೆ

ದಿಡೀರ್ ಆಗಿ ರಾಗಿ ಇಡ್ಲಿ ಮಾಡುವ ವಿಧಾನ

Follow Us on :-